ಜಿಲ್ಲಾ ಗೃಹರಕ್ಷಕ ದಳ ಕಛೇರಿಯಲ್ಲಿ ► ಹುತಾತ್ಮರ  ದಿನಾಚರಣೆ

(ನ್ಯೂಸ್ ಕಡಬ) newskadaba.comಮಂಗಳೂರು,ಜ.30  ಜಿಲ್ಲಾ ಗೃಹರಕ್ಷಕ ದಳ ಕಛೇರಿ ಮೇರಿಹಿಲ್‍ನಲ್ಲಿ ಹುತಾತ್ಮರ  ದಿನಾಚರಣೆ ಆಚರಿಸಲಾಯಿತು. 30-01-2019ರಂದು ಬೆಳಗ್ಗೆ 11.00ಕ್ಕೆ ಗಾಂಧೀಜಿಯವರ ಭಾವಚಿತ್ರವನ್ನಿಟ್ಟು ದೀಪ ಬೆಳಗಿಸಿ, 2 ನಿಮಿಷದ ಮೌನಾಚರಣೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಸಮಾದೇಷ್ಠರಾದ ಡಾ|| ಮುರಲೀ ಮೋಹನ ಚೂಂತಾರು  ಇವರು ಗಾಂಧೀಜಿಯವರ ತತ್ವ ಆದರ್ಶಗಳನ್ನು  ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಮತ್ತು ಪ್ರತಿಯೊಬ್ಬರ ಮನದೊಳಗೆ ಗಾಂಧೀಜಿಯವರ ಆದರ್ಶಗಳು ಸುಪ್ತವಾಗಿದೆ.

ಈ ಸುಪ್ತವಾಗಿರುವ ಆದರ್ಶಗಳನ್ನು ಎಚ್ಚರಿಸಿ ನಮ್ಮೊಳಗಿನ ಗಾಂಧೀಜಿಯವರನ್ನು ಬಡಿದೆಬ್ಬಿಸುವ ಕಾರ್ಯ ತುರ್ತಾಗಿ ಆಗಬೇಕೆಂದು ಕರೆ ನೀಡಿದರು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು, ಅಧೀಕ್ಷಕರಾದ ಶ್ರೀ ಎ. ರತ್ನಕರ್, ಪ್ರಥಮ ದರ್ಜೆ ಸಹಾಯಕಿ ಶ್ರೀಮತಿ ಅನಿತಾ ಟಿ. ಎಸ್, ದಲಾಯತ್ ಶ್ರೀಮತಿ ಮೀನಾಕ್ಷಿ ಹಾಗೂ ಮಂಗಳೂರು ಘಟಕದ ಘಟಕಾಧಿಕಾರಿ ಮಾರ್ಕ್‍ಶೇರ್ ಮತ್ತು  ಸನತ್, ಸುನೀಲ್ , ರಮೇಶ್ ಭಂಡಾರಿ. ದಿವಾಕರ, ಮಹೇಶ್, ಹರಿಪ್ರಸಾದ್ ಮುಂತಾದವರು   ಉಪಸ್ಥಿತರಿದ್ದರು.

error: Content is protected !!

Join the Group

Join WhatsApp Group