ಅಬುದಾಬಿಯಲ್ಲಿ ನಡೆಯಲಿರುವ ವಲ್ಡ್ ಸ್ಪೇಷಲ್ ಓಲಂಪಿಕ್ಸ್ ➤ ಮರ್ದಾಳ ಭೆಥನಿ ವಿಶೇಷ ಶಾಲೆಯ ದಿವ್ಯಾ ಆಯ್ಕೆ ರಾಜ್ಯದ ಏಕೈಕ ಮಹಿಳಾ ಆಟಗಾರ್ತಿ

(ನ್ಯೂಸ್ ಕಡಬ) newskadaba.comಕಡಬ,ಫೆ.12. ಮಾ.2019ರಲ್ಲಿ ಅಬುದಾಬಿಯಲ್ಲಿ ನಡೆಯಲಿರುವ ವಿಶೇಷ ವಿಶ್ವ ಓಲಂಪಿಕ್ಸ್‍ಗೆ ಮರ್ದಾಳ ಜೀವನ್ ಜ್ಯೋತಿ ವಿಶೇಷ ಶಾಲಾ ವಿದ್ಯಾರ್ಥಿನಿ ದಿವ್ಯಾ ವಾಲಿಬಾಲ್ ಆಟಗಾರ್ತಿಯಾಗಿ ರಾಷ್ಟ್ರವನ್ನು ಪ್ರತಿನಿಧಿಸಲಿದ್ದಾರೆ.

ಸುಮಾರು 170 ದೇಶಗಳು ಭಾಗವಹಿಸಲಿದ್ದು ದಿವ್ಯಾರವರು ಗುಜರಾತ್‍ನಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಬಳಿಕ ರಾಜಸ್ಥಾನ, ಪಶ್ಚಿಮ ಬಂಗಾಳ, ಮತ್ತು ಗುಜರಾತ್ ಗಾಂಧಿನಗರದಲ್ಲಿ ನಡೆದ ರಾಷ್ಟ್ರ ಮಟ್ಟದ ತರಬೇತಿ ಮತ್ತು ಆಯ್ಕೆ ಶಿಬಿರಗಳಲ್ಲಿ ಭಾಗವಹಿಸಿ ತಂಡದ ಪ್ರಮುಖ ಆಟಗಾರ್ತಿಯಾಗಿ ಆಯ್ಕೆಯಾಗಿದ್ದಾರೆ. ಇವರು ಕೊಣಾಜೆ ಬೆತ್ತೋಡಿಯ ಪ್ರೇಮಾ ಮತ್ತು ರಘುನಾಥ ರೈಯವರ ಪುತ್ರಿಯಾಗಿದ್ದು ಇವರಿಗೆ ರಾಜ್ಯ ಮತ್ತು ಶಾಲಾ ಕ್ರೀಡಾ ತರಬೇತುದಾರ ಪ್ರಭಾಕರ ಮರ್ಕಂಜ ಮತ್ತು ಫಾ| ವಿಜೋಯ್ ಹಾಗೂ ಶಾಲಾ ಶಿಕ್ಷಕರು ಮಾರ್ಗದರ್ಶನ ನೀಡಿದ್ದಾರೆ.

Also Read  ಲಕ್ಷದ್ವೀಪಕ್ಕೆ ತೆರಳಿದ ಹಡಗು ನೀರುಪಾಲು ► ಆರು ಸಿಬ್ಬಂದಿಗಳ ರಕ್ಷಣೆ

error: Content is protected !!
Scroll to Top