(ನ್ಯೂಸ್ ಕಡಬ) newskadaba.com ಕಡಬ, ಫೆ.09. ಬಲ್ಯ ಶ್ರೀ ಉಮಾಮಹೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಫೆ.9ರಂದು ಪ್ರಾರಂಭಗೊಂಡಿದ್ದು, ಗ್ರಾಮಸ್ಥರಿಂದ ಹೊರೆ ಕಾಣಿಕೆ ಸಮರ್ಪಣೆ ನಡೆಯಿತು.ಸಂಜೆ ಗ್ರಾಮಸ್ಥರಿಂದ ಕಾಣಿಕೆ ಹುಂಡಿ ಸಮರ್ಪಣೆ, ಬಳಿಕ ಶ್ರೀ ಉಮಾಮಹೇಶ್ವರೀ ಭಜನಾ ಮಂಡಳಿ ಅವರಿಂದ ಭಜನಾ ಕಾರ್ಯಕ್ರಮ ನಡೆಯಿತು. ರಾತ್ರಿ ಪ್ರಾರ್ಥನೆ, ಪುಣ್ಯಾಹ, ಪ್ರಾಸಾದ ಶುದ್ಧಿ, ವಾಸ್ತು ರಕ್ಷೋಘ್ನ ಹೋಮ, ವಾಸ್ತು ಬಲಿ, ವಾಸ್ತು ಪೂಜೆ ನಡೆದು ಮಹಾಪೂಜೆ ನಡೆಯಿತು.
ಫೆ.9ರಂದು ಬೆಳಿಗ್ಗೆ ಉಮಾಮಹೇಶ್ವರಿ ಸೇವಾ ಟ್ರಸ್ಟ್‍ನ ಅಧ್ಯಕ್ಷ ಕೆ. ಚಿತ್ತರಂಜನ್ ರೈ ಮಾಣಿಗ, ಕಾರ್ಯದರ್ಶಿ ನಾರಾಯಣ ಗೌಡ ಕೊಲ್ಲಿಮಾರ್, ಧಾರ್ಮಿಕ ಉತ್ಸವ ಸಮಿತಿಯ ಅಧ್ಯಕ್ಷ ಜಗನ್ನಾಥ ಶೆಟ್ಟಿ ಗುಂಡಿಜಾಲು, ಭಜನಾಮಂಡಳಿಯ ಅಧ್ಯಕ್ಷ ಶಶಿಧರ ಗೌಡ ಕೆರೆನಡ್ಕ,ಕೋಶಾಧಿಕಾರಿ ಭಾಸ್ಕರ ಸನಿಲ, ಉಪಾಧ್ಯಕ್ಷರಾದ ಉಷಾ ಪೂರ್ಣೇಶ್ ಬಿ.ಎಂ.ವಿಜಯ ಕುಮಾರ್ ಪುತ್ತಿಲ, ಡಾ| ಸುರೇಶ್ ಕುಮಾರ್ ಕೂಡೂರು, ಸೇವಾ ಟ್ರಸ್ಟ್‍ನ ಜತೆ ಕಾರ್ಯದರ್ಶಿ ಮೋಹನ್ ಡಿ.ಬಿ, ಕೋಶಾಧಿಕಾರಿ ರಾಜರಾಮ್ ಭಟ್ ಹೊಸ್ಮಠ, ಸದಸ್ಯರಾದ ತನಿಯ ಸಂಪಡ್ಕ, ತಿಮ್ಮಪ್ಪ ಕರ್ಕೇರ ಮತ್ರಾಡಿ ಮೊದಲಾದವರು ಉಪಸ್ಥಿತರಿದ್ದರು. ಅರ್ಚಕ ಶ್ರೀಪತಿ ಭಟ್ ಪೂಜಾ ವಿಧಿ ವಿಧಾನ ನೆರವೇರಿಸಿದರು.
ಫೆ.10ರಂದು ಬೆಳಿಗ್ಗೆ ಗಣಪತಿ ಹೋಮ, ಬಿಂಬ ಶುದ್ಧಿ, ಸಾನಿಧ್ಯ, ಕಲಶಪೂಜೆ, ಪಂಚಾಮೃತ ಅಭಿಷೇಕ, ಸಾನಿಧ್ಯ ಕಲಶಾಭಿಷೇಕ,ಬಳಿಕ ನಾಗದೇವರು ಹಾಗೂ ಪರಿವಾರ ದೈವಗಳ ವರ್ಷಾವಧಿ ತಂಬಿಲ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 4 ಗಂಟೆಗೆ ವಿಶೇಷ ಆಕರ್ಷಣೆಯಾಗಿ ನೃತ್ಯ ಸಮರ್ಪಣಂ ಕಾರ್ಯಕ್ರಮವು ನೃತ್ಯ ನಿನಾದ ಕಡಬ-ಬಲ್ಯ ಇದರ ವಿದ್ಯಾರ್ಥಿಗಳಿಂದ ನಡೆಯಲಿದೆ, ಬಳಿಕ ಚೆಂಡೆವಾದನ, ದೀಪಾರಾಧನೆ, ದೇವಿಗೆ ವಿಶೇಷ ಮಹಾಪೂಜೆ, ರಾತ್ರಿ ಶ್ರೀ ಭೂತ ಬಲಿ, ನೃತ್ಯ ಬಲಿ ಉತ್ಸವ, ರಾಜಾಂಗಣ ಪ್ರಸಾದ, ಬಟ್ಟಲು ಕಾಣಿಕೆ, ಮಂತ್ರಾಕ್ಷತೆ ನಡೆದು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.