ಶಿಕ್ಷಣ ಹೃದಯ ವೈಶಾಲ್ಯತೆಗೆ ಪ್ರೇರಣೆಯಾಗಬೇಕು► ಕಡಬ ಸೈಂಟ್ ಜೋಕಿಮ್ಸ್ ವಿದ್ಯಾ ಸಂಸ್ಥೆಯಲ್ಲಿ ಮಂಗಳೂರು ಧರ್ಮಾಧ್ಯಕ್ಷರ ಸಂದೇಶ

(ನ್ಯೂಸ್ ಕಡಬ) newskadaba.com ಕಡಬ, ಫೆ.04. ಶಿಕ್ಷಣ ಎನ್ನುವುದು ಕೇವಲ ಜ್ಞಾನ ಸಂಪಾದನೆ ಮಾಡಿ ಸ್ಥಾನಮಾನಗಳಿಸುದೇ ಧ್ಯೇಯವಾಗದೆ, ಅದು ಹೃದಯ ವೈಶಾಲ್ಯತೆಯನ್ನು ಪ್ರೇರೇಪಿಸಿ ಸಮಾಜದಲ್ಲಿ ಸೌಹಾರ್ದ ವಾತಾವರಣ ನಿರ್ಮಾಣಕ್ಕೆ ಕಾರಣವಾಗಬೇಕು, ಆ ಮೂಲಕ ದೇಶದ ಉತ್ತಮ ಪ್ರಜೆಗಳಾಗಬೇಕು ಎಂದು ಕ್ಯಾಥೋಲಿಕ್ ಧರ್ಮ ಸಭೆಯ ಮಂಗಳೂರು ಧರ್ಮ ಪ್ರಾಂತ್ಯದ ನೂತನ ಧರ್ಮಾಧ್ಯಕ್ಷ ಶ್ರೀ ಪೀಟರ್ ಪಾವ್ಲ್ ಸಲ್ದಾನ ಹೇಳಿದರು.

ಅವರು ಶನಿವಾರ ಕಡಬ ಸೈಂಟ್ ಜೋಕಿಮ್ಸ್ ಸಮೂಹ ಸಂಸ್ಥೆಗಳಿಗೆ ಭೇಟಿ ಸಂಸ್ಥೆಯ ವತಿಯಿಂದ ಸನ್ಮಾನ ಸ್ವೀಕರಿಸಿ ಆಶೀರ್ವಚನ ನೀಡುತ್ತಿದ್ದರು. ನಮ್ಮಲ್ಲಿ ಇಂದು ಅನುಮಾನದ ಗೋಡೆ ನಿರ್ಮಾಣವಾಗಿದೆ, ಅದು ತಗ್ಗಬೇಕಾದರೆ ಇನ್ನೊಬ್ಬ ಸಮುದಾಯಕ್ಕೆ ಗೌರವ ನೀಡುವ , ಪ್ರೀತಿ ವಿಶ್ವಾಸದಿಂದ ಕಾಣುವ ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕು, ಇನ್ನೊಂದು ಸಮುದಾಯದ ಭಾಷೆ, ಜೀವನ ಕ್ರಮ, ಆಚಾರ ವಿಚಾರಗಳನ್ನು ಅರಿತು ಬಾಳುವ ಸತ್‍ಸಂಪ್ರದಾಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದ ಸಲ್ದಾನ ಅವರು ದ.ಕ ಜಿಲ್ಲೆಯಲ್ಲಿ ಹಲವು ಭಾಷೆಯ ಜನ ಇದ್ದಾರೆ, ಅವರ ಸಂಸ್ಕಾರ ಸಂಸ್ಕøತಿ ಭಿನ್ನವಾಗಿದೆ, ಅದನ್ನೆಲ್ಲಾ ಅರಿತು ಬೇರೆ ಬೇರೆ ಭಾಷೆಗಳನ್ನು ಕಲಿತರೆ ಸಮಾಜದಲ್ಲಿ ದ್ವೇಷ ದೂರವಾಗುತ್ತದೆ, ನಮ್ಮಲ್ಲಿ ಸಾಮರಸ್ಯ ಮೂಡಿ ಉತ್ತಮ ಸಮಾಜ ನಿರ್ಮಾಣವಾಗಲು ನಾವೆಲ್ಲಾ ಸಹೋದರತೆಯಿಂದ ಬಾಳಬೇಕು ಎಂದು ಹೇಳಿ ಕಡಬ ಸೈಂಟ್ ಜೋಕಿಮ್ಸ್ ವಿದ್ಯಾ ಸಂಸ್ಥೆ ಅತ್ಯತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಶ್ಲಾಘಿಸಿದರು.

Also Read  Pin Up Casino Пин Ап Официальный Сайт Онлайн Казино Pin Up%2C Игровые Автоматы%2C Регистраци

ಬಿಷಪ್ ಅವರ ಕಾರ್ಯದರ್ಶಿ ಫಾ|ರೋಹನ್ ಲೋಬೋ, ಸೈಂಟ್ ಜೋಕಿಮ್ಸ್ ಚರ್ಚ್ ಪಾಲನಾ ಮಂಡಳಿಯ ಅಧ್ಯಕ್ಷ ಲೂವಿಸ್ ಮಸ್ಕರೇನಸ್, ಸೈಂಟ್ ಜೋಕಿಮ್ಸ್ ಪದವಿಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ಫಾ|ವಿನ್ಸೆಂಟ್ ಡಿಸೋಜಾ, ಸೈಂಟ್ ಆ್ಯನ್ಸ್ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಕೆ.ಕೆ.ಜೋಸೆಫ್, ಸೈಂಟ್ ಜೋಕಿಮ್ಸ್ ವಿದ್ಯಾ ಸಂಸ್ಥೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಝೀಜ್, ಸೈಂಟ್ ಜೋಕಿಮ್ಸ್ ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಶ್ರೀಲತಾ, ಸೈಂಟೆ ಆೈನ್ಸ್ ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಎಮಿರೆಟಾ, ಸೈಂಟ್ ಸೈಂಟ್ ಆ್ಯನ್ಸ್ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ದಕ್ಷಾ, ಸೈಂಟ್ ಜೋಕಿಮ್ಸ್ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಮೋನಿಕಾ ರೆಬೆಲ್ಲೋ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕ ರಾಜೇಶ್ ಎಲ್ ವರದಿ ಮಂಡಿಸಿದರು. ಶಿಕ್ಷಕಿ ಪೂರ್ಣಿಮಾ ಸ್ವಾಗತಿಸಿದರು. ಸೈಂಟ್ ಆ್ಯನ್ಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ಶಿಕ್ಷಕಿ ಸುದರ್ಶನ ಕುಮಾರಿ ವಂದಿಸಿದರು. ಶಿಕ್ಷಕಿ ಲೋಲಾಕ್ಷಿ ಕಾರ್ಯಕ್ರಮ ನಿರೂಪಿಸಿದರು.

Also Read  ಮಂಗಳೂರಿಗೂ ಬಂತು ಬೆಲೆಬಾಳುವ ನಿಷೇಧಿತ ಮಾದಕ ವಸ್ತು MDMA ► ಲಕ್ಷಾಂತರ ಮೌಲ್ಯದ 90 ಗ್ರಾಂ MDMA ಸಹಿತ ಆರೋಪಿಯ ಬಂಧನ

error: Content is protected !!
Scroll to Top