ಕಡಬ ಸರಕಾರಿ ಪ್ರೌಢಶಾಲಾ ಮಾಜಿ ಕಛೇರಿ ಸಹಾಯಕ ಅಹ್ಮದ್‍ಕುಂಞ ನಿಧನ ➤ ಹವ್ಯಾಸಿ ಯಕ್ಷಗಾನ ಅರ್ಥಧಾರಿಯಾಗಿ ಚಿರಪರಿಚಿತ

(ನ್ಯೂಸ್ ಕಡಬ) newskadaba.com ಕಡಬ, ಫೆ.10. ಕಡಬ ಸರಕಾರಿ ಪ್ರೌಢಶಾಲೆಯ ಮಾಜಿ ಕಚೇರಿ ಸಹಾಯಕ, ಹವ್ಯಾಸಿ ಯಕ್ಷಗಾನ ಅರ್ಥಧಾರಿ ಅಹ್ಮದ್‍ಕುಂಞಿ (75) ಅವರು ಭಾನುವಾರದಂದು ತನ್ನ ಸ್ವಗೃಹದಲ್ಲಿ ನಿಧನ ಹೊಂದಿದರು.

ಮೂಲತಃ ಕೇರಳದ ಮಂಜೇಶ್ವರ ನಿವಾಸಿಯಾದ ಅವರು ಸುಮಾರು 50 ವರ್ಷಗಳ ಹಿಂದೆ ಕಡಬಕ್ಕೆ ಆಗಮಿಸಿ ನೆಲೆಸಿ ಕಡಬ ಸರಕಾರಿ ಪ್ರೌಢಶಾಲೆಯಲ್ಲಿ 35 ವರ್ಷಗಳ ಕಾಲ ಕಚೇರಿ ಸಹಾಯಕರಾಗಿ ಕಾರ್ಯನಿರ್ವಹಿಸಿದ್ದರು. ಕಡಬದ ಶ್ರೀಗಣೇಶ ಯಕ್ಷಗಾನ ಮಂಡಳಿಯ ಸಕ್ರಿಯ ಸದಸ್ಯರಾಗಿದ್ದ ಅವರು ಯಕ್ಷಗಾನ, ತಾಳಮದ್ದಳೆಗಳಲ್ಲಿ ಭಾಗವಹಿಸುವ ಮೂಲಕ ಕಡಬ ಪರಿಸರದಲ್ಲಿ ಯಕ್ಷಗಾನ ಅರ್ಥಧಾರಿಯಾಗಿ ಪರಿಚಿತರಾಗಿದ್ದರು. ಪೌರಾಣಿಕ ಹಿನ್ನೆಲೆಯ ಕಥೆಗಳನ್ನು, ಸಂಸ್ಕೃತ ಶ್ಲೋಕಗಳನ್ನು ತನ್ನ ಮಾತುಗಳ ನಡುವೆ ಪೋಣಿಸಿ ಸಭೆ, ಸಮಾರಂಭಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದ ಅವರು ಅತ್ಯುತ್ತಮ ಭಾಷಣಕಾರರಾಗಿಯೂ ಹೆಸರು ಮಾಡಿದ್ದರು.

Also Read  ನೀರು ತುಂಬಿಸಿಟ್ಟಿದ್ದ ಬಕೆಟ್ ಗೆ ಬಿದ್ದು ಒಂದೂವರೆ ವರ್ಷದ ಮಗು ಮೃತ್ಯು ➤ ಮಂಗಳೂರಿನಲ್ಲಿ ನಡೆದ ಘಟನೆ

ಮೃತರು ಇಬ್ಬರು ಪುತ್ರರು ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.

error: Content is protected !!
Scroll to Top