ಕಾಲೇಜು ವಿದ್ಯಾರ್ಥಿ ಹಾಸ್ಟೆಲ್ ನಿಂದ  ನಾಪತ್ತೆ

(ನ್ಯೂಸ್ ಕಡಬ) newskadaba.comವೇಣೂರು, ಫೆ.11. ಖಾಸಗಿ ಕಾಲೇಜು ವಿದ್ಯಾರ್ಥಿಯೊಬ್ಬ ಹಾಸ್ಟೆಲ್ ನಿಂದ  ನಾಪತ್ತೆಯಾದ ಘಟನೆ ವೇಣೂರು ಪೊಲೀಸ್ ಠಾಣೆಯಿಂದ ವರದಿಯಾಗಿದೆ.ನಾಪತ್ತೆಯಾದ ವಿದ್ಯಾರ್ಥಿಯನ್ನು ಉಡುಪಿ ತಾಲೂಕು  ಶೀರೂರು ಗ್ರಾಮದ ನಿವಾಸಿಯಾಗಿರುವ ಪ್ರಥ್ವಿಕ್ ಹೆಗ್ಡೆ ಎಂದು ಗುರುತಿಸಲಾಗಿದೆ.

 

ಪ್ರಥ್ವಿಕ್ ಹೆಗ್ಡೆ ಹಾಸ್ಟೆಲ್ ನಿಂದ ಹೊರಟು ಹೋದವನು  ಸಂಜೆಯಾದರೂ ಮರಳಿ ಬಂದಿರುವುದಿಲ್ಲ ಈ ಬಗ್ಗೆ ಹಾಸ್ಟೆಲ್ ವಾರ್ಡನ್ ಪೋಷಕರಿಗೆ  ತಿಳಿಸಿದರು. ತಕ್ಷಣ ಮನೆಯವರು ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಪೃಥ್ವಿಕ್ ಹೆಗ್ಡೆ ಸುಮಾರು 5.7 ಅಡಿ ಎತ್ತರವಿದ್ದು, ಗೋದಿ ಮೈಬಣ್ಣ ಹೊಂದಿರುತ್ತಾನೆ. ಹಾಸ್ಟೆಲ್ ನಿಂದ ಹೋಗುವ ವೇಳೆ ನೀಲಿ ಬಣ್ಣದ ಉದ್ದ ತೋಳಿನ ಟಿ ಶರ್ಟ್, ಕಪ್ಪು  ಬಣ್ಣದ ಪ್ಯಾಂಟ್, ಶೂ, ನೀಲಿ ಬಣ್ಣದಲ್ಲಿ ಹಿಂಬದಿ ಹಳದಿ ಬಣ್ಣವಿರುವ ಬ್ಯಾಗ್ ಧರಿಸಿರುತ್ತಾನೆ.ಯಾರಿಗಾದರೂ ಪ್ರಥ್ವಿಕ್ ಹೆಗ್ಡೆ ಸಿಕ್ಕಿದರೆ ತಕ್ಷಣ ವೇಣೂರು ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕಾಗಿ ಪ್ರಕಟನೆಯಲ್ಲಿ ತಿಳಿಸಲಾಗಿದೆ.

Also Read  ಕೊಳೆತ ಮೊಟ್ಟೆ ಪೂರೈಕೆ..! - ಗರ್ಭಿಣಿ ಮಹಿಳೆ, ಮಕ್ಕಳು ಅಸ್ವಸ್ಥ

 

 

error: Content is protected !!
Scroll to Top