ಸರಸ್ವತೀ ವಿದ್ಯಾಲಯ ಕಡಬ ರಥಸಪ್ತಮಿ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.comಕಡಬ,ಫೆ.12. ರಥಸಪ್ತಮಿ ಕಾರ್ಯಕ್ರಮವನ್ನುದಿನಾಂಕ 12.02.2019ನೇ ಮಂಗಳವಾರದಂದು  ಸರಸ್ವತೀ ಸಮೂಹ ಸಂಸ್ಥೆಯಲ್ಲಿ ಆಚರಣೆ ಮಾಡಲಾಯಿತು. ಈ ಕಾರ್ಯಕ್ರಮದ ಮಹತ್ವವನ್ನು ಶ್ರೀ ಮಹೇಶ್ ನಿಟಿಲಾಪುರ ಇವರು “ಭೂಮಿಗೆ ಬೆಳಕನ್ನೂ ಜೀವರಾಶಿಗಳಿಗೆ ಚೈತನ್ಯವನ್ನೂ ನೀಡುವ ಸೂರ್ಯನ ಉತ್ತರಾಯಣದ ಚಲಿಸುವ ಪರ್ವ”. ಎಂದು ತಿಳಿಸಿದರು.

ಅಧ್ಯಕ್ಷತೆಯನ್ನು ಶ್ರೀಮತಿ ಪ್ರಮೀಳಾ ಲೋಕೇಶ್ ನಿರ್ದೇಶಕರು ಸರಸ್ವತೀ ಸಮೂಹ ಸಂಸ್ಥೆ ಕಡಬ ಇವರು ವಹಿಸಿದರು. ಮುಖ್ಯ ಅತಿಥಿಯಾಗಿ ಶ್ರೀ ಪ್ರಶಾಂತ್ ಆಚಾರ್ಯ ಶ್ರೀದೇವಿ ಜುವ್ಯೆಲರಿ ಕಡಬ. ದಿವ್ಯ ಉಪಸ್ಥಿತಿಯಲ್ಲಿ ಸಂಚಾಲಕರು ಶ್ರೀ ವೆಂಕಟರಮಣ ರಾವ್ ಮಂಕುಡೆ. ಹಾಗೂ ವೇದಿಕೆಯಲ್ಲಿ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯರು ಮಾಧವ ಕೆ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶ್ರೀಮತಿ ಶೈಲಶ್ರೀ ಸ್ವಾಗತಿಸಿ, ಶ್ರೀ ಗಿರೀಶ್ ಗೌಡ ಸಿ ವಂದಿಸಿ, ಕುಮಾರಿ ಅಪೂರ್ವ ಕಾರ್ಯಕ್ರಮವನ್ನೂ ನಿರೂಪಿಸಿದರು.

Also Read  ’ಬಿಜೆಪಿ ಸರ್ಕಾರ ತೆಗೆಯುವ ಉದ್ದೇಶ ಹೊಂದಿಲ್ಲ’- ಸಚಿವ ಪ್ರಹ್ಲಾದ್ ಜೋಷಿ 

error: Content is protected !!
Scroll to Top