ಕರಾಟೆಯಲ್ಲಿ ಕಡಬ ಸೈಂಟ್ ಆ್ಯನ್ಸ್ ಶಾಲೆಗೆ ಪ್ರಶಸ್ತಿ

(ನ್ಯೂಸ್ ಕಡಬ) newskadaba.comಕಡಬ,ಜ.30. ಕೇರಳದ ಅನಂತಪುರದ ಕುಂಬ್ಳೆ ಜೆಎಸ್‍ಕೆ ರವರು ಜ.27ರಂದು ನಡೆಸಿದ ಅಂತರಾಜ್ಯ ಮಟ್ಟದ ಓಪನ್ ಕರಾಟೆ ಚಾಂಪಿಯನ್‍ಶಿಪ್‍ನಲ್ಲಿ ಕಡಬದ ಸೈಂಟ್ ಆನ್ಸ್ ಶಾಲೆ ವಿದ್ಯಾರ್ಥಿಗಳು ಹಲವು ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಸೈಯದ್ ಸಲ್ಮಾನ್ ಫಾರೀಶ್ ಕುಮಿಟೆ ಮತ್ತು ಕಟಾ ವಿಭಾಗದಲ್ಲಿ ಚಿನ್ನದ ಪದಕ, ಸಾಕೇತ್ ಎಂ.ಕೆ., ಸುಶ್ಮಿತಾ, ಕುಮಿಟೆ ಮತ್ತು ಕಟಾ ವಿಭಾಗದಲ್ಲಿ ಬೆಳ್ಳಿ ಪದಕ, ಸಾತ್ವಿಕ್ ಕೆ.ಆರ್., ಪ್ರಕ್ಷಿತ್ ಕುಮಿಟೆ ವಿಭಾಗದಲ್ಲಿ ಬೆಳ್ಳಿ ಪದಕ ಸಿದ್ಧಾರ್ಥ್ ಆರ್. ಕುಮಿಟೆಯಲ್ಲಿ ಕಂಚಿನ ಪದಕ ಮತ್ತು ಸೈಂಟ್ ಜೋಕಿಮ್ಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸರ್ವೇಶ್ ಎಂ.ಕೆ. ಕುಮಿಟೆಯಲ್ಲಿ ಚಿನ್ನದ ಪದಕ, ಕಟಾದಲ್ಲಿ ಬೆಳ್ಳಿ ಪದಕ ಪಡೆದುಕೊಂಡಿರುತ್ತಾರೆ. ಇವರಿಗೆ ಕರಾಟೆ ಶಿಕ್ಷಕ ಯಾದವ ಬೀರಂತಡ್ಕ ರವರು ತರಬೇತಿ ನೀಡಿರುತ್ತಾರೆ.

Also Read  ಮಾದಕ ವ್ಯಸನ ಮುಕ್ತ ದಕ್ಷಿಣ ಕನ್ನಡ ಜಿಲ್ಲೆ ಅಭಿಯಾನ - ತರಬೇತಿ ಕಾರ್ಯಗಾರ

error: Content is protected !!
Scroll to Top