ಕೊಂಬಾರು ಮುಗೇರಡ್ಕ ಶಾಲಾ ನೀರಿನ ಸಮಸ್ಯೆಗೆ ಶಾಲಾಭಿವೃದ್ದಿ ಸಮಿತಿಯಿಂದ ಜಿಲ್ಲಾಧಿಕಾರಿಗಳ ಭೇಟಿ.

(ನ್ಯೂಸ್ ಕಡಬ) newskadaba.comಕಡಬ,ಫೆ.12. ಕೊಂಬಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಗೇರಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ನೀರಿನ ಸಮಸ್ಯೆಯನ್ನು ಪರಿಹರಿಸುವಂತೆ ಸಮಿತಿ ಜಿಲ್ಲಾಧಿಕಾರಿಗಳನ್ನು ಸೋಮವಾರ ಭೇಟಿ ನೀಡಿ ಮನವಿ ಸಲ್ಲಿಸಿದಾಗ ಪೂರಕ ಸ್ಪಂದನೆ ದೊರೆತಿದೆ. ಸ್ಥಳೀಯ ತಾಲೂಕು ಪಂಚಾಯತ್ ಸದಸ್ಯೆ ಆಶಾಲಕ್ಷ್ಮಣ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿದ ಸಮಿತಿ ಶಾಲೆಯಲ್ಲಿನ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸುವಂತೆ ಕೋರಿದೆ ಶಾಲೆಯಲ್ಲಿ ಈ ಬೇಸಿಗೆ ಸಂದರ್ಭದಲ್ಲಿ ನೀರಿನ ಮೂಲವಾಗಿದ್ದ ಬಾವಿ ಭತ್ತಿ ಹೋಗಿದೆ ಅದರ ಬದಲಿ ವ್ಯವಸ್ಥೆಯಾಗಿದ್ದಂತಹ ಕೊಳವೆ ಬಾವಿ ಕೂಡಾ ಸಂಪೂರ್ಣ ಬರಡಾಗಿದೆ.

ಇದರಿಂದಾಗಿ ಶಾಲಾ ಅಕ್ಷರದಾಸೋಹ ಬಿಸಿಯೂಟಕ್ಕೆ ಹಾಗೂ ಕುಡಿಯಲು ಮತ್ತು ಶೌಚಾಲಯ ಬಳಕೆಗೆ ನೀರಿನ ಕೊರತೆ ಉಂಟಾಗಿದೆ ಶಾಲಾ ವಿದ್ಯಾರ್ಥಿಗಳು , ಶಿಕ್ಷಕರು, ಅಡುಗೆ ಸಿಬ್ಬಂದಿಗಳು ಶಾಲೆಯ ಅಸುಪಾಸಿನಿಂದ ನೀರು ಹೊತ್ತು ತಂದು ಬಳಕೆ ಮಾಡುವ ಅನಿರ್ವಾಯತೆ ಉಂಟಾಗಿದೆ. ಈ ಸಮಸ್ಯೆ ಕಳೆದ 2,3 ತಿಂಗಳಿನಿಂದ ಜೀವಂತವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ,ಸ್ಥಳೀಯ ಆಡಳಿತಕ್ಕೆ ಮನವಿ ಸಲ್ಲಿಸಿರುತ್ತೇವೆ. ಸ್ಥಳೀಯ ಆಡಳಿತಕ್ಕೂ ಮನವಿ ಮಾಡಿದ್ದೇವೆ. ಗ್ರಾಮ ಸಭೆಗಳಲ್ಲಿಯೂ ನೀರಿನ ಸಮಸ್ಯೆ ನಿವಾರಿಸುವಂತೆ ಹಕ್ಕೊತ್ತಾಯ ಮಂಡಿಸಲಾಗಿದೆ ಆದರೂ ಯಾವುದೇ ಪ್ರಯೋಜನವಾಗಿರುವುದಿಲ್ಲ ಶಾಲೆಯ ಈ ಜ್ವಲಂತ ಸಮಸ್ಯೆಯನ್ನು ತಕ್ಷಣ ಕ್ರಮಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಶಸಿಕಾಂತ್ ಸೆಂಥಿಲ್ ಅವರಿಗೆ ಕೊರಲಾಯಿತು.

Also Read  ಕೋಡಿಂಬಾಳ, ಪಾದರೆ ನಿವಾಸಿಗಳ ಈಡೇರದ ರಸ್ತೆ ನಿರ್ಮಾಣ ಬೇಡಿಕೆ ► ಮುಂದಿನ ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ

ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಯವರು ಶಾಲಾ ಹಳೆಯ ಕೊಳವೆ ಬಾವಿ ದುರಸ್ತಿಗೆ ಕ್ರಮ ಕೈಗೊಳ್ಳುವುದು ನೂತನ ಕೊಳವೆ ಬಾವಿಯೊಂದನ್ನು ಕೊರೆದು ನೀರಿನ ಸಮಸ್ಯೆಯನ್ನು ಪರಿಹರಿಸಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯವರಿಗೆ ಖಡಕ್ ಸೂಚನೆಯನ್ನು ನೀಡಿದರು. ಜಿಲ್ಲಾಧಿಕಾರಿ ಭೇಟಿ ಮಾಡಿದ ನೀಯೊಗದಲ್ಲಿ ಎ.ಪಿ.ಎಂ.ಸಿ ಮಾಜಿ ನಿರ್ದೇಶಕ ರಾಮಕೃಷ್ಣ ಗೌಡ ಹೊಳ್ಳಾರು, ಶಾಲಾಭಿವೃದ್ದಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಯುವರಾಜ್ ಅರ್ಚಾಯ, ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಕಲ್ಲರ್ತನೆ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನೀಲಪ್ಪ ಗೌಡ ಮುಗೇರು ಮೊದಲಾದವರು ನಿಯೋಗದಲ್ಲಿದ್ದರು.

Also Read  ಸ್ಕೂಟರ್‌ಗೆ ಲಾರಿ ಡಿಕ್ಕಿ ➤ ದ್ವಿಚಕ್ರ ಸವಾರ ಗಂಭೀರ..!!

error: Content is protected !!
Scroll to Top