(ನ್ಯೂಸ್ ಕಡಬ) newskadaba.comಧರ್ಮಸ್ಥಳ,ಫೆ.09.ದಕ್ಷಿಣ ಭಾರತದ ಅತ್ಯಂತ ಪವಿತ್ರ ಕ್ಷೇತ್ರವಾದ ಧರ್ಮಸ್ಥಳದಲ್ಲಿ ಬಾಹುಬಲಿಗೆ ಮಹಾಮಸ್ತಕಾಭಿಷೇಕ ನಡೆಯುವ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕಿಗೆ ರಸ್ತೆ ಸಂಪರ್ಕ ಹಾಗೂ ಮೂಲಭೂತ ಸೌಕರ್ಯಕ್ಕೆ ಒಟ್ಟು 27.50 ಕೋಟಿ ರೂ. ಗಳ ಕಾಮಗಾರಿಗಳನ್ನು ಸಂಪೂರ್ಣಗೊಳಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖಾ ಅಧಿಕಾರಿಗಳು ತಿಳಿಸಿದ್ದಾರೆ.
ಬೆಳ್ತಂಗಡಿ ತಾಲೂಕು ಸುಬ್ರಮಣ್ಯ ಉಡುಪಿ ರಾಜ್ಯ ಹೆದ್ದಾರಿ -37 ರ ಕಿ.ಮೀ 52.00 ರಿಂದ 55.00 ಕಿ.ಮೀ ವರೆಗೆ ಚತುಷ್ಪಥ ರಸ್ತೆ ನಿರ್ಮಾಣಕ್ಕಾಗಿ 1500.00 ಲಕ್ಷಗಳನ್ನು ವ್ಯಹಿಸಲಾಗಿದೆ. ರತ್ನಗಿರಿ ಬಾಹುಬಲಿ ಬೆಟ್ಟದ ರಸ್ತೆ ಅಭಿವೃದ್ಧಿಗೆ 100.00 ಲಕ್ಷ ರೂ.ಗಳನ್ನು ಖರ್ಚು ಮಾಡಲಾಗಿದೆ. ಬೆಳ್ತಂಗಡಿ ಧರ್ಮಸ್ಥಳ ಒಳಾಂಗಣ ರಸ್ತೆಯನ್ನು 100.00 ಲಕ್ಷ ರೂ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಜಿಲ್ಲಾ ಮುಖ್ಯ ರಸ್ತೆಯ ಅಭಿವೃದ್ಧಿಯಡಿ ಧರ್ಮಸ್ಥಳ ಸ್ಥಾನಘಟ್ಟ ರಸ್ತೆ 750.00 ಲಕ್ಷ ರೂ.ಗಳಲ್ಲಿ ಅಭಿವೃದ್ಧಿ ಪಡಿಸಲಾಗಿದ್ದು ಭಕ್ತಾಧಿಗಳ ಅನುಕೂಲವನ್ನು ಗಮನದಲ್ಲಿರಿಸಿ ಅಡ್ಡ ಮೋರಿಗಳನ್ನು ಮಾಡಲಾಗಿದೆ.ಇದಲ್ಲದೇ 2.50 ಕೋಟಿ ರೂ. ವೆಚ್ಚದಲ್ಲಿ 9 ಕಡೆಗಳಲ್ಲಿ ಹೈಮಾಸ್ಟ್ ವಿದ್ಯುತ್ ದೀಪ ವ್ಯವಸ್ಥೆಯನ್ನು ಇಲಾಖೆ ಮಾಡಿದ್ದು ಮಾನ್ಯ ಮುಖ್ಯಮಂತ್ರಿ ಹೆಚ್.ಡಿ ಕುಮಾರ ಸ್ವಾಮಿಯವರು ಇಂದು ಕಾಮಗಾರಿಯನ್ನು ಲೋಕಾರ್ಪಣೆಗೊಳಿಸಲಿರುವರು.