ಖಾಸಗಿ ಬಸ್ – ಕ್ವಾಲಿಸ್ ಢಿಕ್ಕಿ ► ಜೆಡಿಎಸ್ ತಾಲೂಕು ಅಧ್ಯಕ್ಷ ಸೇರಿ ತಂದೆ ಮಗ ಮೃತ್ಯು

(ನ್ಯೂಸ್ ಕಡಬ) newskadaba.com  ತುಮಕೂರು, ಆ.01.  ಕ್ವಾಲಿಸ್ ಕಾರು ಹಾಗೂ ಖಾಸಗಿ ಬಸ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಕ್ವಾಲಿಸ್ ವಾಹನದಲ್ಲಿದ್ದ ತಂದೆ-ಮಗ ಸ್ಥಳದಲ್ಲೇ ಮೃತಪಟ್ಟ ಹೃದಯವಿದ್ರಾವಕ ಘಟನೆ ತುಮಕೂರಿನ ನರುಗನಹಳ್ಳಿ ಕ್ರಾಸ್ ಬಳಿ ನಡೆದಿದೆ.

ಘಟನೆಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಎಚ್.ಸಿ. ಕುಮಾರ್ ಹಾಗೂ ಅವರ ಪುತ್ರ ಜೀವನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೊನ್ನುಡಿಕೆಯಿಂದ ತುಮಕೂರಿಗೆ ಬರುತಿದ್ದ ಕಾರಿಗೆ ಕುಣಿಗಲ್ ಕಡೆಗೆ ತೆರಳುತ್ತಿದ್ದ ಎಸ್‍ಆರ್‍ಎಸ್ ಖಾಸಗಿ ಬಸ್ ಚಾಲಕ ತನ್ನ ಮುಂದಿದ್ದ ವಾಹನವನ್ನು ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಢಿಕ್ಕಿಯಾಗಿದೆ. ಈ ಬಗ್ಗೆ ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!
Scroll to Top