ಸರ್ಕಾರದ ಸವಲತ್ತು ತಲುಪಲು ಹಾಗೂ ಸರ್ಕಾರಕ್ಕೆ ಜನನ ಮರಣದ ಸಮಗ್ರ ಮಾಹಿತಿ ಒಂದೇ ಕಡೆ ಸಿಗುವಂತಾಗಲು► ಇ-ಜನ್ಮ ತಂತ್ರಾಂಶ ಕಾರ್ಯಾಗಾರ

(ನ್ಯೂಸ್ ಕಡಬ) newskadaba.com ಮಂಗಳೂರು,ಫೆ.07.ಸರ್ಕಾರದ ಸವಲತ್ತು ತಲುಪಲು ಹಾಗೂ ಸರ್ಕಾರಕ್ಕೆ ಜನನ ಮರಣದ ಸಮಗ್ರ ಮಾಹಿತಿ ಒಂದೇ ಕಡೆ ಸಿಗುವಂತಾಗಲು ಇ-ಜನ್ಮ ತಂತ್ರಾಂಶದಿಂದ ಸಾಧ್ಯವಾಗಲಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಸೆಲ್ವಮಣಿ ಹೇಳಿದರು.ಅವರಿಂದು ಜಿಲ್ಲಾ ಪಂಚಾಯತ್‍ನ ನೇತ್ರಾವತಿ ಸಭಾಂಗಣದಲ್ಲಿ ಜನನ ಮರಣ ನೋಂದಣಿ ನಿಯಮಗಳು ಮತ್ತು ಇ-ಜನ್ಮ ತಂತ್ರಾಂಶ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಕಾರ್ಯಾಗಾರಗಳಿಂದ ಎಲ್ಲರಿಗೂ ಪ್ರಯೋಜನವಾಗಲಿದೆ. ಜನರಿಗೆ ಹಾಗೂ ಸರ್ಕಾರಗಳಿಗೆ ಯೋಜನೆ ರೂಪಿಸಲು ಅಗತ್ಯ ಅಂಕಿಅಂಶಗಳ ಮಾಹಿತಿ ಪಡೆಯಲು ಇ- ತಂತ್ರಜ್ಞಾನ ನೆರವಾಗಲಿದೆ ಎಂದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಲ್ಲಿ ಸರಾಸರಿ 50 ಸಾವಿರಕ್ಕೂ ಮಿಕ್ಕಿ ಜನನ ಮತ್ತು ಮರಣದ ನೋಂದಣಿ ನಡೆಯುತ್ತಿದೆ. ಇದರಲ್ಲಿ ಸುಮಾರು 33 ಸಾವಿರ ಜನನ ನೋಂದಣಿಯಾದರೆ, 17 ಸಾವಿರ ಮರಣ ನೋಂದಣಿಯಾಗಿದೆ. ಸಾರ್ವಜನಿಕರಿಗೆ ಅನುಕೂಲವಾಗಲು ಈ ನೋಂದಣಿ ಪ್ರಕ್ರಿಯೆಯನ್ನು ಇ-ಜನ್ಮ ತಂತ್ರಾಂಶ ಮೂಲಕ ನಡೆಸಲಾಗುತ್ತಿದೆ ಎಂದು ಜಿಲ್ಲಾ ಸಾಂಖ್ಯಿಕ ಅಧಿಕಾರಿ ಡಾ.ಉದಯ ಶೆಟ್ಟಿ ಹೇಳಿದರು. ಜನನ ಮತ್ತು ಮರಣದ ನೋಂದಣಿ ನಗರ ಪ್ರದೇಶದಲ್ಲಿ ಶೇ.85 ಹಾಗೂ ಗ್ರಾಮೀಣ ಪ್ರದೇಶದಲ್ಲಿ ಶೇ.15 ಪ್ರಮಾಣದಲ್ಲಿದೆ. ಶೇ.72ರಷ್ಟು ನೋಂದಣಿ ಮಂಗಳೂರು ತಾಲೂಕು ಒಂದರಲ್ಲೇ ಇದೆ. ಶೇ.2ರಷ್ಟು ನೋಂದಣಿ ತಡವಾಗಿ ಆಗುತ್ತಿದೆ. ಖಾಸಗಿ ಆಸ್ಪತ್ರೆಗಳಿಂದ ನಿಯಮಿತವಾಗಿ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ. ಎಲ್ಲಿಯೂ ಲೋಪವಾಗದಂತೆ ನೋಡಿಕೊಳ್ಳಲಾಗುತ್ತಿದೆ. ಶೇ.2ರಷ್ಟು ವಿಳಂಬ ನೋಂದಣಿಯನ್ನು ಶೂನ್ಯಕ್ಕೆ ಇಳಿಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

Also Read  ನಂತೂರು: ಟೆಂಪೋ - ಡಿಯೋ ಢಿಕ್ಕಿ ► ಪತಿ - ಪತ್ನಿ ಇಬ್ಬರೂ ಮೃತ್ಯು

.
ಇ-ಜನ್ಮ ತಂತ್ರಾಂಶ ಎರಡು  ಪೋರ್ಟಲ್‍ಗಳನ್ನು ಹೊಂದಿದೆ. ಡಾಟಾ ಎಂಟ್ರಿ ಆರಪೇಟರ್‍ಗಳ ಪೋರ್ಟಲ್‍ಗಳ   ಮತ್ತು ನೋಂದಣಾಧಿಕಾರಿಗಳ/ ಉಪ ನೋಂದಣಾಧಿಕಾರಿಗಳ ಪೋರ್ಟಲ್‍ಗಳು ಆಗಿರುತ್ತದೆ. ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಜನನ ಮತ್ತು ಮರಣ ನೋಂದಣಿ ಪ್ರಕ್ರಿಯೆ ಗಣಕಯಂತ್ರದ ಮೂಲಕ ನೋಂದಣಾಧಿಕಾರಿಗಳ ಇ-ಜನ್ಮ ತಂತ್ರಾಂಶಕ್ಕೆ ಫಾರ್ವರ್ಡ್‍ಮಾಡಬೇಕಾಗುತ್ತದೆ. ನಂತರ ನಗರ ಹಾಗೂ ಗ್ರಾಮೀಣ ಪ್ರದೇಶದ ನೋಂದಣಿ ಕಚೇರಿಯಿಂದ ದೃಢಪತ್ರವನ್ನು ಪಡೆದುಕೊಳ್ಳಬೇಕು. ಆಸ್ಪತ್ರೆ ವೈದ್ಯಾಧಿಕಾರಿಗಳು ಶಿಫಾರಸು ಮಾಡಿದ ಬಳಿಕ ನಗರದಲ್ಲಿ ಹೆಲ್ತ್ ಇನ್‍ಸ್ಪೆಕ್ಟರ್ ಹಾಗೂ ಗ್ರಾಮೀಣದಲ್ಲಿ ರಿಜಿಸ್ಟ್ರಾರ್(ಗ್ರಾಮಕರಣಿಕರು)ಶಿಫಾರಸು ಮಾಡುವ ಅಧಿಕಾರ ಹೊಂದಿರುತ್ತಾರೆ. ಆ ಬಳಿಕ ರಿಜಿಸ್ಟ್ರಾರ್ ಲಾಗಿನ್ ಆಗಿ ನಂತರ ನೋಂದಣಿ ಪತ್ರ ಕೈಸೇರುತ್ತದೆ ಎಂದರು.

ಇದರಿಂದಾಗಿ ಪ್ರತಿದಿನ, ಪ್ರತಿ ತಿಂಗಳು, ಪ್ರತಿ ವರ್ಷದ ಜಿಲ್ಲಾವಾರು ಜನನ ಪ್ರಮಾಣವನ್ನು ತ್ವರಿತಗತಿಯಲ್ಲಿ ಕಂಡುಹಿಡಿಯಲು ಅನುಕೂಲವಾಗುತ್ತದೆ. ಲಿಂಗಾನುಪಾತ, ತಾಯಿಯ ಗರ್ಭಧಾರಣೆಯ ಶಕ್ತಿ, ವಿವಾಹದ ವಯಸ್ಸು, ನವಜಾತ ಶಿಶುವಿನ ರೋಗನಿರೋಧಕ ಚುಚ್ಚುಮದ್ದುಗಳ ಕಾರ್ಯಕ್ರಮಕ್ಕೆ ಅನುಕೂಲವಾಗಲಿದೆ. ಮಾತ್ರವಲ್ಲ ಜಿಲ್ಲೆಯಲ್ಲಿ ಜನನ ಮರಣದ ಪ್ರಮಾಣವನ್ನು ಕಂಡುಹಿಡಿಯಲು, ಸಾರ್ವಜನಿಕ ಆರೋಗ್ಯ, ಸೋಂಕು ಮತ್ತು ಸಾಂಕ್ರಾಮಿಕ ರೋಗಗಳ ಹತೋಟಿಗೆ, ಮರಣ ಕಾರಣ ಅಧ್ಯಯನಕ್ಕೆ, ವೈದ್ಕಕೀಯ ಶಂಶೋಧನೆಗೆ, ಕುಟುಂಬ ಯೋಜನೆ ಕಾರ್ಯಕ್ರಮ ಹಮ್ಮಿಕೊಳ್ಳಲು ಅನುಕೂಲವಾಗಲಿದೆ ಎಂದರು.

Also Read  ಮಂಗಳೂರು: ಗೋಹತ್ಯೆ ನಿಷೇಧ ಕಾನೂನು ➤ ರಾಜ್ಯ ಸರ್ಕಾರಕ್ಕೆ ಸವಾಲೆಸೆದ ಯು.ಟಿ.ಖಾದರ್

 

ಇ-ಜನ್ನ ತಂತ್ರಾಂಶದಡಿ ನೋಂದಣಿ ಕಾರ್ಯಕ್ರಮ ಜಿಲ್ಲೆಯ 17 ನಾಡಕಚೇರಿಯಲ್ಲಿ, ಮಹಾನಗರ ಪಾಲಿಕೆ, ಪುರಸಭೆ, ನಗರಸಭೆ, ನಗರ ಪಂಚಾಯ್ತಿ ವ್ಯಾಪ್ತಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಅನುಷ್ಠಾನ ಗೊಳ್ಳಲಿದೆ. ಗ್ರಾಮೀಣ ಪ್ರದೇಶಗಳಲ್ಲಿ 368 ನೋಂದಣಿ ಘಟಕ, 68 ಸರ್ಕಾರಿ ಆಸ್ಪತ್ರೆಗಳಲ್ಲಿ ಉಪ ನೋಂದಣಿ ಘಟಕ ಸೇರಿ ಒಟ್ಟು 432 ಘಟಕಗಳಿವೆ. ನಗರದಲ್ಲಿ 9 ನೋಂದಣಿ ಘಟಕ ಹಾಗೂ 15 ಸರ್ಕಾರಿ ಆಸ್ಪತ್ರೆಯ ಉಪನೋಂದಣಿ ಘಟಕ ಸೇರಿ ಒಟ್ಟು 24 ಘಟಕಗಳಿವೆ. ಜಿಲ್ಲೆಯಲ್ಲಿ ಒಟ್ಟು ನೋಂದಣಿ ಹಾಗೂ ಉಪನೋಂದಣಿ ಘಟಕ 456 ಆಗಿರುತ್ತದೆ ಎಂದು ಅವರು ತಿಳಿಸಿದರು. ಪ್ರತಿಯೊಬ್ಬರಿಗೆ ಎಂದರು. ಸಹಾಯಕ ಸಾಂಖ್ಯಿಕ ಅಧಿಕಾರಿ ಮಾರುತಿ ಪ್ರಸಾದ್ ಇದ್ದರು.

error: Content is protected !!
Scroll to Top