ಎಸ್ಸಿ ಘಟಕದ ಅಧ್ಯಕ್ಷ ಗುರುವಪ್ಪ ಕಲ್ಲುಗುಡ್ಡೆ ಕಾಂಗ್ರೇಸಿಗೆ ರಾಜೀನಾಮೆ

(ನ್ಯೂಸ್ ಕಡಬ) newskadaba.com ಕಡಬ, ಜು.31. ಕಾಂಗ್ರೆಸ್ ಪಕ್ಷದಿಂದ ದಲಿತರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಕಡಬ ಬ್ಲಾಕ್ ಕಾಂಗೇಸ್ ಸಮಿತಿಯ ಎಸ್ಸಿ ಘಟಕದ ಅಧ್ಯಕ್ಷ ಗುರುವಪ್ಪ ಕಲ್ಲುಗುಡ್ಡೆ ಅವರ ತಮ್ಮ ಸ್ಥಾನಕ್ಕೆ ಹಾಗೂ ಪಕ್ಷಕ್ಕೆ ರಾಜಿನಾಮೆ ನೀಡಿದ ಘಟನೆ ಸೋಮವಾರದಂದು ನಡೆದಿದೆ.

ಪಕ್ಷದ ಸಮಾವೇಶಕ್ಕೆ ಆಗಮಿಸಿದ್ದ ಪಕ್ಷದ ನೂತನ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಅವರಿಗೆ ಗುರುವಪ್ಪನವರು ತಮ್ಮ ರಾಜಿನಾಮೆ ಪತ್ರವನ್ನು ಸಲ್ಲಿಸಿದರು. ತಾನು ಹಲವಾರು ವರ್ಷಗಳಿಂದ ಕಾಂಗ್ರೇಸ್ ಪಕ್ಷದ ಸಂಘಟನೆಗಾಗಿ ಹಗಲಿರುಳು ದುಡಿದಿದ್ದು, ಎರಡು ಎಸ್ಸಿ ಘಟಕದ ಅಧ್ಯಕ್ಷನಾಗಿ ಪಕ್ಷ ಸಂಘಟನೆ ಮಾಡಿದ್ದೇನೆ ಅಲ್ಲದೆ ದಲಿತರ ಹಾಗೂ ಎಲ್ಲಾ ವರ್ಗದವರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಕಡಬ ಬ್ಲಾಕ್ ಕಾಂಗ್ರೇಸಿನ ಅಧ್ಯಕ್ಷರು ಹಾಗೂ ಜನಪ್ರತಿನಿಧಿಗಳು ದಲಿತರನ್ನು ತೀರಾ ಕಡೆಗಣಿಸುತ್ತಿದ್ದಾರೆ. ನನ್ನನ್ನು ಪಕ್ಷದ ಯಾವುದೇ ಸಭೆಗೆ ಆಹ್ವಾನಿಸುವುದಿಲ್ಲ. ಕಳೆದ ಗ್ರಾಮ ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಎಸ್ಸಿ ಮೀಸಲು ಕ್ಷೇತ್ರವನ್ನು ಬದಲಾವಣೆ ಮಾಡಿ ಇಲ್ಲಿನ ದಲಿತರಿಗೆ ನಾಯಕರಿಂದ ಅನ್ಯಾಯವಾಗಿದೆ. ಈ ಎಲ್ಲಾ ಕಾರಣಗಳಿಂದ ಮನನೊಂದು ನಾನು ಪಕ್ಷಕ್ಕೆ ಹಾಗೂ ನನ್ನ ಪಕ್ಷದ ಹುದ್ದೆಗೆ ರಾಜೀನಾಮೆ ನೀಡುವುದಾಗಿ ರಾಜೀನಾಮೆ ಪತ್ರದಲ್ಲಿ ಗುರುವಪ್ಪ ತಿಳಿಸಿದ್ದಾರೆ.

Also Read  ಪಂಚಾಯತ್ ಚುನಾವಣೆ ನಡೆಸಲು ಒತ್ತಾಯ► ಇಲ್ಲದಿದ್ದಲ್ಲಿ ಪ್ರತಿಭಟನೆಯ ಎಚ್ಚರಿಕೆ

 

error: Content is protected !!
Scroll to Top