ಕಡಬ ಸಂತ ಪೌಲರ ಸೀರೋ ಮಲಂಕರ ಕಥೋಲಿಕ್ ದೇವಾಲಯದ ವಾರ್ಷಿಕ ಹಬ್ಬ ಸಮಾಪನ ➤ ನಾವು ಏಸು ಕ್ರಿಸ್ತರ ಪ್ರತಿರೂಪವಾಗಬೇಕು-ಫಾ| ರೊನಾಲ್ಡ್ ಲೋಬೊ

(ನ್ಯೂಸ್ ಕಡಬ) newskadaba.comಕಡಬ,ಫೆ.12. ನಾವು ಏಸು ಕ್ರಿಸ್ತರ ಅನುಯಾಯಿ ಮಾತ್ರ ಆಗದೆ ಅವರ ಪ್ರತಿರೂಪವಾಗಬೇಕು ಎಂದು ಕಡಬ ಸಂತ ಜೋಕಿಮರ ಚರ್ಚಿನ ಧರ್ಮಗುರು ಫಾ| ರೊನಾಲ್ಡ್ ಲೋಬೊ ಹೇಳಿದರು. ಸಂತ ಪೌಲರ ಸೀರೋ ಮಲಂಕರ ಕಥೋಲಿಕ್ ದೇವಾಲಯದ ವಾರ್ಷಿಕ ಹಬ್ಬದ ಮೆರವಣಿಗೆ ಬಳಿಕ ಕಡಬ ಸಂತ ಜೋಕಿಮರ ಚರ್ಚ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಸಂತ ಪೌಲರು ಏಸು ಕ್ರಿಸ್ತರ ಕಟ್ಟಾ ಅನುಯಾಯಿಯಾಗಿದ್ದರು, ಅವರ ಆದರ್ಶ ನಡೆ ನುಡಿಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

 

ಬೆಳಿಗ್ಗೆ ದೇವಾಲಯದಲ್ಲಿ ಪ್ರಭಾತ ಪ್ರಾರ್ಥನೆ ಬಳಿಕ ದೇವಾಲಯದ ವಿಕಾರ್ ಮೋಣ್ ಡಾ| ಎಲ್ದೋ ಪುತ್ತನ್ ಕಂಡತ್ತಿಲ್ ಅವರಿಂದ ಸುವಾರ್ತ ಪ್ರವಚನ ನಡೆಯಿತು. ಬಳಿಕ ಮೆರವಣಿಗೆ, ಸಮಾಪನ ಆರ್ಶೀರ್ವಾದ ನಡೆಯಿತು.ಚರ್ಚಿನ ವಾರ್ಷಿಕ ಜಾತ್ರೋತ್ಸವಕ್ಕೆ ಕೋಡಿಂಬಾಳ ಚರ್ಚಿನ ಧರ್ಮಗುರು ಮ್ಯಾಥ್ಯೂ ವಾಯಕ್ಕಪಾರ, ಜೋಸ್‍ಗಿರಿ ಚರ್ಚಿನ ಫಾ ಜಾನ್ ಕುನ್ನತ್ ಕರ್ಮಾಯಿ, ಕರ್ಮಾಯಿ ಚರ್ಚಿನ ಫಾ ಡೇನಿಯಲ್, ವಿಮಲಗಿರಿ ಚರ್ಚಿನ ಫಾ. ಪೀಟರ್ ಜಾನ್ ಒ.ಐ.ಸಿ, ಇಚ್ಲಂಪಾಡಿ ಚರ್ಚಿನ ಫಾ ಬಿಜೋಯ್, ಹೆಬ್ರಿ ಚರ್ಚಿನ ಫಾ. ಬರ್ಸೊಮ, ನೂಜಿಬಾಳ್ತಿಲದ ಫಾ. ಸಕರಿಯಾಸ್ ನಂದಿಯಾಟ್, ಕುಂತೂರು ಚರ್ಚಿನ ಫಾ. ರೋಯಿ ಮಾರ್ಟಿಸ್, ಪುತ್ತೂರು ಚರ್ಚಿನ ಫಾ. ತೋಮಸ್, ಫಾ. ಕುರಿಯಕೋಸ್ ಕವನಾಟಿಲ್, ಕೋರ್ ಎಪಿಸ್ಕೋಪ ಮಾಣಿ ಚೆಂಬಿತ್ತನಮ್, ಫಾ. ಕುರಿಯಕೋಸ್ ವೆಟ್ಟಿಕುಯಿ ಹಾಗೂ ವಿವಿಧ ಕಾನ್ವೆಂಟ್‍ನ ಭಗಿನಿಯರು ಉಪಸ್ಥಿತರಿದ್ದರು.

Also Read  ಕಡಬ ಸಿಎ ಬ್ಯಾಂಕ್‍ನ ಕೊಣಾಜೆ ಶಾಖೆಗೆ ಮಠಂದೂರು ಭೇಟಿ

error: Content is protected !!
Scroll to Top