ರೈತರ ಮಕ್ಕಳಿಗೆ 10 ತಿಂಗಳ ಉಚಿತ ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.comಮಂಗಳೂರು,ಫೆ.04 ರೈತರ ಮಕ್ಕಳಿಗೆ ಒಟ್ಟು 10 ತಿಂಗಳ ತೋಟಗಾರಿಕೆ ತರಬೇತಿಯನ್ನು ತೋಟಗಾರಿಕೆ ತರಬೇತಿ ಕೇಂದ್ರ, ಮೂಡಿಗೆರೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ .ದಿನಾಂಕ 02-05-2019 ರಿಂದ 29-02-2020 ರವರೆಗೆ ನಡೆಸಲಾಗುವುದು.

ಕನ್ನಡ ವಿಷಯಗಳೊಂದಿಗೆ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಹಾಗೂ ಪೋಷಕರ ಹೆಸರಲ್ಲಿ ಕಡ್ಡಾಯವಾಗಿ ಜಮೀನು ಹೊಂದಿದ್ದು, ಸ್ವಂತ ಸಾಗುವಳಿ ಮಾಡುತ್ತಿರಬೇಕು. ವಯೋಮಿತಿ-ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರಿಗೆ ಕನಿಷ್ಟ 18 ವರ್ಷ ಗರಿಷ್ಟ 33 ವರ್ಷ, ಇತರರಿಗೆ ಕನಿಷ್ಟ 18 ವರ್ಷ ಮತ್ತು ಗರಿಷ್ಟ 30 ವರ್ಷ. ಅರ್ಜಿ ಶುಲ್ಕ ಸಾಮಾನ್ಯ ಅಭ್ಯರ್ಥಿಗಳಿಗೆ ರೂ.30/- ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ರೂ.15/- ಫೆಬ್ರವರಿ 18 ರಿಂದ 28ರವರೆಗೆ ಅರ್ಜಿ ಪಡೆಯಬಹುದು. ಅರ್ಜಿ ಸ್ವೀಕರಿಸಲು ಕೊನೆ ದಿನ ಫೆಬ್ರವರಿ 28. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಮಾರ್ಚ್ 2 ರಂದು ತೋಟಗಾರಿಕೆ ಉಪನಿರ್ದೇಶಕರ ಕಚೇರಿ ಬೆಂದೂರುವೆಲ್, ಮಂಗಳೂರು ಇಲ್ಲಿಗೆ ಸಂದರ್ಶನಕ್ಕಾಗಿ ಹಾಜರಾಗಬೇಕು.

Also Read  ಡಾ ಮುರಲೀಮೋಹನ್ ಚೂಂತಾರುರವರಿಗೆ ರಾಷ್ಟ್ರಪತಿ ಪದಕ

ಆಸಕ್ತಿಯುಳ್ಳ ದಕ್ಷಿಣ ಕನ್ನಡ ಜಿಲ್ಲೆಯ ಅಭ್ಯರ್ಥಿಗಳು ತೋಟಗಾರಿಕೆ ತಾಲೂಕು ಕಚೇರಿಯಿಂದ ಅಥವಾ www.horticulture.kar.nic.in ಅರ್ಜಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಹಾಗೂ ಅರ್ಜಿ ಶುಲ್ಕದ ಬಾಬ್ತುನ್ನು ಇಂಡಿಯನ್ ಪೋಸ್ಟಲ್ ಆರ್ಡರ್(IPO) ಡಿಮ್ಯಾಂಡ್ ಡ್ರಾಪ್ಟ್(DD) ನ್ನು ತೋಟಗಾರಿಕೆ ಉಪನಿರ್ದೇಶಕರು (ಜಿಪಂ) ಮಂಗಳೂರು ರವರ ಹೆಸರಿನಲ್ಲಿ ಪಡೆದು, ಅರ್ಜಿಯನ್ನು ತೋಟಗಾರಿಕೆ ಉಪನಿರ್ದೇಶಕರ ಕಚೇರಿ ಬೆಂದೂರು, ಮಂಗಳೂರು ಇಲ್ಲಿಗೆ ಸಲ್ಲಿಸಬೇಕು. ತರಬೇತಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.1,250/- ಗಳ ಮಾಸಿಕ ಶಿಷ್ಯವೇತನ ನೀಡಲಾಗುವುದು.ಷರತ್ತು ಹಾಗೂ ಇತರೇ ಮಾಹಿತಿಗಳಿಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು(ರಾವ) ಕಚೇರಿ, ಬೆಂದೂರುವೆಲ್, ಮಂಗಳೂರು ಹಾಗೂ ತೋಟಗಾರಿಕೆ ಉಪನಿರ್ದೇಶಕರ ಕಚೇರಿ, ಬೆಂದೂರುವೆಲ್, ಮಂಗಳೂರು ದೂರವಾಣಿ ಸಂಖ್ಯೆ : 0824-2423628 ಸಂಪರ್ಕಿಸಲು ತೋಟಗಾರಿಕೆ ಇಲಾಖೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.

Also Read  ನೇಪಾಳದಲ್ಲಿ ನಡುಗಿದ ಭೂಮಿ ➤ 2 ಗಂಟೆಗಳ ಅಂತರದಲ್ಲಿ ಎರಡು ಬಾರಿ ಭೂಕಂಪ

error: Content is protected !!
Scroll to Top