ಮಡಿವಾಳ ಮಾಚಿದೇವರ ವಚನಗಳ ಸಂದೇಶವನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಬೇಕು ►ಶಾಸಕ ಡಾ. ಭರತ್ ಶೆಟ್ಟಿ ವೈ

(ನ್ಯೂಸ್ ಕಡಬ) newskadaba.com ಮಂಗಳೂರು,ಫೆ.02.ಮಂಗಳೂರು ಫೆಬ್ರವರಿ   ಭೇದ ರಹಿತ, ಲಿಂಗ ಭೇದವಿಲ್ಲದ ಹಾಗೂ ಸಮ ಸಮಾಜದ ಸಂಕೇತ ಮಡಿವಾಳ ಮಾಚಿದೇವ. ಅವರ ವಚನಗಳ ಸಂದೇಶವನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಬೇಕೆಂದು ಜಯಂತಿಯ ಅಧ್ಯಕ್ಷತೆ ವಹಿಸಿದ ಮಂಗಳೂರು ಉತ್ತರ ವಿಧಾನ ಸಭಾಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ವೈ. ಅವರು ಹೇಳಿದರು.

ಇಂದು ಪೂರ್ವಾಹ್ನ 10.30 ಗಂಟೆಗೆ ಮಂಗಳೂರು ಬಂಗ್ರಕೂಳೂರಿನ ಮಡಿವಾಳ ಸಭಾಭವನದಲ್ಲಿ ಮಡಿವಾಳ ಮಾಚಿದೇವ ಜಯಂತಿ ಆಚರಣೆಯು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ, ದಕ್ಷಿಣ ಕನ್ನಡ ಜಿಲ್ಲಾ ಮಡಿವಾಳರ ಸಂಘ(ರಿ) ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆಯಿತು. ಪ್ರೋ. ಕೃಷ್ಣಮೂರ್ತಿ ಕೆ. ಉಪ ಪ್ರಾಂಶುಪಾಲರು, ಗೋವಿಂದದಾಸ್ ಕಾಲೇಜು, ಸುರತ್ಕಲ್ ಇವರು ಜಯಂತಿಯ ಸಂದೇಶವನ್ನು ನೀಡಿ 12 ನೇ ಶತಮಾನದಲ್ಲಿ ಅನೇಕ ವಚನಗಳ ಮೂಲಕ ಸಮಾಜದಲ್ಲಿದ್ದಂತಹ ಅನಿಷ್ಟಗಳನ್ನು ಹೋಗಲಾಡಿಸಿದರು. ಅವರ ವಚನಗಳು ಸರ್ವಕಾಲಿಕ ಸತ್ಯವಾದವುಗಳು ಎಂದು ಹೇಳಿದರು.

Also Read  ತಿರುವೈಲ್ ➤ ವಾರ್ಡ್ ಮಟ್ಟದ ಸಾರ್ವಜನಿಕ ಸಮಾಲೋಚನಾ ಸಭೆ

ತಾಲೂಕು ಪಂಚಾಯತ್ ಅಧ್ಯಕ್ಷ ಮಹಮ್ಮದ್ ಮೊನು, ಜಿಲ್ಲಾ ಕನ್ನಡ ಮತ್ತು ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ, ದಕ್ಷಿಣ ಕನ್ನಡ ಜಿಲ್ಲಾ ಮಡಿವಾಳ ಸಂಘ(ರಿ), ಮಂಗಳೂರು ಇದರ ಅಧ್ಯಕ್ಷ ಬಿ.ಎನ್. ಪ್ರಕಾಶ್, ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯ ಪ್ರಕಾಶ್ ಸಾಲ್ಯಾನ್ ಇವರು ಉಪಸ್ಥಿತರಿದ್ದರು. ಕನ್ನಡ ಮತ್ತು  ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಇವರು ಸ್ವಾಗತಿಸಿದರು.

error: Content is protected !!
Scroll to Top