(ನ್ಯೂಸ್ ಕಡಬ) newskadaba.comಮಂಗಳೂರು,ಜ.30.ಕಾರ್ಮಿಕ ಇಲಾಖೆಯ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರ್ರತಾ ಮಂಡಳಿಯ ವತಿಯಿಂದ ಅಂಬೇಡ್ಕರ್ ಕಾರ್ಮಿಕ ಸಹಾಯಹಸ್ತ ಯೋಜನೆಯಡಿ ನೋಂದಣಿಯಾದ ಅಸಂಘಟಿತ ಕಾರ್ಮಿಕರಾದ ಹಮಾಲರು, ಟೈಲರುಗಳು ಚಿಂದಿ ಆಯುವವರು, ಗೃಹಕಾರ್ಮಿಕರು, ಮೆಕಾನಿಕ್‍ಗಳು, ಅಗಸರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಕ್ಷೌರಿಕರು, ಮಂಡಕ್ಕಿ ಭಟ್ಟಿ ಕಾರ್ಮಿಕರುಗಳಿಗೆ ಶ್ರಮ ಸಮ್ಮಾನ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಅಸಂಘಟಿತ ಕಾರ್ಮಿಕರು ಜಿಲ್ಲೆಯ ಕಾರ್ಮಿಕ ಅಧಿಕಾರಿಗಳನ್ನು ಸಂಪರ್ಕಿಸಿ ಅವರಿಂದ ನಿಗದಿತ ಅರ್ಜಿ ನಮೂನೆ ಪಡೆದು ಅಗತ್ಯವಾದ ದಾಖಲೆಗಳೊಂದಿಗೆ ಫೆಬ್ರವರಿ 10 ರೊಳಗಾಗಿ ಕಾರ್ಮಿಕ ಅಧಿಕಾರಿ, ದಕ್ಷಿಣ ಕನ್ನಡ ಉಪವಿಭಾಗ-1, ಮಂಗಳೂರು, ಭಾರತ್‍ಬೀಡಿ ಎದುರು, ಬಂಟ್ಸ್‍ಹಾಸ್ಟೇಲ್, ಮಂಗಳೂರು-575003 ಕಚೇರಿಗೆ ಸಲ್ಲಿಸುವಂತೆ ಕಾರ್ಮಿಕ ಅಧಿಕಾರಿ, ದ.ಕ ಜಿಲ್ಲೆ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.
