ಕುಂತೂರು: ಬೈಕ್ – ಪಿಕಪ್ ಢಿಕ್ಕಿ ► ಸವಾರ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಫೆ.03. ಬೈಕ್ ಹಾಗೂ ಪಿಕಪ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಭಾನುವಾರ ರಾತ್ರಿ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕುಂತೂರಿನಲ್ಲಿ ಸಂಭವಿಸಿದೆ.

ಮೃತ ಸವಾರನನ್ನು ಆಲಂಕಾರು ಸಮೀಪದ ಶರವೂರು ನಿವಾಸಿ ದಿನೇಶ್ (30) ಎಂದು ಗುರುತಿಸಲಾಗಿದೆ. ಕಡಬದಿಂದ ಆಲಂಕಾರು ಕಡೆಗೆ ತೆರಳುತ್ತಿದ್ದ ಪಿಕಪ್ ಹಾಗೂ ಕಡಬ ಕಡೆಗೆ ಆಗಮಿಸುತ್ತಿದ್ದ ಬೈಕ್‌ ನಡುವೆ ಕುಂತೂರು ಸಮೀಪದ ಅನ್ನಡ್ಕ ಎಂಬಲ್ಲಿ ಮುಖಾಮುಖಿ ಢಿಕ್ಕಿಯಾಗಿದೆ. ಪರಿಣಾಮ ಬೈಕ್ ಸವಾರ ದಿನೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿರಿಸಲಾಗಿದೆ.

Also Read  The Best Way to ACTIVATE Windows Q0 using NOTEPAD

error: Content is protected !!
Scroll to Top