ಕಡಬ: .ಜೇಸಿಐ ವತಿಯಿಂದ ರಾಷ್ಟ್ರೀಯ ಭಾವೈಕ್ಯತಾ ದಿನಾಚರಣೆ► 10 ಸಾವಿರಕ್ಕಿಂತಲೂ ಮಿಕ್ಕಿ ವಿದ್ಯಾರ್ಥಿಗಳಿಗೆ ಪ್ರಮಾಣವಚನ

(ನ್ಯೂಸ್ ಕಡಬ) newskadaba.com ಕಡಬ, ಫೆ.04.ಜೇಸಿಐ ಕಡಬ ಕದಂಬ ಘಟಕದ ವತಿಯಿಂದ ಕಡಬ ಪರಿಸರದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಶನಿವಾರ ರಾಷ್ಟ್ರೀಯ ಭಾವೈಕ್ಯತಾ ದಿನಾಚರಣೆ ಕಾರ್ಯಕ್ರಮವನ್ನು ನಡೆಸಿ ಸುಮಾರು 10 ಸಾವಿರಕ್ಕಿಂತಲೂ ಮಿಕ್ಕಿ ವಿದ್ಯಾರ್ಥಿಗಳಿಗೆ ಸದ್ಭಾವನ ಪ್ರಮಾಣವಚನ ಬೋಧಿಸಲಾಯಿತು.

ಜೇಸಿ ಘಟಕದ ಅಧ್ಯಕ್ಷ ರವಿಚಂದ್ರ ಪಡುಬೆಟ್ಟು ಹಾಗೂ ಕಾರ್ಯದರ್ಶಿ ಕಾಶೀನಾಥ ಗೋಗಟೆ ಅವರ ನೇತೃತ್ವದಲ್ಲಿ ಕಡಬದ ಸರಸ್ವತೀ ಪ.ಪೂ.ಕಾಲೇಜು, ಸರಸ್ವತೀ ಪ್ರೌಢಶಾಲೆ, ಸರಸ್ವತೀ ಪ್ರಾಥಮಿಕ ಶಾಲೆ, ಸೈಂಟ್ ಜೋಕಿಮ್ಸ್ ಪ.ಪೂ.ಕಾಲೇಜು, ಸೈಂಟ್ ಜೋಕಿಮ್ಸ್ ಪ್ರೌಢಶಾಲೆ, ಸೈಂಟ್ ಜೋಕಿಮ್ಸ್ ಪ್ರಾಥಮಿಕ ಶಾಲೆ, ಸೈಂಟ್ ಆ್ಯನ್ಸ್ ಪ್ರೌಢಶಾಲೆ, ಸೈಂಟ್ ಆ್ಯನ್ಸ್ ಪ್ರಾಥಮಿಕ ಶಾಲೆ, ಕ್ನಾನಾಯ ಜ್ಯೋತಿ ಆಂಗ್ಲಮಾಧ್ಯಮ ಶಾಲೆ, ಸರಕಾರಿ ಪ.ಪೂ.ಕಾಲೇಜು, ಸರಕಾರಿ ಪ್ರೌಢಶಾಲೆ, ಕಡಬ ಏಮ್ಸ್ ಪದವಿ ಕಾಲೇಜು, ನೆಟ್ಟಣ ಮೌಂಟ್ ಸಿಯೋನ್ ಶಾಲೆ, ಮರ್ದಾಳ ಗುಡ್‍ಶಫರ್ಡ್ ಶಾಲೆ, ಮರ್ದಾಳ ಸೈಂಟ್ ಮೇರಿಸ್ ಪ್ರೌಢಶಾಲೆ, ಕುಟ್ರುಪ್ಪಾಡಿ ಪ್ರಾಥಮಿಕ ಶಾಲೆ, ಕಡಬದಲ್ಲಿ ನಡೆಯುತ್ತಿರುವ ಮದ್ಯವರ್ಜನ ಶಿಬಿರ, ಕೊರುಂದೂರು ಅಂಗನವಾಡಿ ಕೇಂದ್ರದಲ್ಲಿ ಜರಗಿದ ಬಾಲಮೇಳ ಹಾಗೂ ಅಕ್ಷರೋತ್ಸವ ಕಾರ್ಯಕ್ರಮದಲ್ಲಿ ಜೇಸಿ ಸದಸ್ಯರು ಭಾಗವಹಿಸಿ ನನ್ನ ಮನೆ, ವಿದ್ಯಾಲಯ ಮತ್ತು ಸಮಾಜದಲ್ಲಿ ಆರೋಗ್ಯಕರ ಉತ್ತಮ ವಾತಾವರಣ ನಿರ್ಮಾಣ ಮಾಡುವಲ್ಲಿ ಸರ್ವರ ಮನವೊಲಿಸಿ ಪ್ರೇರಣೆ ನೀಡುತ್ತೇನೆ.

Also Read  ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ ಬ್ರಾಂಡ್ ಅಂಬಾಸಿಡರ್ ಆಗಿ ರಶ್ಮಿಕಾ ಮಂದಣ್ಣ ನೇಮಕ

ನನಗೆ, ನನ್ನ ಕುಟುಂಬಕ್ಕೆ ಹಾಗೂ ನನ್ನ ದೇಶಕ್ಕೆ ಗೌರವ ತರುವ ತತ್ವಗಳನ್ನು ಆಧರಿಸುತ್ತೇನೆ. ಸುಳ್ಳು ವಂಚನೆ ಹಾಗೂ ಕಳ್ಳತನಗಳಲ್ಲಿ ಭಾಗಿಯಾಗುವ ಯಾವುದೇ ಆಮಿಷಗಳಿಂದ ದೂರವಿರುತ್ತೇನೆ. ಪ್ರಾಮಾಣಿಕ, ವೈಯಕ್ತಿಕ ಐಕ್ಯತೆ, ಇತರರಿಗೆ ಗೌರವ ನೀಡುವ ಜವಾಬ್ದಾರಿಯನ್ನು ಜೀವನದುದ್ದಕ್ಕೂ ಪಾಲಿಸುತ್ತೇನೆಂದು ವಚನ ನೀಡುತ್ತೇನೆ ಎನ್ನುವ ಭಾವೈಕ್ಯತಾ ಪ್ರಮಾಣವಚನವನ್ನು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಬೋಧಿಸಲಾಯಿತು.

Also Read  ಸರ ದೋಚಿ ಪರಾರಿಯಾದ ಖರ್ತನಾಕ್ ಕಳ್ಳ!

error: Content is protected !!
Scroll to Top