ಖಾಸಗಿ ನೆಟ್ ವರ್ಕ್ ಕಂಪನಿಗಳಿಗೆ ಸೆಡ್ಡು ಹೊಡೆದ BSNL ➤ತನ್ನ ಗ್ರಾಹಕರಿಗೆ ಬಂಪರ್ ಆಫರ್

(ನ್ಯೂಸ್ ಕಡಬ) newskadaba.com ಕಡಬ, ಫೆ.09.BSNL ಹೊಸ ಗ್ರಾಹಕರನ್ನು ಸೆಳೆದುಕೊಳ್ಳುವ ಸಲುವಾಗಿ ನಿರಂತರವಾಗಿ ತನ್ನ ಪ್ಲಾನ್ ಗಳಲ್ಲಿ ಬದಲಾವಣೆ ತರುತ್ತಿದೆ. ಇದೀಗ ಕಂಪೆನಿಯು 525 ಹಾಗೂ 725 ರೂಪಾಯಿ ಪ್ಯಾಕ್ ಗಳಲ್ಲಿ ಬದಲಾವಣೆ ತಂದಿದೆ. ಇವೆರಡೂ ಪೋಸ್ಟ್ ಪೇಯ್ಡ್ ಪ್ಲಾನ್ ಎಂಬುವುದು ಗಮನಾರ್ಹ ಬದಲಾವಣೆಯಾಗಿದೆ.

525 ರೂಪಾಯಿ ಪ್ಲಾನ್ ನಡಿಯಲ್ಲಿ 40 ಜಿಬಿ ಡೇಟಾದೊಂದಿಗೆ ಯಾವುದೇ FUP ಮಿತಿ ಇಲ್ಲದ ಅನಿಯಮಿತ ಕರೆ, 100 ಎಸ್ ಎಂ ಎಸ್ ನೀಡುವುದರೊಂದಿಗೆ ಹಾಗೂ ಅಮೆಜಾನ್ ಪ್ರೈಮ್ ನಲ್ಲಿ ಉಚಿತವಾಗಿ ಚಂದಾದಾರರಾಗುವ ಅವಕಾಶವಿದೆ. ಈ ಹಿಂದೆ ಕೇವಲ 15 ಜಿಬಿ ಡೇಟಾ ಮಾತ್ರ ನೀಡಲಾಗುತ್ತಿತ್ತು.ಆದರೆ ಈಗ BSNLನ 525 ರೂಪಾಯಿ ಪ್ಯಾಕ್ ನಲ್ಲಿ ಬಳಕೆದಾರರಿಗೆ ಪ್ರತಿ ತಿಂಗಳು 40 ಜಿಬಿ ಡೇಟಾ ಸಿಗಲಿದೆ ಹಾಗೂ 725 ರೂಪಾಯಿ ಪ್ಲಾನ್ನಲ್ಲಿ 50 ಜಿಬಿ ಡೇಟಾ ಪ್ರತಿ ತಿಂಗಳು ಸಿಗಲಿದೆ. ಕಳೆದ ವರ್ಷ ಅಕ್ಟೋಬರ್ ನಲ್ಲಿ 525 ರೂಪಾಯಿ ಪ್ಲಾನ್ ಗೆ ಕೋಲ್ಕತ್ತಾ ಸರ್ಕಲ್ನ ಬಳಕೆದಾರರಿಗೆ ಪ್ರತಿ ತಿಂಗಳು 80 ಜಿಬಿ ಡೇಟಾ ನೀಡಲಾಗುತ್ತಿತ್ತು.

Also Read  ಕಡಬದ ನ್ಯೂ ಕೆನರಾ ಫರ್ನಿಚರ್ಸ್ ನಲ್ಲಿ ದೀಪಾವಳಿ ವಿಶೇಷ ಮಾರಾಟ ಮೇಳ ➤ ಪೀಠೋಪಕರಣಗಳ ಬೃಹತ್ ಸಂಗ್ರಹ

ಇನ್ನು ಕೋಲ್ಕತ್ತಾದಲ್ಲಿ ಅಕ್ಟೋಬರ್ ನಿಂದಲೇ ಈ ಪ್ಲಾನ್ ಹಾಕಿಸಿಕೊಂಡವರಿಗೆ 80 ಜಿಬಿ ಡೇಟಾದೊಂದಿಗೆ 200 ಜಿಬಿವರೆಗಿನ ಡೇಟಾ ರೋಲ್ ಓವರ್ ಕೂಡಾ ಸಿಗಲಿದೆ.725 ರೂಪಾಯಿಯ ಪ್ಲಾನ್ ನ್ನು ಗಮನಿಸುವುದಾದರೆ ಇದರಲ್ಲಿ ಬಳಕೆದಾರರಿಗೆ 50 ಜಿಬಿ ಡೇಟಾದೊಂದಿಗೆ ಅನಿಯಮಿತ ಕರೆ, 100 ಎಸ್ ಎಂಎಸ್ ಹಾಗೂ ಅಮೆಜಾನ್ ಪ್ರೈಮ್ ಮೆಂಬರ್ ಷಿಪ್ ಸಿಗಲಿದೆ.

Also Read  ➤ ದೇಶದಲ್ಲಿ ಹೆಚ್ಚುತ್ತಿರುವ ಸೈಬರ್ ಕ್ರೈಮ್ ➤ 6 ಲಕ್ಷಕ್ಕೂ ಅಧಿಕ ದೂರುಗಳು ದಾಖಲು

error: Content is protected !!
Scroll to Top