ಬಾಯಿ ಕ್ಯಾನ್ಸರ್ ತಡೆಗಟ್ಟಬಹುದು ► ಹರ್ಷದ್ ವರ್ಕಾಡಿ

(ನ್ಯೂಸ್ ಕಡಬ) newskadaba.com ಕಡಬ,ಫೆ.05.“ವಿಶ್ವ ಕ್ಯಾನ್ಸರ್ ತಿಳುವಳಿಕಾ ದಿನ ಫೆಬ್ರವರಿ 4” ಇದರ ಅಂಗವಾಗಿ ಸುರಕ್ಷಾ ದಂತ ಚಿಕಿತ್ಸಾಲಯ ಹೊಸಂಗಡಿ, ಮಂಜೇಶ್ವರ ಇಲ್ಲಿ ಉಚಿತ ಬಾಯಿ ಕ್ಯಾನ್ಸರ್ ತಪಾಸಣಾ ಶಿಬಿರ ಮತ್ತು ಮಾಹಿತಿ ಶಿಬಿರವನ್ನು ಮಾನ್ಯ ಹರ್ಷದ್ ವರ್ಕಾಡಿ, ಕಾಸರಗೋಡು ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರು ಇವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಬಾಯಿ ಕ್ಯಾನ್ಸರ್ ಎನ್ನುವುದು ಹೆಚ್ಚಾಗಿ ಎಲೆ ಅಡಿಕೆ, ಹೊಗೆ ಸೊಪ್ಪು, ಗುಟ್ಕಾ, ಪಾನ್ ಪರಾಗ್, ಬೀಡಿ ಸಿಗರೇಟ್, ಮುಂತಾದ ತಂಬಾಕು ಉತ್ಪನ್ನಗಳಿಂದ ಬರುತ್ತದೆ ಮತ್ತು ಈ ಚಟಗಳಿಂದ ದೂರವಾದಲ್ಲಿ ಬಹಳ ಸುಲಭವಾಗಿ ಈ ಬಾಯಿ ಕ್ಯಾನ್ಸರ್‍ನ್ನು ತಡೆಗಟ್ಟಬಹುದು ಎಂದು ಈ ಶ್ರೀ ಹರ್ಷಾದ್ ವರ್ಕಾಡಿ ಕರೆ ನೀಡಿದರು. ಕಾಸರಗೋಡು ಜಿಲ್ಲೆಯ ಜನರು ಒಂದು ತಿಂಗಳ ಕಾಲ ನಡೆಯುವ ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಿ ಎಂದರು. ಅದೇ ರೀತಿ ಡಾ| ಮುರಲೀ ಮೋಹನ್ ಮತ್ತು ಡಾ| ರಾಜಶ್ರೀಯವರ ಸಾಮಾಜಿಕ ಬದ್ಧತೆಯನ್ನು ಕೊಂಡಾಡಿದರು.

ಸುರಾಕ್ಷ ದಂತ ಚಿಕಿತ್ಸಾಲಯದ ಡಾ| ಮುರಲೀ ಮೋಹನ್ ಚೂಂತಾರು ಇವರು ಮಾತನಾಡಿ ಫೆಬ್ರವರಿ 4ರಿಂದ 28ರ ವರೆಗೆ ಈ ಶಿಬಿರ ನಡೆಯಲಿದ್ದು ಸಾರ್ವಜನಿಕರು ಈ ಶಿಬಿರದ ಪ್ರಯೋಜನ ಪಡೆಯಿರಿ ಮತ್ತು ಈಗಾಗಲೇ ತಂಬಾಕು ಉತ್ಪನ್ನ ಸೇವಿಸಿ ಬಾಯಿ ಹುಣ್ಣು, ಬಾಯಿ ಉರಿತ, ಬಾಯಿ ತೆರೆಯಾಲಾಗದಂತಹಾ ಸ್ಥಿತಿ ಅಥವಾ ಬಾಯಿಯಲ್ಲಿ ಬಿಳಿ ಅಥವಾ ಕೆಂಪು ಕಲೆಗಳು ಇದ್ದಲ್ಲಿ ತಕ್ಷಣವೇ ವೈದ್ಯರ ಸಲಹೆ ಪಡೆಯಿರಿ. ಆರಂಭಿಕ ಹಂತದಲ್ಲಿಯೇ ಬಾಯಿ ಕ್ಯಾನ್ಸರ್‍ನ್ನು ಗುರುತಿಸಿ ಚಿಕಿತ್ಸೆ ನೀಡಿದಲ್ಲಿ ಸಂಪೂರ್ಣವಾಗಿ ಗುಣಪಡಿಸಬಹುದು ಎಂದು ನುಡಿದರು. ಸುರಕ್ಷಾ ದಂತ ಚಿಕಿತ್ಸಾಲಯದ ಡಾ| ರಾಜಶ್ರೀ ಮೋಹನ್, ಡಾ| ಶಮ್ನಾ, ಡಾ| ನಿಶಿತಾ ಉಪಸ್ಥಿತರಿದ್ದರು. ಹೊಸಂಗಡಿಯ ಹಿರಿಯರಾದ ಯು.ಕೆ ಅಹ್ಮದ್, ನಾರಾಯಣ ಉಪಸ್ಥಿತರಿದ್ದರು. ಚಿಕಿತ್ಸಾಲಯದ ರಮ್ಯ, ಪ್ರಿಯ, ವಿಜೇತ, ಸೌಮ್ಯ, ವಾಣಿ ಉಪಸ್ಥಿತರಿದ್ದರು. ಸುರಕ್ಷಾ ದಂತ ಚಿಕಿತ್ಸಾಲಯ ಮತ್ತು ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ಇದರ ಜಂಟಿ ಆಶ್ರಯದಲ್ಲಿ ಈ ಶಿಬಿರ ನಡೆಯುತ್ತಿದೆ. ಫೆಬ್ರವರಿ 4ರಂದು ಸುಮಾರು 20 ಮಂದಿ ರೋಗಿಗಳು ಉಚಿತ ಸಲಹೆ ಮತ್ತು ಮಾರ್ಗದರ್ಶನ ಪಡೆದರು.

error: Content is protected !!

Join the Group

Join WhatsApp Group