ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ ➤ಮೋದಿ ಫೋಟೋವಿರೋ ಕಲರ್ ಪುಲ್ ಸೀರೆ

(ನ್ಯೂಸ್ ಕಡಬ) newskadaba.com ಕಡಬ, ಫೆ.11.ಪ್ರಧಾನಿ ಮೋದಿ ಅವರಿಗೆ ಅಪಾರ ಅಭಿಮಾನಿಗಳು, ಬೆಂಬಲಿಗರು ಇದ್ದಾರೆ. ಆದ್ದರಿಂದ ಈಗ ಪ್ರಧಾನಿ ಮೋದಿ ಅವರು ಟ್ರೆಂಡ್ ಸೀರೆಗೂ ಎಂಟ್ರಿ ಕೊಟ್ಟಿದ್ದಾರೆ. ಸಿಲ್ಕ್ ಕಾಟನ್, ಕ್ರೇಮ್ ಸಿಲ್ಕ್, ಹಾರ್ಟ್ ಸಿಲ್ಕ್ ರೀತಿ ಮೋದಿ ಭಾವಚಿತ್ರವುಳ್ಳ ಸಿಲ್ಕ್ ಸೀರೆ ಕೂಡ ಮಾರುಕಟ್ಟೆಗೆ ಕಾಲಿಟ್ಟಿದೆ.

ಪ್ರಧಾನಿ ಮೋದಿ ಫೋಟೋ ಪ್ರಿಂಟ್ ಇರುವ ಸೀರೆ ಈಗ ಮಾರುಕಟ್ಡೆಗೆ ಲಗ್ಗೆ ಇಟ್ಟಿದ್ದು, ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದೆ. ಅಲ್ಲದೇ ಈ ಸೀರೆ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ಹರಿದಾಡುತ್ತಿದೆ. ಕಲರ್ ಪುಲ್ ಸೀರೆಗಳ ಮೇಲೆ ಮೋದಿ ಫೋಟೋ ಮಾರುಕಟ್ಟೆಯಲ್ಲಿ ಬಿಸಿ ಬಿಸಿ ಬ್ಯುಸಿನೆಸ್‍ಗೆ ಕಾರಣವಾಗಿದೆ. ವ್ಯಾಪಾರಿಗಳಂತೂ ಫುಲ್ ಖುಷ್ ಆಗಿ ಬಿಸಿನೆಸ್ ಭರಾಟೆಯಲ್ಲಿ ತೊಡಗಿದ್ದರೆ, ಮತ್ತೊಂದೆಡೆ ಬಿಜೆಪಿಯವರೆಲ್ಲ ಈ ಸೀರೆಗಳ ಖರೀದಿಗೆ ಮುಗಿ ಬೀಳಬಹುದು ಎಂಬ ಲೆಕ್ಕಚಾರವೂ ಜೋರಾಗಿದೆ.

Also Read  ಬಂಟ್ವಾಳ: ಮಲಗಿದ್ದಲ್ಲೇ ಮಾಜಿ ಸೈನಿಕ ನಿಧನ; ಐದು ದಿನಗಳ ಬಳಿಕ ಪ್ರಕರಣ ಬೆಳಕಿಗೆ

ಮೊದಲಿಗೆ ಹೂಗಳು, ಬಳಿಕ ಮೋದಿಯ ಫೋಟೋ, ಮೋದಿಯವರು ಚಲಾವಣೆಗೆ ತಂದಿರುವ 500 ರೂ. ಮತ್ತು 2000 ರೂ. ನೋಟುಗಳ ಫೋಟೋ ಕೊನೆಯಲ್ಲಿ ಮತ್ತೆ ಮೋದಿ ಭಾವಚಿತ್ರ, ಹೂವುಗಳ ಫೋಟೋ ಪ್ರಿಂಟ್ ಆಗಿದೆ. ಇನ್ನೂ ಬೇರೆ ಡಿಸೈನ್ ನೋಡಿದರೆ, ಮೋದಿ ಫೋಟೋ ಒಂದನ್ನೇ ಸೀರೆಯುದ್ದಕ್ಕೂ ಹೂಗಳ ಜೊತೆ ಪ್ರಿಂಟ್ ಮಾಡಲಾಗಿದೆ. ಮೋದಿ ಜೊತೆ ನದಿ, ಕಾಡು, ಗಿಡ, ಮರ ಹಾಗೂ ಸ್ವಚ್ಛಭಾರತ ಸಂಕೇತದ ಮೋದಿ ಕನ್ನಡಕವನ್ನು ಕೂಡ ಸೀರೆಯಲ್ಲಿ ಪ್ರಿಂಟ್ ಮಾಡಲಾಗಿದೆ. ಒಟ್ಟಿನಲ್ಲಿ ಒಂದೊಂದು ಸೀರೆಯಲ್ಲೂ ಮೋದಿಯ ಫೋಟೋಗಳನ್ನು ಬೇರೆ ಬೇರೆ ರೀತಿಯಲ್ಲಿ ಡಿಸೈನ್ ಮಾಡಲಾಗಿದ್ದು, ಈ ಸೀರೆಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಡಿಮ್ಯಾಂಡ್ ಇದೆ.

Also Read  ಉದ್ಯೋಗಾವಕಾಶ: ಅಕ್ಟೋಬರ್ 16ರಂದು ಸಂದರ್ಶನ

 

error: Content is protected !!
Scroll to Top