ಕಡಬ ಠಾಣಾ ವ್ಯಾಪ್ತಿಗೂ ಬಂತು ಸುಸಜ್ಜಿತ ‘ಹೈವೇ ಪಟ್ರೋಲ್’ ► ಇನ್ಮುಂದೆ ಸಂಚಾರ ನಿಯಮಗಳನ್ನು ಉಲ್ಲಂಘಿಸುವವರಿಗೆ ಕಾದಿದೆ ಬಿಗ್ ಶಾಕ್..!!

(ನ್ಯೂಸ್ ಕಡಬ) newskadaba.com ಕಡಬ, ಫೆ.01. ಇನ್ಮುಂದೆ ಕಡಬ ಠಾಣಾ ವ್ಯಾಪ್ತಿಯಲ್ಲಿ ರಸ್ತೆ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವವರಿಗೆ ಸಿಂಹಸ್ವಪ್ನವಾಗಿ ಕಾಡಲಿದೆ ಹೈವೇ ಪಟ್ರೋಲ್.

ಜಿಲ್ಲಾ ಕೇಂದ್ರಗಳಲ್ಲಿ ಕಾರ್ಯಾಚರಿಸುತ್ತಿದ್ದ ಹೈವೇ ಪಟ್ರೋಲ್ ವಾಹನಗಳು ಇದೀಗ ತಾಲೂಕು ಕೇಂದ್ರಕ್ಕೂ ಕಾಲಿಟ್ಟಿದ್ದು, ಸರಕಾರವು ಸುಸಜ್ಜಿತ ಸೌಲಭ್ಯಗಳನ್ನು ಹೊಂದಿರುವ ನೂತನ ಇನ್ನೋವಾ ಕ್ರಿಸ್ಟಾ ಹೈವೇ ಪಟ್ರೋಲ್ ವಾಹನವನ್ನು ಕಡಬ ಠಾಣೆಗೆ ನೀಡಲಾಗಿದೆ. ಹೆಲ್ಮೆಟ್ ರಹಿತ ದ್ವಿಚಕ್ರ ವಾಹನ ಸವಾರಿ, ಟ್ರಿಪಲ್ ರೈಟ್, ಸೀಟ್ ಬೆಲ್ಟ್ ಧರಿಸದೆ ಕಾರು ಚಾಲನೆ, ಚಾಲನೆಯಲ್ಲಿ ಮದ್ಯ ಸೇವನೆ ಸೇರಿದಂತೆ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿ ಕಡಬ ಪರಿಸರದಲ್ಲಿ ಮೆರೆದಾಡುತ್ತಿದ್ದವರು ಇನ್ಮುಂದೆ ಹೈವೇ ಪಟ್ರೋಲ್ ವಾಹನದ ಕಣ್ಣಿಗೆ ಬೀಳುವುದಂತೂ ಗ್ಯಾರಂಟಿ.

Also Read  ಅಂಗವೈಕಲ್ಯವನ್ನು ಮೆಟ್ಟಿನಿಂತ ಎಂಡೋಪೀಡಿತ ವಿದ್ಯಾರ್ಥಿ ➤ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ

ಕಿಲೊಮೀಟರ್ ದೂರದಿಂದಲೇ ನೋಂದಣಿ ಸಂಖ್ಯೆ ಸಮೇತ ವಾಹನವು ಗಂಟೆಗೆ ಎಷ್ಟು ವೇಗವಾಗಿ ಸಂಚರಿಸುತ್ತಿದೆ ಎಂಬುವುದನ್ನು ಪತ್ತೆಹಚ್ಚುವ ಸುಸಜ್ಜಿತ ಯಂತ್ರೋಪಕರಣಗಳು ಈ ವಾಹನದಲ್ಲಿದ್ದು, ಗುರುವಾರದಿಂದ ಪ್ರಾಯೋಗಿಕವಾಗಿ ಸಂಚಾರ ಆರಂಭಿಸಿದೆ. ಇನ್ನೆರಡು ದಿನಗಳಲ್ಲಿ ಅಧಿಕೃತ ಅದೇಶ ಹೊರಬರಲಿದ್ದು, ಆ ಬಳಿಕ ಕಡಬ ಠಾಣಾ ವ್ಯಾಪ್ತಿಯಲ್ಲಿ ದಿನಪೂರ್ತಿ ಕಾರ್ಯಾಚರಿಸಲಿದೆ.

error: Content is protected !!
Scroll to Top