ಗಂಡಿಬಾಗಿಲು: ಎಸ್.ಕೆ.ಎಸ್.ಎಸ್.ಎಫ್. ವತಿಯಿಂದ ► ಸಮಸ್ತ ಅಗಲಿದ ನೇತಾರರ ಅನುಸ್ಮರಣೆ, ತಹ್ಲೀಲ್ ಸಮರ್ಪಣೆ

 (ನ್ಯೂಸ್ ಕಡಬ) newskadaba.comಉಪ್ಪಿನಂಗಡಿ,ಫೆ.04.: ಎಸ್.ಕೆ.ಎಸ್.ಎಸ್.ಎಫ್. ಗಂಡಿಬಾಗಿಲು ಶಾಖೆ ಆಶ್ರಯದಲ್ಲಿ ಸಮಸ್ತ ಅಗಲಿದ ನೇತಾರರ ಅನುಸ್ಮರಣೆ, ಶಂಸುಲ್ ಉಲಮಾ ಮೌಲೀದ್ ಹಾಗೂ ಖತಮುಲ್ ಕುರ್‍ಆನ್ ಮತ್ತು ತಹ್ಲೀಲ್ ಸಮರ್ಪಣೆ ಕಾರ್ಯಕ್ರಮ ಫೆ. 3ರಂದು ಗಂಡಿಬಾಗಿಲು ಜುಮಾ ಮಸೀದಿ ವಠಾರದಲ್ಲಿ ಜರಗಿತು. ಸಮಾರಂಭವನ್ನು ಎನ್.ಪಿ.ಎಂ. ಸಯ್ಯದ್ ಜಲಾಲುದ್ದೀನ್ ತಂಙಳ್ ಅಲ್ ಬುಖಾರಿ ಕುನ್ನಂಗೈ-ಕೇರಳ (ಎಝಿಮಲ ತಂಙಳ್) ಉದ್ಘಾಟಿಸಿ ಮಾತನಾಡಿ ನಾವುಗಳು ನಮ್ಮ ಇಚ್ಚಾನುಸಾರ ಬದುಕು ನಡೆಸುವಾಗ ನೆಬಿವರ್ಯರು ತೋರಿಸಿಕೊಟ್ಟ ಮಾರ್ಗದಲ್ಲಿ ಅಲ್ಲಾಹು ಕಲ್ಪಿಸಿದ ರೀತಿಯಲ್ಲಿ ಜೀವನ ನಿರ್ವಹಣೆ ಮಾಡುವ ಮೂಲಕ ಸಮಾಜದಲ್ಲಿ ಗುರುತಿಸಿಕೊಳ್ಳುವಂತಾಗಬೇಕು ಎಂದು ಹೇಳಿದರು.

ಗಂಡಿಬಾಗಿಲು ಜುಮಾ ಮಸೀದಿ ಖತೀಬ್ ಅಸ್ಸಯ್ಯದ್ ಅನಸ್ ತಂಙಳ್ ಅಲ್ ಅಝ್‍ಹರಿ ನೇತೃತ್ವದಲ್ಲಿ ನಡೆದ ಖತಮುಲ್ ಕುರ್‍ಆನ್ ಮತ್ತು ತಹ್ಲೀಲ್ ಸಮರ್ಪಣೆ ಕಾರ್ಯಕ್ರಮದಲ್ಲಿ ಅಲ್‍ಹಾಜ್ ಡಾ| ಕೆ.ಎಂ. ಶಾಹ್ ಮುಸ್ಲಿಯಾರ್ ಆತೂರು ದುವಾಶೀರ್ವಚನ ನೀಡಿದರು. ಆತೂರು ಬದ್ರಿಯಾ ಜುಮಾ ಮಸೀದಿ ಮುದರ್ರಿಸ್ ಮುಹಮ್ಮದ್ ಜುನೈದ್ ಜಿಫ್ರಿ ತಂಙಳ್ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಆತೂರು ಮೊಹಿಯುದ್ದೀನ್ ಜುಮಾ ಮಸೀದಿ ಖತೀಬ್ ಮುರ್ಶಿದ್ ಫೈಝಿ ಸಂದರ್ಭೋಚಿತವಾಗಿ ಮಾತನಾಡಿದರು.

Also Read  ಎಸ್ಕೆಎಸ್ಎಸ್ಎಫ್ ಮಾಣಿ ಕ್ಲಸ್ಟರ್ ವತಿಯಿಂದ ಆರೋಗ್ಯ ಕೇಂದ್ರದಲ್ಲಿ ಸ್ವಚ್ಛತೆ

 

ಮಅಮೂನ್  ಹುದವಿ ವಂಡೂರು ಕೇರಳ ಧಾರ್ಮಿಕ ಉಪನ್ಯಾಸ ನೀಡಿದರು. ಸಮಾರಂಭದಲ್ಲಿ ಗಂಡಿಬಾಗಿಲು ಕುತುಬಿಯಾ ಜುಮಾ ಮಸೀದಿ ಅಧ್ಯಕ್ಷ ಹಸೈನಾರ್ ಹಾಜಿ ಕೊೈಲ, ಕಾರ್ಯದರ್ಶಿ ಜಿ. ಮಹಮ್ಮದ್ ರಫೀಕ್, ಕುದ್ಲೂರು ಮಸೀದಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಮರುವೇಲ್, ಕೆಮ್ಮಾರ ಹಿದಾಯತುಲ್ ಇಸ್ಲಾಂ ಕಮಿಟಿ ಅಧ್ಯಕ್ಷ ಎನ್.ಎ. ಇಸಾಕ್, ಮಾಡನ್ನೂರು ಎನ್.ಹೆಚ್.ಎ.ಐ. ಅಧ್ಯಕ್ಷ ಫಲೂಲುದ್ದೀನ್ ಹೇಂತಾರು, ಆತೂರು ಬದ್ರಿಯಾ ಜುಮಾ ಮಸೀದಿ ಉಪಾಧ್ಯಕ್ಷ ಬಿ.ಕೆ. ಅಬ್ದುಲ್ ಅಜೀಝ್, ಗಂಡಿಬಾಗಿಲು ಕುತುಬಿಯಾ ಜುಮಾ ಮಸೀದಿ ಸಮಿತಿಯ ಜಿ. ಯೂಸುಫ್ ಹಾಜಿ, ಆತೂರು ಮಸೀದಿ ಮಾಜಿ ಅಧ್ಯಕ್ಷ ಮಹಮ್ಮದ್ ಹಾಜಿ, ಗಂಡಿಬಾಗಿಲು ಹಿಮಾಯತುಲ್ ಇಸ್ಲಾಂ ಮದ್ರಸದ ಮುಅದ್ದಿಂ ರಫೀಕ್ ಮುಸ್ಲಿಯಾರ್, ಹಾರಿಸ್ ಉಪಸ್ಥಿತರಿದ್ದರು. ಗಂಡಿಬಾಗಿಲು ಹಿಮಾಯತುಲ್ ಇಸ್ಲಾಂ ಮದ್ರಸದ ಸದರ್ ಮುಅಲ್ಲಿಂ ಮೂಸಾ ಮುಸ್ಲಿಯಾರ್ ಸ್ವಾಗತಿಸಿ, ಎಸ್.ಕೆ.ಎಸ್.ಎಸ್.ಎಫ್. ನಿಸಾರ್ ಗಂಡಿಬಾಗಿಲು ವಂದಿಸಿದರು. ಅಧ್ಯಕ್ಷ ಎಸ್.ಪಿ. ಖಲಂದರ್, ಸಂಘಟನಾ ಕಾರ್ಯದರ್ಶಿ ಅಬ್ದುಲ್ ಲತೀಫ್, ಕಾರ್ಯದರ್ಶಿ ಝಿಯಾದ್, ಆಶಿಫ್, ಇಸಾಕ್ ಬೊಳುಂಬುಡ, ಅನ್ಸಾರ್ ಜಿ. ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಎಂ.ಕೆ. ಅಶ್ರಫ್ ಮುಸ್ಲಿಯಾರ್ ಕಾರ್ಯಕ್ರಮ ನಿರೂಪಿಸಿದರು.

Also Read  ಮಾತು ಕೇಳದೆ 2ತಿಂಗಳ ಮಗುವಿಗೆ ಹೊಡೆಯುತ್ತಿದ್ದ ಬಾಲಕ ➤ ಕೋಪಕ್ಕೆ ಮಗನನ್ನೇ ಕೊಂದ ತಾಯಿ

 

 

error: Content is protected !!