(ನ್ಯೂಸ್ ಕಡಬ) newskadaba.comನೂಜಿಬಾಳ್ತಿಲ,ಫೆ.06. ಪುತ್ತೂರು ತಾಲೂಕು ಪಂಚಾಯತ್ ಅಧ್ಯಕ್ಷರಾದ ರಾಧಕೃಷ್ಣ ಬೋರ್ಕರ್ ರವರು ಫೆ.4ರಂದು ನೂಜಿಬಾಳ್ತಿಲ ಸ.ಉ.ಹಿ.ಪ್ರಾ.ಶಾಲೆಗೆ ಬೇಟಿ ನೀಡಿದರು.ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಲಕ್ಷ್ಮಣ ಗೌಡರ ನೇತೃತ್ವದಲ್ಲಿ ಶಾಲೆಯಲ್ಲಿ ಈಗಾಗಲೇ 8ನೇ ತರಗತಿ ಪ್ರಾರಂಭಿಸಲಾಗಿದ್ದು, ಮುಂದೆ 9 ಹಾಗೂ 10ನೇ ತರಗತಿ ಪ್ರಾರಂಭಿಸುವಂತೆ ಮನವಿ ಸಲ್ಲಿಸಲಾಯಿತು.
ನೂಜಿಬಾಳ್ತಿಲ, ರೆಂಜಿಲಾಡಿ, ಇಚ್ಲಂಪಾಡಿ, ಕೊಣಾಜೆ ಪರಿಸರದ ಕಿ.ಪ್ರಾ ಹಾಗೂ ಹಿ.ಪ್ರಾ ಶಾಲಾ ವಿದ್ಯಾರ್ಥಿಗಳು ತಮ್ಮ ಹೈಸ್ಕೂಲ್ ವಿದ್ಯಾಭ್ಯಾಸಕ್ಕೆ ಹತ್ತಿರವೆಲ್ಲಿಯೂ ಸರಕಾರಿ ಶಾಲೆಗಳಿಲ್ಲದೇ ಖಾಸಗಿ ಶಾಲೆಗಳನ್ನು ಅವಲಂಭಿಸುತ್ತಿದ್ದು, ನೂಜಿಬಾಳ್ತಿಲದಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸಕ್ಕೆ ವ್ಯವಸ್ಥೆ ಮಾಡಿದಲ್ಲಿ ಈ ಭಾಗದ ಹೆಚ್ಚಿನ ವಿದ್ಯಾರ್ಥಿಗಳಿಗೆ ಇಲ್ಲಿಯೇ ಪ್ರೌಡ ವಿದ್ಯಾಭ್ಯಾಸ ಪಡೆಯಲು ಅನುಕೂಲವಾಗಲಿದ್ದು, ತಾವುಗಳು ಗಮನಹರಿಸಿ ಮುಂದಿನ ಕ್ರಮಕೈಗೊಳ್ಳಬೇಕೆಂದು ಎಸ್.ಡಿ.ಎಂ.ಸಿ. ಅಧ್ಯಕ್ಷ ಲಕ್ಷ್ಮಣ ಗೌಡ ಸಾಂತ್ಯಡ್ಕ ರವರು ತಾ.ಪಂ.ಅಧ್ಯಕ್ಷ ರಾಧಕೃಷ್ಣ ಬೋರ್ಕರ್ ರವರನ್ನು ಒತ್ತಾಯಿಸಿದರು.
ಮನವಿ ಸ್ವಿಕರಿಸಿ ಮಾತನಾಡಿದ ತಾ.ಪಂ.ಅಧ್ಯಕ್ಷ ರಾಧಕೃಷ್ಣ ಬೋರ್ಕರ್ ರವರು ಗ್ರಾಮೀಣ ಭಾಗದಲ್ಲಿರುವ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇರುವಲ್ಲಿ ಪ್ರೌಡ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದರು.ಈ ಸಂದರ್ಭದಲ್ಲಿ ಕಡಬ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ವಾಡ್ಯಪ್ಪ ಗೌಡ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಕಮಾಲಾಕ್ಷಿ ಬರೆಮೇಲು, ಗ್ರಾ.ಪಂ.ಸದಸ್ಯ ರಾಮಚಂದ್ರ ಗೌಡ ಎಸ್., ಕಡಬ ಸಿ.ಎ.ಬ್ಯಾಂಕ್ ಮಾಜಿ ನಿರ್ದೇಶಕ ಚಂದ್ರಶೇಖರ ಗೌಡ ಹಳೆನೂಜಿ, ಶಾಲಾ ಮುಖ್ಯಶಿಕ್ಷಕ ಶ್ರೇಯಾನ್ಸ್, ಶಾರೀರಿಕ ಶಿಕ್ಷಕ ಬಾಲಕೃಷ್ಣ ಎಂ, ಪ್ರಮುಖರಾದ ಜಯಂತ ಬರೆಮೇಲು ಸೇರಿದಂತೆ ಶಾಲಾಭಿವೃದ್ಧಿ ಸಮಿತಿ, ಶಿಕ್ಷಕವೃಂಧದವರು ಉಪಸ್ಥಿತರಿದ್ದರು.