ಕಡಬ: ಬೈಕ್-ಆಂಬ್ಯುಲೆನ್ಸ್ ಢಿಕ್ಕಿ ► ಓರ್ವ ಗಂಭೀರ – ಸವಾರನಿಗೆ ಗಾಯ



(ನ್ಯೂಸ್ ಕಡಬ) newskadaba.com ಕಡಬ, ಆ.01. ಇಲ್ಲಿನ ಪಂಜ ರಸ್ತೆಯ ಅಜ್ಜಿಕಟ್ಟೆ ಎಂಬಲ್ಲಿ ಸೇರಿದ ಆಂಬ್ಯುಲೆನ್ಸ್ ಹಾಗೂ ಬೈಕ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಸವಾರರಿಬ್ಬರು ಗಾಯಗೊಂಡ ಘಟನೆ ಮಂಗಳವಾರ ಸಂಜೆ ನಡೆದಿದೆ.





ಗಾಯಾಳುಗಳನ್ನು 102 ನೇ ನೆಕ್ಕಿಲಾಡಿ ಗ್ರಾಮದ N.Coop ನಿವಾಸಿಗಳಾದ ವಿಶ್ವನಾಥ್(18) ಹಾಗೂ ಅಲಗರಾಜ್(48) ಎಂದು ಗುರುತಿಸಲಾಗಿದೆ. ಅಲಗರಾಜ್ ರವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಕಡಬದಿಂದ ಕೋಡಿಂಬಾಳ ಕಡೆಗೆ ತೆರಳುತ್ತಿದ್ದ ಬೈಕಿಗೆ ಕಡಬಕ್ಕೆ ಆಗಮಿಸುತ್ತಿದ್ದ ಕರ್ನಾಟಕ ರಾಜ್ಯ ರಬ್ಬರ್ ಅಭಿವೃದ್ಧಿ ನಿಗಮಕ್ಕೆ ಸೇರಿದ ತೂಫಾನ್ ಆಂಬ್ಯುಲೆನ್ಸ್ ಢಿಕ್ಕಿಯಾದುದರಿಂದ ಈ ಘಟನೆ ಸಂಭವಿಸಿದೆ. ಗಾಯಾಳುಗಳನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಡಬ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.






error: Content is protected !!
Scroll to Top