ದಾಖಲೆ ಬರೆದ ಮಿಥಾಲಿ ರಾಜ್ 200 ಏಕದಿನ ಪಂದ್ಯವಾಡಿದ► ವಿಶ್ವದ ಮೊದಲ ಆಟಗಾರ್ತಿ

(ನ್ಯೂಸ್ ಕಡಬ) newskadaba.com ಹ್ಯಾಮಿಲ್ಟನ್, ಫೆ.01. ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಹಿರಿಯ ಆಟಗಾರ್ತಿ ಮಿಥಾಲಿ ರಾಜ್ ಮತ್ತೊಂದು ದಾಖಲೆ ನಿರ್ಮಾಣ ಮಾಡಿದ್ದು, 200 ಏಕದಿನ ಪಂದ್ಯಗಳನ್ನಾಡಿದ ವಿಶ್ವದ ಮೊದಲ ಕ್ರಿಕೆಟ್ ಆಟಗಾರ್ತಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ಇಂದು ಹ್ಯಾಮಿಲ್ಟನ್ ನಲ್ಲಿ ನಡೆಯುತ್ತಿರುವ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಮಿಥಾಲಿ ಈ ದಾಖಲೆ ಬರೆದಿದ್ದಾರೆ. 1999ರಲ್ಲಿ ಏಕದಿನ ಕ್ರಿಕೆಟ್ ಪದಾರ್ಪಣೆ ಮಾಡಿದ್ದ ಮಿಥಾಲಿ ಈ ವರೆಗೂ ಒಟ್ಟು 200 ಏಕದಿನ ಪಂದ್ಯಗಳಲ್ಲಿ 51.33ರ ಸರಾಸರಿಯಲ್ಲಿ 6622 ರನ್ ಗಳಿಸಿದ್ದಾರೆ.ಈ 200ನೇ ಏಕದಿನ ಪಂದ್ಯದಲ್ಲಿ 28 ಎಸೆತಗಳನ್ನು ಎದುರಿಸಿದ ಮಿಥಾಲಿ ಕೇವಲ 9 ರನ್ ಗಳಿಸಿದರು. ಈ ಪಂದ್ಯದಲ್ಲಿ ಭಾರತ ತಂಡ ಕೇವಲ 149 ರನ್ ಗಳಿಗೆ ಆಲೌಟ್ ಆಗಿತ್ತು.ದಿನ ಪಂದ್ಯಗಳಲ್ಲಿ 51.33ರ ಸರಾಸರಿಯಲ್ಲಿ 6622 ರನ್ ಗಳಿಸಿದ್ದಾರೆ.

Also Read  ಭರತ ನಾಟ್ಯ ಮನಸ್ವಿ ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣ

 

 

error: Content is protected !!
Scroll to Top