ಸಂಗೀತ ಸ್ಪರ್ಧೆಯಲ್ಲಿ ವಿವೇಕಾನಂದ ಕಾಲೇಜಿಗೆ ಚಾಂಪಿಯನ್‍ಶಿಪ್

(ನ್ಯೂಸ್ ಕಡಬ) newskadaba.com ಕಡಬ,ಫೆ.04.ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಲಲಿತಕಲಾ ಸಂಘದ ವತಿಯಿಂದ ರವೀಂದ್ರ ಕಲಾಭವನದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಅಂತರ್ ಕಾಲೇಜು  ಸಂಗೀತ ಸ್ಪರ್ಧೆಯಲ್ಲಿ ಪುತ್ತೂರಿನ ವಿವೇಕಾನಂದ ಪದವಿ ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ ಸ್ಥಾನವನ್ನು ತಮ್ಮದಾಗಿಸಿಕೊಂಡರೆ, ಉಜಿರೆಯ ಎಸ್.ಡಿ.ಎಂ ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಸ್ಥಾನವನ್ನು ಬಾಚಿಕೊಂಡರು.

 ಈ ಸ್ಪರ್ಧೆಯಲ್ಲಿ ಸುಮಾರು 16 ಕಾಲೇಜುಗಳ ಸುಮಾರು 145 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಭಾವಗೀತೆ, ಈಸ್ಟರ್ನ್ ಸೋಲೋ, ಜಾನಪದ ಗೀತೆ ಸೋಲೋ, ದೇಶಭಕ್ತಿಗೀತೆ, ಜನಪದ ಗೀತೆ ಸ್ಪರ್ಧೆಗಳು ರವೀಂದ್ರ ಕಲಾಭವನದಲ್ಲಿ ನಡೆದರೆ, ಕ್ಲಾಸಿಕಲ್ ಸೋಲೋ, ಪರ್ಕಶನ್ ಸೋಲೋ, ನಾನ್- ಪರ್ಕಶನ್ ಸೋಲೋ, ಯಕ್ಷಗಾನ ಭಾಗವತಿಗೆ ಮೊದಲಾದ ಸ್ಪರ್ಧೆಗಳು ಶಿವರಾಮ ಕಾರಂತ ಸಭಾಭವನದಲ್ಲಿ ಸಂಪನ್ನಗೊಂಡವು. ವಿದುಷಿ ಉಮಾಶಂಕರಿ, ವಿಧ್ವಾನ್ ಕೆ.ಆರ್. ರಾಘವೇಂದ್ರ ಆಚಾರ್ಯ, ವಿದುಷಿ ರಮಾ ನಾಗೇಂದ್ರ, ವಿದುಷಿ ಅರುಣಾ ಕೆ.ಎಸ್. ಭಟ್, ವಿದ್ವಾನ್ ರಮಾನಾಥ್ ಕೋಟೇಕಾರ್ ಮತ್ತು  ವಿದ್ವಾನ್ ರವಿಕಿರಣ್ ರಾವ್ ಕಾರ್ಯಕ್ರಮದ ತೀರ್ಪುಗಾರರಾಗಿದ್ದರು. ಪ್ರಾಂಶುಪಾಲ ಡಾ.ಉದಯ್ ಕುಮಾರ್ ಎಂ.ಎ ಮತ್ತು ವಿದ್ಯಾರ್ಥಿ ಸಂಘದ ಉಪನಿರ್ದೇಶಕ ಡಾ. ಹರೀಶ್ ಬಹುಮಾನ ವಿತರಿಸಿದರು. ಲಲಿತ ಕಲಾ ಸಂಘದ ಉಪ ನಿರ್ದೇಶಕಿ ಡಾ. ಸುಮಾ ಟಿ. ರೋಡನ್ನವರ್, ಡಾ. ಸುಧಾ ಎನ್.ವೈದ್ಯ ಮೊದಲಾದವರು ಉಪಸ್ಥಿತರಿದ್ದರು.

Also Read  ಉಪ್ಪಿನಂಗಡಿ ಘಟಕದಲ್ಲಿ ವನಮಹೋತ್ಸವ

error: Content is protected !!
Scroll to Top