ಫೆ 7 ರಂದು ಆತೂರಿನಲ್ಲಿ ಏಕದಿನ ಮತಪ್ರಭಾಷಣ►ನೌಶಾದ್ ಬಾಖವಿ ಪ್ರಮುಖ ಭಾಷಣ

(ನ್ಯೂಸ್ ಕಡಬ) newskadaba.comಆತೂರು,ಫೆ.06.ಆತೂರು ಶಂಸುಲ್ ಉಲಾಮ ಕ್ರಿಯಾ ಸಮಿತಿಯ ಪಂಚ ವಾರ್ಷಿಕೋತ್ಸವ ಪ್ರಯುಕ್ತ ಏಕದಿನ ಮತ ಪ್ರಭಾಷಣ ಆತೂರು ಸಂಶುಲ್ ಉಲಾಮ ನಗರದ ಜೆಎಮ್‍ಜೆ ವಠಾರದಲ್ಲಿ ಫೆ 7 ರಂದು ನಡೆಯಲಿದೆ, ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ವಾಗ್ಮಿ ಕೇರಳ ತಿರುವನಂತಪುರದ ಎ.ಎಂ.ನೌಶಾದ್ ಬಾಖವಿ ಭಾಗವಹಿಸಲಿದ್ದಾರೆ ಎಂದು ಆತೂರು ಎಮ್‍ಜೆಎಂ ಕಾರ್ಯದರ್ಶಿ ಫಲೂಲುದ್ದೀನ್ ಹೇಂತಾರು ಹೇಳಿದರು.

ಅವರು ಮಂಗಳವಾರ ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಆತೂರಿನಲ್ಲಿ ಕುರಾನ್ ಕಂಠಪಾಠಮಾಡುವ ವಿಫುಲ್ ಕಾಲೇಜು ಸ್ಥಾಪನೆಯ ಹಿನ್ನೆಯಲ್ಲಿ ಈ ಮತಪ್ರಭಾಷಣವನ್ನು ಏರ್ಪಡಿಸಲಾಗಿದೆ ಎಂದರು. ಬೆಳಿಗ್ಗೆ ಆತೂರು ಸಂಶುಲ್ ಉಲಾಮ ಕ್ರಿಯಾ ಸಮಿತಿಯ ಅಧ್ಯಕ್ಷ ಹೈದರ್ ಕಲಾಯಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ರಾತ್ರಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶಂಸುಲ್ ಉಲಾಮ ಕ್ರಿಯಾ ಸಮಿತಿಯ ಗೌರವಾಧ್ಯಕ್ಷ ಡಾ|ಕೆ.ಎಂ.ಶಾಹ್ ಮುಸ್ಲಯಾರ್ ದುವಾ ನೆರವೇರಿಸಲಿದ್ದಾರೆ.

ಆತೂರು ಬಿಜೆಎಮ್ ಮದರ್ರಿಸ್ ಅಸಯ್ಯದ್ ಮಹಮ್ಮದ್ ಜುನೈದ್ ಜಫ್ರಿ ತಂಞಲ್ ಆಲ್ ಫೈಝಿ ಅಧ್ಯಕ್ಷತೆವಹಿಸಲಿದ್ದಾರೆ. ಗಂಡಿಬಾಗಿಲು ಕೆ.ಜೆ.ಎಂ ಖತೀಬ ಅನಸ್ ತಂಞಲ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಪಂಡೇಲ್ ಜುಮಾ ಮಸೀದಿಯ ಖತೀಬ ಹನೀಫ್ ಫೈಝಿ ಉಪ್ಪಿನಂಗಡಿ ಜುಮಾ ಮಸೀದಿಯ ಮದರ್ರಿಸ್ ಸಲಾಂ ಫೈಝಿ ಎಡಪ್ಪಾಲ್, ಮಡ್ನೂರು ನೂರುಲ್ ಹುದಾ ಎಜುಕೇಷನ್ ಸೆಂಟರ್‍ನ ಪ್ರಿನ್ಸಿಪಾಲ್ ಹನೀಫ್ ಮದನಿ ದೇಲಂಪಾಡಿ ಆಶಂಸ ಭಾಷಣ ಮಾಡಲಿದ್ದಾರೆ.

Also Read  ಕಡಬ: ರೈಲಿನಿಂದ ನದಿಗೆ ಯುವತಿ ಹಾರಿದ್ದಾಳೆಂಬ ಶಂಕೆ ► ಸುಳ್ಳು ಸುದ್ದಿಯಿಂದ ಹುಡುಕಾಡಿ ಬೇಸ್ತು ಬಿದ್ದ ನಾಗರೀಕರು

 

ಎ.ಎಂ.ನೌಶಾದ್ ಬಾಖವಿ ಮುಖ್ಯಭಾಷಣ ಮಾಡಲಿದ್ದಾರೆ. ಎಸ್‍ಕೆ.ಎಸ್‍ಎಸ್‍ಎಫ್ ನ ರಾಜ್ಯಾಧ್ಯಕ್ಷ ಅನೀಸ್ ಕೌಸರಿ, ಜಿಲ್ಲಾಧ್ಯಕ್ಷ ವಾಸಿಂ ದಾರಿಮಿ ಕಿನ್ಯಾ, ದ.ಕ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್. ಜಿಲ್ಲಾ ವಕ್ಟ್ ಸಲಹಾ ಸಮಿತಿ ಅಧ್ಯಕ್ಷ ಕಣಚೂರು ಮೋನು, ಕಾಂಗ್ರೇಸ್ ಅಲ್ಪ ಸಂಖ್ಯಾತ ವಿಭಾಗದ ರಾಜ್ಯ ಪ್ರ ಕಾರ್ಯದರ್ಶಿ ಟಿ.ಎಂ.ಶಹೀದ್ , ಪುತ್ತೂರು ಸಂಯುಕ್ತ ಜಮಾತ್‍ನ ಅಧ್ಯಕ್ಷ ಇಬ್ರಾಹಿಂ ಕಮ್ಮಾಡಿ, ಎಸ್‍ಕೆಐಎಂವಿಬಿ ಸದಸ್ಯರಾದ ಕೆ.ಎಸ್.ಇಸ್ಮಾಯಿಲ್ ಕಲ್ಲಡ್ಕ, ಅಬೂಬ್‍ಕರ್ ಕಲ್ಲಡ್ಕ, ರಾಜೀವ್ ಗಾಂಧಿ ಸೆನೆಟ್ ಸದಸ್ಯ ಡಾ|ಯು.ಇಫ್ತಿಕಾರ್, ಪ್ರಮುಖರಾದ ನೌಶಾದ್ ಸೂರಲ್ಪಾಡಿ, ಹನೀಫ್ ಮಂಗಳೂರು, ಅಬ್ದುಲ್ ರಝಾಕ್ ಬಿ.ಸಿ.ರೋಡ್, ಸಂಶುದ್ದೀನ್ ಸೂರಲ್ಪಾಡಿ, ಮಹಿಯ್ಯುದ್ಧೀನ್ ಕುಟ್ಟಿ ಕಕ್ಕಿಂಜೆ, ಅಬ್ದುಲ್ ರವೂಫ್ ಸಿ.ಎಂ, ಮಹಮ್ಮದ್ ಮುಸ್ತಾಕ್ ಕದ್ರಿ, ಅಬ್ದುಲ್ ರಝಾಕ್ ಕನ್ನಡಿಕಟ್ಟೆ, ಅಶ್ರಫ್ ಶಾ ಮಾಂತೂರು, ಮುಸ್ತಾಫಾ ಕೆಂಪಿ, ಮೀನಾಡಿ ಅಚ್ಚು ಕಾಸರಗೋಡು, ಹನೀಫ್ ಪಾಜಪಲ್ಲ, ಅಬ್ದುಲ್ ನಾಸಿರ್ ಝೆನಿತ್ ಬಾಂಬಿಲ, ಬದ್ಯುದ್ದೀನ್ ಹೇಂತಾರು, ಎ.ಎಸ್.ಮಹಮ್ಮದ್ ರಫಿಕ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದು ಫಲೂಲುದ್ದೀನ್ ವಿವರಿಸಿದರು.ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಸ್ವಾಗತ ಸಮಿತಿಯ ಅಧ್ಯಕ್ಷ ಎಚ್.ಅಬ್ದುಲ್ ರಝಾಕ್ ಹೇಂತಾರು, ಉಪಾಧ್ಯಕ್ಷ ಅಬ್ದುಲ್ ರಝಾಕ್, ಸ್ವಾಗತ ಸಮಿತಿಯ ಸಂಚಾಲಕ ಬಿ.ಕೆ.ಅಬ್ದುಲ್ ರಝಾಕ್, ಆತೂರು ಸಂಸುಲ್ ಉಲಾಮ ಕ್ರಿಯಾ ಸಮಿತಿಯ ಅಧ್ಯಕ್ಷ ಹೈದರ್ ಕಲಾಯಿ ಮತ್ತಿತರರು ಉಪಸ್ಥಿತರಿದ್ದರು.

Also Read  ಐಟಿಐ ಖಾಲಿ ಸೀಟುಗಳಿಗೆ ಪ್ರವೇಶ - ದಿನಾಂಕ ವಿಸ್ತರಣೆ

 

error: Content is protected !!
Scroll to Top