ಸರಿಯಾದ ದಾಖಲೆ ನೀಡಿದರೂ ಪರವಾನಿಗೆ ನೀಡಲು ವಿಳಂಬ ಧೋರಣೆ ► ಬಿಳಿನೆಲೆ ಗ್ರಾ.ಪಂ. ಅಧ್ಯಕ್ಷರಿಂದ ಲಂಚದ ಬೇಡಿಕೆ: ಕೆ.ಟಿ. ತೋಮ್ಸನ್ ಆರೋಪ

(ನ್ಯೂಸ್ ಕಡಬ) newskadaba.com ಕಡಬ, ಜು.31. ಬಿಳಿನೆಲೆ ಗ್ರಾಮ ಪಂಚಾಯತ್ಗೆ ಕಟ್ಟಡ ಪರವಾನಿಗೆ ಪಡೆಯಲು ಸರಿಯಾದ ದಾಖಲೆಗಳನ್ನು ನೀಡಿದ್ದರೂ ಪಂಚಾಯತಿಯಲ್ಲಿ ಪರವಾನಿಗೆ ನೀಡಲು ವಿಳಂಬ ಧೋರಣೆ ಅನುಸರಿಸುತ್ತಿದ್ದಾರಲ್ಲದೆ ಬೇರೆಯವರ ವೈಯಕ್ತಿಯ ವಿಚಾರದಲ್ಲಿ ನನಗೆ ವಿನಾಃ ಕಾರಣ ಬಡಾವಣೆ ನಿರ್ಮಾಣ ಕೆಲಸಕ್ಕೆ ಅಡ್ಡಿಪಡಿಸಲಾಗುತ್ತಿದೆ ಎಂದು ಕೆ.ಟಿ. ತೋಮ್ಸನ್ ಆರೋಪಿಸಿದ್ದಾರೆ.

ಅವರು ಸೋಮವಾರದಂದು ಕಡಬದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಬಿಳಿನೆಲೆ ಗ್ರಾಮದ ಸ.ನಂ. 9/4ಎರಲ್ಲಿ 0/07 ಎಕ್ರೆ ಜಾಗವು ನನ್ನ ಪಟ್ಟಾ ಜಾಗವಾಗಿರುತ್ತದೆ. ಈ ಜಾಗವು ನೆಟ್ಟಣದಿಂದ ಸುಮಾರು 750 ಮೀಟರ್ ದೂರದಲ್ಲಿರುತ್ತದೆ. ನನಗೆ ಈ ಜಾಗ ಅಲ್ಲದೆ ಸುಮಾರು 4.00 ಎಕ್ರೆ ಜಾಗ ಇದ್ದು ಅದರಲ್ಲಿ ತೋಟವಿರುತ್ತದೆ. 07 ಸೆಂಟ್ಸ್‌ ಜಾಗವನ್ನು ನಾನು ವಾಣಿಜ್ಯ ಉದ್ದೇಶಕ್ಕೆ ಉಪಯೋಗಿಸಿರುತ್ತೇನೆ. ನನ್ನ ಪಟ್ಟಾ ಜಾಗದ ಮೂಲಕವೇ ಬೈಲುಗೆ ಹೋಗಲು ರಸ್ತೆ ಇದ್ದು ಈ ರಸ್ತೆಯಿಂದ 30 ಮೀಟರ್ ಅಂತರದಲ್ಲಿ ವಾಣಿಜ್ಯ ಕಟ್ಟಡಕ್ಕೆ ಬಡವಾಣೆಯ ಅನುಮತಿಯನ್ನು ಪಡೆದಿರುತ್ತೇನೆ. ಮತ್ತು ಕಟ್ಟಡ ಕಟ್ಟಲು ಬೇಕಾದ ಎಲ್ಲಾ ದಾಖಲೆಗಳನ್ನು ಕೊಟ್ಟು ಅನುಮತಿ ಕೇಳಿದ್ದರೂ ಒಂದು ತಿಂಗಳ ಆದರೂ ಪಂಚಾಯತ್ನವರು ಕೊಡುತ್ತಿಲ್ಲ. ನಾನು ಬಡಾವಣೆ ಪರವಾನಿಗೆ ಪಡೆದುಕೊಂಡು ಬಡಾವಣೆ ನಿರ್ಮಾಣದ ಕೆಲಸವನ್ನು ಮಾಡುತ್ತಿದ್ದೇನೆಯೇ ಹೊರತು, ಕಟ್ಟಡ ನಿರ್ಮಾಣದ ಕೆಲಸ ಮಾಡುತ್ತಿಲ್ಲ. ಕಟ್ಟಡದ ಅನುಮತಿ ಸಿಕ್ಕಿದ ಬಳಿಕವೇ ಕಟ್ಟಡ ನಿರ್ಮಿಸಲಾಗುವುದು ಎಂದರು. ನನ್ನ ಕಟ್ಟಡದಲ್ಲಿ ನಾನು ಬಾರ್ ಪ್ರಾರಂಭವಾಗುತ್ತದೆ ಎಂಬ ಕೆಲವರ ಷಡ್ಯಂತ್ರದಿಂದ ಕಡಬ ತಹಶೀಲ್ದಾರರಿಗೆ ದೂರು ನೀಡಲಾಗಿದೆ. ಈ ಬಗ್ಗೆ ಸ್ಥಳಕ್ಕೆ ಬಂದ ಕಡಬ ತಹಸೀಲ್ದಾರ್ ಕಟ್ಟಡ ಕಟ್ಟಿ ಅದರಲ್ಲಿ ಬಾರ್ ಪ್ರಾರಂಭಿಸುತ್ತಿರಾ ಎಂದು ಕೇಳಿದರು. ಅದಕ್ಕೆ ನಾನು ವಾಣಿಜ್ಯ ಕಟ್ಟಡ ಕಟ್ಟಲು ಮಾತ್ರ ನಾನು ಅನುಮತಿ ಕೇಳಿರುತ್ತೇನೆ ಹೊರತು ನಾನು ಬಾರ್ಗೆ ಅನುಮತಿ ಕೇಳಿರುವುದಿಲ್ಲ. ನಾನು ಬಾರ್ ನಡೆಸುವುದು ಇಲ್ಲ. ಕಟ್ಟಡ ಯಾರಿಗೆ ಕೊಡುವುದು, ಯಾರಿಗೆ ಯಾವ ಯಾವ ವ್ಯಾಪಾರಕ್ಕೆ ಕೊಡಬೇಕೆಂದು ನಾನು ಕಟ್ಟಡ ಕಟ್ಟಿದ ಮೇಲೆ ತೀರ್ಮಾನಿಸುವುದು ಮತ್ತು ಅದಕ್ಕೆ ಕೊಡಬೇಕು ಇದಕ್ಕೆ ಕೊಡಬೇಕು ಎಂದು ಹೇಳಲು ಯಾರಿಗೂ ಹಕ್ಕು ಇರುವುದಿಲ್ಲ. ಹಾಗೆ ಹೇಳುವುದು ನನ್ನ ಮೂಲಭೂತ ಹಕ್ಕಿಗೆ ಪ್ರಶ್ನೆ ಮಾಡಿದಂತೆ ಆಗುತ್ತದೆ ಎಂದ ಅವರು ತಹಸೀಲ್ದಾರ್ ಈ ರೀತಿ ಕೇಳಲು ಅವರ ಡ್ರೈವರ್ ಪಿ.ಆರ್ ಉದಯ ಕುಮಾರ್ ನೇರ ಕಾರಣ ಎಂದು ಅವರು ಆರೋಪಿಸಿದ್ದಾರೆ.

ಗ್ರಾ.ಪಂ.ಅಧ್ಯಕ್ಷೆ ಶಾರಾದರವರವರಿಂದ ಹಣದ ಬೇಡಿಕೆ:
ನಾನು ಜೂನ್ 24ರಂದು ಬಡಾವಣೆ ನಿವೇಶನದ ಅರ್ಜಿ ಸಲ್ಲಿಸಿದ ಸಂದರ್ಭ ನನ್ನನ್ನು ಪ್ರತ್ಯೇಕವಾಗಿ ಕರೆದು ನನ್ನಲ್ಲಿ ಹಣದ ಬೇಡಿಕೆ ಇಟ್ಟಿದ್ದರು. ಆದರೆ ಅದನ್ನು ನಾನು ನಿರಾಕರಿಸಿದ ಕಾರಣ ತಿಂಗಳಿಗೆ ಒಂದು ಸಾಮಾನ್ಯ ಸಭೆ ನಡೆದರೂ ನನ್ನ ಬಡಾವಣೆಯ ಅರ್ಜಿಯನ್ನು ಉದ್ದೇಶಪುರ್ವಕವಾಗಿ ವಿಳಂಬ ಮಾಡುವುದರ ಮೂಲಕ ನನ್ನ ಮೂಲಭೂತ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಜು.28ರಂದು ಸಂಜೆ ನಾನು, ನನ್ನ ಮಗ ಹಾಗೂ ನನ್ನ ಕೆಲಸದಾಳು ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಅಲ್ಲಿಗೆ ಬಂದ 15 ಜನ ಹೆಂಗಸರು ಹಾಗೂ ಗಂಡಸರ ಗುಂಪೊಂದು ನೀನ್ನ ಜಾಗದಲ್ಲಿ ಬಾರ್ಗೆ ಜಾಗ ಕೊಡುತ್ತೀಯಾ. ಅದಕ್ಕಾಗಿ ಕಟ್ಟಡ ಕಟ್ಟುತ್ತೀಯಾ ಎಂದು ಹೇಳಿ ನಿನ್ನನ್ನು ಕೊಲ್ಲುತ್ತೇನೆ ಎಂದು ಅಸಭ್ಯ ಶಬ್ದಗಳಿಂದ ಬೊಬ್ಬೆ ಹಾಕಿದರಲ್ಲದೆ, ನನ್ನ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ನಮ್ಮನ್ನು ಓಡಿಸಿಕೊಂಡು ಬಂದ ಆ ಗುಂಪು ಒಳಹೊಕ್ಕಿದ ಕೂಡಲೇ ನಾವು ಜೀವ ಭಯದಿಂದ ಓಡಿ ತಪ್ಪಿಸಿದೆವು. ಇದು ಪುರ್ವಯೋಜಿತ ಕೃತ್ಯವಾಗಿದ್ದು, ಇದು ಗ್ರಾಪಂ.ಅಧ್ಯಕ್ಷೆ ಶಾರದಾ ದಿನೇಶ್ ಹಾಗೂ ಕಡಬ ತಹಸೀಲ್ದಾರ್ ಜೀಪು ಚಾಲಕ ಪಿ.ಆರ್.ಉದಯ ಕುಮಾರ್ ಎಂಬವರ ಪತ್ನಿ ಶೈಲಾ ಎಂಬವರ ನೇತೃತ್ವದಲ್ಲಿ ಆಗಿದೆ ಎಂದರು.

Also Read  ತಲಕಾವೇರಿ ಗುಡ್ಡ ಕುಸಿತ➤ಬಂಟ್ವಾಳದ ಓರ್ವ ಅರ್ಚಕರು ನಾಪತ್ತೆ..!!!

ಪತ್ರಿಕಾಗೋಷ್ಟಿಯಲ್ಲಿ ಸಿ.ಸಿ.ಪಿಲೀಫ್, ಅಜೀಶ್ ತೋಮ್ಸನ್ ಉಪಸ್ಥಿತರಿದ್ದರು.

error: Content is protected !!
Scroll to Top