ಕನ್ವಾರೆ ಸಾರಿಮಂಟಮೆ ಶ್ರೀ ರಾಜನ್ ದೈವಸ್ಥಾನದಲ್ಲಿ ದೈವಗಳ ನೇಮೋತ್ಸವ

(ನ್ಯೂಸ್ ಕಡಬ) newskadaba.comಕಡಬ,ಫೆ.06. ನೂಜಿಬಾಳ್ತಿಲ ಗ್ರಾಮದ ಕನ್ವಾರೆ ಸಾರಿಮಂಟಮೆಯಲ್ಲಿ ವರ್ಷಂಪ್ರತಿ ನಡೆಯುವ ಶ್ರೀ ರಾಜನ್ ದೈವದ ನೇಮೋತ್ಸವ ಫೆ.3 ಹಾಗೂ 4ರಂದು ನಡೆಯಿತು.ಫೆ.3ರಂದು ಸಾರಿಮಂಟಮೆಯಲ್ಲಿ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ಕುರಿಯಾಳ ಕೊಪ್ಪ ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನದ ಪ್ರಧಾನ ಅರ್ಚಕರಾದ ವೆಂಕಟರಮಣ ಅಮ್ಮಣ್ಣಯ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ರಾತ್ರಿ ಬಾಳ್ತಿಲ ಗುತ್ತುಮನೆಯಿಂದ ಶ್ರೀ ರಾಜನ್ ದೈವದ ಭಂಡಾರ ಸಾರಿಮಂಟಮೆಗೆ ಬ್ಯಾಂಡ್ ವಾದ್ಯಗಳೊಂದಿಗೆ ತರಲಾಯಿತು.

ರಾತ್ರಿ ಸ್ಥಳೀಯ ಶಾಲಾ ಮಕ್ಕಳಿಂದ ವಿವಿಧ ವಿನೋದಾವಳಿಗಳು ನಡೆದರೆ, ಉದ್ಯಮಿ ಬಾಲಕೃಷ್ಣ ಶಾಂತಿಗುರಿ ಪ್ರಯೋಜಕತ್ವದಲ್ಲಿ ಬೀಟ್ ಡಾನ್ಸ್ ಗ್ರೂಪ್ ಉಪ್ಪಿನಂಗಡಿ ತಂಡದಿಂದ ಸಾಂಸ್ಕ್ರಂತಿಕ ಕಾರ್ಯಕ್ರಮ ನಡೆಸಲಾಯಿತು. ಈ ಸಂದರ್ಭದಲ್ಲಿ ಬೀಟ್ಸ್ ಡಾನ್ಸ್ ಗ್ರೂಪ್ ಉಪ್ಪಿನಂಗಡಿ ಹಾಗೂ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕ್ರತ ನೂಜಿಬಾಳ್ತಿಲದ ದಿಲೀಪ್ ಕಲ್ಲುಗುಡ್ಡೆ ಯವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಬಳಿಕ “ಕುಕ್ಕೆದ ಕುರಲ್” ಯಕ್ಷಗಾನ ಬಯಲಾಟ ನಡೆಯಿತು.

ಬೆಳಗಿನ ಜಾವ ಶ್ರೀ ರಾಜನ್ ದೈವದ ನೇಮೋತ್ಸವ ನಡೆಯಿತು. ಬಳಿಕ ಗುಳಿಗ ದೈವದ ನೇಮೋತ್ಸವ ನಡೆದು ಬೆಳಿಗ್ಗೆ ದೈವವು ಅಂದಪಾದೆಗೆ ತೆರಳಿ ಮುಳಿಯಾಯಿತು. ದೈವಸ್ಥಾನದ ಪ್ರಧಾನ ಪರಿಚಾರಕ ಬಾಬು ಗೌಡ ಕುಕ್ಕುತ್ತಡಿ, ಬಾಳ್ತಿಲ ಗುತ್ತು ಮನೆಯವರಾದ ಜಿನಚಂದ್ರ ಶೆಟ್ಟಿ, ಮಹಾವೀರ ಜೈನ್ ಡೆಪ್ಪುಣಿಗುತ್ತು, ವಿಶ್ವನಾಥ ರೈ ಐಲಗುತ್ತು, ಜಿ.ಪಂ.ಸದಸ್ಯ ಪಿ.ಪಿ.ವರ್ಗೀಸ್, ಗ್ರಾ.ಪಂ.ಅಧ್ಯಕ್ಷ ಸದಾನಂದ ಗೌಡ ಸಾಂತ್ಯಡ್ಕ, ಕಡಬ ಠಾಣಾ ಎಸೈ ಪ್ರಕಾಶ್ ದೇವಾಡಿಗ, ಉದಯ ಕುಮಾರ್ ರೈ ಕುಬುಲಾಡಿಗುತ್ತು, ಜಿನೇಂದ್ರ ಇಂದ್ರ ಬಸದಿ, ಧರಣೇಂದ್ರ ಇಂದ್ರ, ಪುರಂದರ ರೈ , ಸುಮಾ ಯು ರೈ, ಸೈಂಟ್ ಆನ್ಸ್ ಶಾಲಾ ಮುಖ್ಯ ಶಿಕ್ಷಕಿ ಧಕ್ಷಾ ಕುಮಾರಿ, ರೆಂಜಿಲಾಡಿ ಆಶಾ ಕಾರ್ಯಕರ್ತೆ ಜಯಂತಿ ಪಾಡ್ಲ, ಕುಶಾಲಪ್ಪ ಗೌಡ ಕನ್ವಾರೆ, ಸಾಂತಪ್ಪ ಕೋಡಿಕಂಡ, ಉದ್ಯಮಿ ಬಾಲಕೃಷ್ಣ ಮಂಗಳೂರು, ಹರೀಶ್ವಂದ್ರ ಗೌಡ ಕನ್ವಾರೆ, ವಸಂತ ಪೂಜಾರಿ ಬದಿಬಾಗಿಲು, ಶ್ರೀಧರ ಗೌಡ ಮಿತ್ತೋಡಿ, ಹರೀಶ್ ನಡುವಳಿಕೆ, ದಾಮೋದರ ಗೌಡ ಕೊಡೆಂಕಿರಿ, ಹರಿಶ್ಚಂದ್ರ ಕೊಡೆಂಕಿರಿ, ಕುಶಾಲಪ್ಪ ನಡುವಳಿಕೆ, ಹರಿಪ್ರಸಾದ್ ಪದಕಬ್ರಂತೋಡು ಪರಿಚಾರಕರಾದ ಶೇಷಪ್ಪ ಗೌಡ ಮಜಲಡ್ಕ, ಕೊರಗಪ್ಪ ಗೌಡ ಪಾಲೆತ್ತಡಿ, ಧರ್ಣಪ್ಪ ಗೌಡ ಪಿಲತ್ತಡಿ, ಸುಂದರ ಮಡಿವಾಳ ನೇರ್ಲ, ಪುರುಷೋತ್ತಮ ಗೌಡ ಪಾಲೆತ್ತಡಿ, ಡೀಕಯ್ಯ ಗೌಡ ಪಾಲೆತ್ತಡಿ, ಪದ್ಮನಾಭ ಪಾಲೆತ್ತಡಿ, ಪುರುಷೋತ್ತಮ ಕುಕ್ಕುತ್ತಡಿ, ಚೆನ್ನಪ್ಪ ಗೌಡ ಕನ್ವಾರೆ, ಬಾಲಕೃಷ್ಣ ಗೌಡ ಶಾಂತಿಗುರಿ, ಹೊನ್ನಪ್ಪ ಗೌಡ ಶಾಂತಿಗುರಿ, ಪುರುಷೋತ್ತಮ ಗೌಡ ಮಿತ್ತಂಡೇಲು, ನಿವೃತ್ತ ಸೇನಾನಿ ಕುಶಾಲಪ್ಪ ಗೌಡ ಶಾಂತಿಗುರಿ, ಶೀನ ಪಾಲೆತ್ತಡ್ಕ, ತಿಮ್ಮಪ್ಪ ಗೋಳಿಯಡ್ಕ, ವಾಸಪ್ಪ ಗೌಡ ಶಾಂತಿಗುರಿ, ಮನೋಜ್ ಶೆಟ್ಟಿ ಸೌತೆಗದ್ದೆ, ಬಾಲಕೃಷ್ಣ ಶೆಟ್ಟಿ ಸೌತೆಗದ್ದೆ, ಜಯಪ್ರಕಾಶ್ ಶಾಂತಿಗುರಿ, ಕೊರಗಪ್ಪ ಗೌಡ ಕುಕ್ಕುತ್ತಡಿ, ನವೀನ್ ಕನ್ವಾರೆ, ಸುದರ್ಶನ ಕೋಡಿಗದ್ದೆ, ಹರ್ಷಿತ್ ನಡುವಳಿಕೆ, ಕಿಶೋರ್ ಶಾಂತಿಗುರಿ, ಸತೀಶ್ ಶಾಂತಿಗುರಿ, ಮೋನಪ್ಪ ಗೌಡ ಕೊಡೆಂಕಿರಿ, ಸುವಾಸ್ ಗೌಡ ಕಾಪಾರು, ಶೇಖರ ಗೌಡ ಪಾಲೆತ್ತಡಿ ಸೇರಿದಂತೆ ಊರ ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು. ಶ್ರೀ ರಾಜನ್‍ದೈವದ ನರ್ತನೆಯನ್ನು ಸೋಮಶೇಖರ ಕಲ್ಲುಗುಡ್ಡೆ ಹಾಗೂ ಗುಳಿಗ ದೈವದ ನರ್ತನೆಯನ್ನು ಧರ್ಣಪ್ಪ ಕಲ್ಲುಗುಡ್ಡೆ ನರ್ತಿಸಿದರು.

Also Read  ಸಮುದಾಯಗಳ ಅಭಿವೃದ್ಧಿ ನಿಗಮದಿಂದ ಸಾಲ ಸೌಲಭ್ಯ

error: Content is protected !!
Scroll to Top