ಕಡಬ: ಸರಸ್ವತೀ ವಿದ್ಯಾಲಯ ಸಾಮರಸ್ಯ ಭೋಜನ

(ನ್ಯೂಸ್ ಕಡಬ) newskadaba.comಕಡಬ,ಫೆ.12.ಕಡಬ ಸರಸ್ವತೀ ವಿದ್ಯಾಲಯ ಸಾಮರಸ್ಯ ದಿನಾಚರಣೆ ಅಂಗವಾಗಿ ಸಾಮರಸ್ಯ ಭೋಜನ ನಡೆಯಿತು. ಗ್ರಾಮ ವಿಕಾಸ ಸಾಮರಸ್ಯ ವಿಭಾಗ ಪುತ್ತೂರು ಜಿಲ್ಲಾ ಸಂಚಾಲಕ ಉಮೇಶ್ ವೇಣೂರು ಮಾತನಾಡಿ, ಜಾತಿ, ಮತಗಳ ಭೇದವಿಲ್ಲದೇ ಪರೋಪಕಾರಿಯಾಗಿ ಬಾಳಬೇಕು ಆಗ ಸಮಾಜ ನಮ್ಮನ್ನು ಗುರುತಿಸುತ್ತದೆ. ಜಾತಿಗಳ ಒಗ್ಗಟ್ಟು ಸಮಾಜದ ಆರೋಗ್ಯಕರ ಬೆಳವಣಿಗೆಗೆ ಪೂರಕವಾಗಿರಬೇಕು ಹೊರತು ಜಾತಿಗಳ ನಡುವೆ ಕಂದಕಕ್ಕೆ ಎಡೆಮಾಡಿ ಕೊಡಬಾರದು ಎಂದರು.

ಕಡಬ ಗ್ರಾಮ ಪಂಚಾಯಿತಿ ಸದಸ್ಯೆ ಕಾರ್ಯಕ್ರಮ ಉದ್ಘಾಟಿಸಿ, ಅದ್ಯಕ್ಷತೆ ವಹಿಸಿ ಶುಭಹಾರೈಸಿದರು. ಶಾಲಾ ಸಂಚಾಲಕ ವೆಂಕಟ್ರಮಣ ರಾವ್ ಮಂಕುಡೆ ಪ್ರಾಸ್ತಾವಿಸಿ ಸ್ವಾಗತಿಸಿದರು. ಕೋಶಾಧಿಕಾರಿ ಲಿಂಗಪ್ಪ ಜೆ ವಂದಿಸಿದರು. ವಸಂತಿ ಜೆ ನಿರೂಪಿಸಿದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯರು, ಶಾಲಾ ಎಲ್ಲಾ ವಿಭಾಗದ ಮುಖ್ಯಸ್ಥರು, ಪೋಷಕ ವೃಂದ, ಅಧ್ಯಾಪಕ ವೃಂದ, ವಿದ್ಯಾರ್ಥಿ ವೃಂದ ಎಲ್ಲಾ ಪೋಷಕರು ತಮ್ಮ ಮನೆಯಲ್ಲಿ ತಯಾರಿಸಿದ ಆಹಾರ ಪದಾರ್ಥಗಳನ್ನು ಹಂಚಿ ಸಾಮರಸ್ಯವಾಗಿ ಮಧ್ಯಾಹ್ನದ ಭೋಜನ ನಡೆಸಲಾಯಿತು.

Also Read  ಪುತ್ತೂರು: ಆಸ್ಮಿಕವಾಗಿ ಬಾವಿಗೆ ಬಿದ್ದ ವೃದ್ಧೆ ➤ ಅಗ್ನಿಶಾಮಕ ದಳದಿಂದ ರಕ್ಷಣೆ

error: Content is protected !!
Scroll to Top