(ನ್ಯೂಸ್ ಕಡಬ) newskadaba.comಬಿಳಿನೆಲೆ, ಫೆ.12. ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಉಜ್ವಲ ಯೋಜನೆಯಡಿ ಉಚಿತ ಅನಿಲ ವಿತರಣೆ ಕಾರ್ಯಕ್ರಮ ಬಿಳಿನೆಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಭಾನುವಾರ ಸಂಜೆ ನಡೆಯಿತು. ಗ್ಯಾಸ್ ಅಂಡೆ ಹಾಗೂ ಸ್ಟವ್ ವಿತರಿಸಿದ ಸುಳ್ಯ ಶಾಸಕ ಎಸ್. ಅಂಗಾರ ಮಾತನಾಡಿ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಗ್ರಾಮೀಣ ಪ್ರದೇಶದ ಅಬಿವೃದ್ದಿ ಹಾಗೂ ಜನರ ಸಂರಕ್ಷಣೆಗಾಗಿ ಹತ್ತು ಹಲವು ಯೋಜನೆಗಳನ್ನು ಜಾರಿ ಮಾಡಿ ದೇಶಾದ್ಯಂತ ಮನೆಮಾತಗಿದೆ.
ಅದರಲ್ಲಿ ಮುಖ್ಯವಾಗಿ ಮಹಿಳೆಯರು ಹೊಗೆಮುಕ್ತ ಸೌಧೆ ರಹಿತ ಅಡುಗೆ ಮಡುವ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಮೂಲಕ ಮಹತ್ತರವಾದ ಉದ್ದೇಶವನ್ನಿಟ್ಟುಕೊಂಡು ಜಾರಿಗೆ ತಂದಿರುವ ಉಜ್ವಲ ಯೋಜನೆ ಭಾರಿ ಜನಪ್ರಿಯವಾಗಿದೆ, ದೇಶದ ಬಡ ಕುಟುಂಬದ ಕೋಟ್ಯಾಂತರ ಮಹಿಳೆಯರು ಇದರ ಪ್ರಯೋಜನ ಪಡೆದುಕೊಂಡಿದ್ದು ಪ್ರಧಾನಿಯವರ ಕಾರ್ಯ ಶೈಲಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಇದರಂತೆ ಪ್ರಧಾನಿಯವರು ಅನುಷ್ಠಾನ ಮಾಡಿರುವಂತಹ ನೂರಾರು ಜನಪ್ರಿಯ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಮುಟ್ಟಿಸುವಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪ್ರಾಮಾಣಿಕವಾಗಿ ದುಡಿದು ಯಶಸ್ವಿಗೊಳಿಸಬೇಕೆಂದು ಹೇಳಿದರು.
ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ ಮಾತನಾಡಿ ಉಜ್ಚಲ ಯೋಜನೆಯಿಂದ ಅನೇಕ ಮಹಿಳೆಯರ ಬದುಕು ಉಜ್ವಲವಾಗಿದೆ. ಅದರೆ ಸಮರ್ಪಕದ ಮಾಹಿತಿ ಹಾಗೂ ತಿಳುವಳಿಕೆ ಕೊರತೆಯಿಂದ ಈ ಯೋಜನೆ ಇನ್ನಷ್ಟು ಜನರಿಗೆ ಮುಟ್ಟಿಸುವಲ್ಲಿ ನಾವು ವಿಫಲರಾಗಿದ್ದೇವೆ. ಈ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಿ ಮಹಿಳೆಯರ ಸಮಸ್ಯೆಗೆ ಶ್ರಮಿಸುವ ಕೆಲಸವಾಗಬೇಕಾಗಿದೆ ಎಂದರು. ಬಿಜೆಪಿ ಕಡಬ ಶಕ್ತಿ ಕೇಂದ್ರದ ಅಧ್ಯಕ್ಷ ವಾಡ್ಯಪ್ಪ ಗೌಡ ಎರ್ಮಾಯಿಲ್ ಸಭೆಯ ಅಧ್ಯಕ್ಷತೆ ವಹಿಸಿದರು.ಬಿಳಿನೆಲೆ ಪ್ರಾ.ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಾಲಕೃಷ್ಣ ಗೌಡ ವಾಲ್ತಾಜೆ ಮಾತನಾಡಿ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಸ್ವಾತಂತ್ಯ್ರ ನಂತರ ಸಾಧ್ಯವಾಗದ ಅಬಿವೃದ್ದಿ ಯೋಜನೆಗಳು ಹಾಗೂ ಕಾರ್ಯಕ್ರಮಗಳು ಅನುಷ್ಠಾನವಾಗಿದೆ.
ಸಮರ್ಥ ನಾಯಕತ್ವ ಹಾಗೂ ದೂರದೃಷ್ಠಿಯ ವಿದೇಶಾಂಗ ನೀತಿಯಿಂದಾಗಿ ಭಾರತ ದೇಶ ಜಗತ್ತಿನಲ್ಲಿ ತಲೆಎತ್ತಿ ನಿಲ್ಲುವಂತಾಗಿದೆ, ವಿಶ್ವವಂದ್ಯ, ವಿಶ್ವಮಾನ್ಯ ರಾಷ್ಟ್ರವಾಗಿ ಕಂಗೊಳಿಸುತ್ತಿದೆ, ಮೋದಿಯವರ ಯೋಜನೆಗಳು ಹಾಗೂ ಯೋಚನೆಗಳು ಸರ್ವಕಾಲಿಕವಾಗಿ ಜನಮಾನಸದಲ್ಲಿ ಉಳಿಯುವಂತಾಗಿದೆ ಎಂದರು. ನಿರ್ದೇಶಕರಾದ ಉಮಾವತಿ ಕಳಿಗೆ, ಪ್ರಮುಖರಾದ ಗಣಪಯ್ಯ ಗೌಡ ಪುತ್ತಿಲ, ನಾರಾಯಣ ಗೌಡ ಮೇರುಂಜಿ, ಮೂಕಾಂಬಿಕಾ ಗ್ಯಾಸ್ ಏಜೆನ್ಸಿ ಮ್ಯಾನೇಜರ್ ರಮೇಶ್ , ಮತ್ತಿತರರು ಉಪಸ್ಥಿತರಿದ್ದರು. ಈ ಸಂಧರ್ಭದಲ್ಲಿ 70 ಫಲಾನುಭವಿಗಳಿಗೆ ಗ್ಯಾಸ್ ಅಂಡೆ ಮತ್ತು ಸ್ಟವ್ ವಿತರಣೆ ಮಾಡಿದರು. ವಾಡ್ಯಪ್ಪ ಗೌಡ ಎರ್ಮಾಯಿಲ್ ಪ್ರಸ್ತಾವನೆಗೈದು ಸ್ವಾಗತಿಸಿದರು. ಬಿಜೆಪಿ ಬಿಳಿನೆಲೆ ಗ್ರಾಮ ಸಮಿತಿ ಅಧ್ಯಕ್ಷ ವಿಜಯ್ ಕುಮಾರ್ ಎರ್ಕ ವಂದಿಸಿದರು. ತಾಲೂಕು ಪಂಚಾಯತ್ ಮಾಜಿ ಸದಸ್ಯೆ ಸರೋಜಿನಿಜಯಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.