➤➤ Breaking News ಕೊನೆಗೂ ಕಡಬ ತಾಲೂಕು ಉದ್ಘಾಟನೆಗೆ ಮುಹೂರ್ತ ಫಿಕ್ಸ್ ➤ ಮಾರ್ಚ್ 01 ರಂದು ಕಡಬ, ಮೂಡುಬಿದಿರೆ ನೂತನ ತಾಲೂಕುಗಳಿಗೆ ಅಧಿಕೃತ ಚಾಲನೆ

(ನ್ಯೂಸ್ ಕಡಬ) newskadaba.com ಕಡಬ, ಫೆ.20. ನೂತನ ತಾಲೂಕಾಗಿ ಘೋಷಣೆಯಾಗಿರುವ ಕಡಬ ಹಾಗೂ ಮೂಡುಬಿದಿರೆ ತಾಲೂಕುಗಳ ಅಧಿಕೃತ ಉದ್ಘಾಟನೆಯನ್ನು ಮಾರ್ಚ್ 01 ರಂದು ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

 

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್,
ರಾಜ್ಯದ ಕಂದಾಯ ಸಚಿವರಾದ ಆರ್.ವಿ‌.ದೇಶಪಾಂಡೆ ನೂತನ ಕಡಬ ಹಾಗೂ ಮೂಡಬಿದಿರೆ ತಾಲೂಕುಗಳನ್ನು ಉದ್ಘಾಟಿಸಲಿದ್ದಾರೆ ಎಂದರು. ಅದೇ ದಿನ ಸಂಜೆ ಮಂಗಳೂರಿನಲ್ಲಿ ಕಂದಾಯ ಸಚಿವರಿಂದ ಜಿಲ್ಲಾ ಮಟ್ಟದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಲಿದೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

Also Read  ಕಡಬದ ಮೃತ ಬಾಲೆಯ ಹೆಸರಲ್ಲಿ ಕಲೆಕ್ಷನ್ ಮಾಡಿ ಸಿಕ್ಕಿಬಿದ್ದ ಭೂಪ ► ಬಡ ಮಕ್ಕಳ ಚಿಕಿತ್ಸೆಗೆ ನೆರವು ನೀಡುವಾಗ ಎಚ್ಚರವಿರಲಿ

 

ದಿನಾಂಕ ನಿಗದಿಯಾಗಿ ಹಲವು ಬಾರಿ ಕೊನೆಯ ಕ್ಷಣದಲ್ಲಿ ತಾಲೂಕು ಉದ್ಘಾಟನಾ ಭಾಗ್ಯದಿಂದ ವಂಚಿತವಾಗಿದ್ದ ಕಡಬ ಹಾಗೂ ಮೂಡುಬಿದಿರೆ ತಾಲ್ಲೂಕುಗಳು ಈ ಬಾರಿಯಾದರೂ ಅಧಿಕೃತವಾಗಿ ಉದ್ಘಾಟನೆಯಾಗುವುದೇ ಎಂದು ಕಾದು ನೋಡಬೇಕಾಗಿದೆ. ಸುದ್ದಿಗೋಷ್ಠಿಯಲ್ಲಿ ಶಾಸಕ ಹರೀಶ್ ಕುಮಾರ್, ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು, ಕಾಂಗ್ರೆಸ್ ಮುಖಂಡ ಕಣಚೂರು ಮೋನು ಮೊದಲಾದವರು ಉಪಸ್ಥಿತರಿದ್ದರು.

error: Content is protected !!
Scroll to Top