ಜಂಕ್ ಆಹಾರ ಸೇವಿಸಬೇಡಿ► ಡಾ| ಚೂಂತಾರು

(ನ್ಯೂಸ್ ಕಡಬ) newskadaba.com ಮಂಗಳೂರು,ಫೆ.07.ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಿರಿಯ ಪ್ರಾಥಮಿಕ ಶಾಲೆ ನಾರ್ಲ – ಪಡೀಲ್, ತಲಪಾಡಿ ಇಲ್ಲಿ ದಿನಾಂಕ 05/02/2019ರಂದು ಚೂಂತಾರು ಸರೋಜಿನಿ ಪ್ರತಿಷ್ಠಾನ ಭಟ್ ವತಿಯಿಂದ ಉಚಿತ ದಂತ ಆರೋಗ್ಯ ಮಾಹಿತಿ ಶಿಬಿರ ಮತ್ತು ಟೂತ್ ಪೇಸ್ಟ್ ವಿತರಣಾ ಕಾರ್ಯಕ್ರಮ ಜರುಗಿತು. ಸುರಕ್ಷಾ ದಂತ ಚಿಕಿತ್ಸಾಲಯ ಇದರ ಹಿರಿಯ ದಂತ ವೈದ್ಯರು ಮತ್ತು ಬಾಯಿ ಮುಖ ದವಡೆ ಶಸ್ತ್ರ ಚಿಕಿತ್ಸಕರಾದ ಡಾ|ಮುರಲೀ ಮೋಹನ್ ಚೂಂತಾರು ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.

 

ಡಾ| ಚೂಂತಾರು ಅವರು ಮಾತನಾಡುತ್ತಾ ಮಕ್ಕಳಿಗೆ ಹಲ್ಲುಜ್ಜುವ ರೀತಿ, ಹಲ್ಲಿನ ರಚನೆ, ದಂತಕ್ಷಯ ಯಾಕಾಗಿ ಆಗುತ್ತದೆ ಎಂಬುದರ ಬಗ್ಗೆ ಮಾಹಿತಿ ನೀಡಿದರು. ಮಕ್ಕಳಿಗೆ ಜಂಕ್ ಆಹಾರ ಸೇವನೆ ಮಾಡಬೇಡಿ ಎಂದು ಕಿವಿಮಾತು ಹೇಳಿದರು. ತಾಜಾ ಹಣ್ಣು, ಹಸಿ ತರಕಾರಿ ಸೇವನೆ ಮತ್ತು ನೈಸರ್ಗಿಕ ಪೇಯಗಳಾದ ಎಳನೀರು, ಕಬ್ಬಿನ ಹಾಲು, ನೀರು ಹೆಚ್ಚು ಸೇವಿಸಿ ಹಲ್ಲಿನ ಆರೋಗ್ಯ ಮತ್ತು ದೇಹದ ಆರೊಗ್ಯವನ್ನು ಕಾಪಾಡಿಕೊಳ್ಳಿ ಎಂದರು. ಶಾಲೆಯ ಎಲ್ಲಾ 35 ಮಕ್ಕಳಿಗೆ ಉಚಿತವಾಗಿ ಟೂತ್‍ಪೇಸ್ಟ್ ವಿತರಿಸಲಾಯಿತು.

Also Read  ಬಂಟ್ವಾಳ ಘಟಕದಲ್ಲಿ ವನಮಹೋತ್ಸವ ➤ ಆಯುಷ್ ಇಲಾಖೆಯಿಂದ ಕೋವಿಡ್-19 ರೋಗ ನಿರೋಧಕ ಮಾತ್ರೆಗಳ ವಿತರಣೆ

ಇದೇ ಸಂದರ್ಭದಲ್ಲಿ ಚೂಂತಾರು ಸರೋಜಿನಿ ಪ್ರತಿಷ್ಠಾನ ಇದರ ವತಿಯಿಂದ ಶಾಲಾ ಗ್ರಂಥಾಲಯಕ್ಕೆ ಪುಸ್ತಕವನ್ನು ದೇಣಿಗೆ ನೀಡಲಾಯಿತು. ಶಾಲಾ ಮುಖ್ಯೋಫಾಧ್ಯಾಯಿನಿ ಶ್ರೀಮತಿ ಇಂದಿರಾ. ಜಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಶಿಕ್ಷಕಿಯರಾದ ಶ್ರೀಮತಿ ಯಶೋದ ಅವರು ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಮೋಹಿನಿ ಇವರು ವಂದಣಾರ್ಪಣೆ ಮಾಡಿದರು. ಚೂಂತಾರು ಸರೊಜಿನಿ ಭಟ್ ಪ್ರತಿಷ್ಠಾನ (ರಿ) ಮಂಗಳೂರು ಮತ್ತು ಸುರಕ್ಷಾ ದಂತ ಚಿಕಿತ್ಸಾಲಯ ಇದರ ಜಂಟಿ ಆಶ್ರಯದಲ್ಲಿ ಈ ಶಿಬಿರ ನಡೆಯಿತು.

Also Read  ಖಬರ್ ಸ್ತಾನಗಳಿಗೆ ಸರಕಾರಿ ಭೂಮಿ ನೀಡಲು ಮುಂದಾದ ರಾಜ್ಯ ಸರಕಾರ..!

error: Content is protected !!
Scroll to Top