ನೆಲ್ಯಾಡಿ: ಬೈಕ್ ಢಿಕ್ಕಿ ► ಪಾದಚಾರಿ ಗಂಭೀರ

(ನ್ಯೂಸ್ ಕಡಬ) newskadaba.comಉಪ್ಪಿನಂಗಡಿ,ಜ.29.ಉಪ್ಪಿನಂಗಡಿ ಠಾಣ ವ್ಯಾಪ್ತಿಯ ನೆಲ್ಯಾಡಿ  ಪೇಟೆಯಲ್ಲಿ ರಸ್ತೆಯಲ್ಲಿ  ನಡೆದುಕೊಂಡು ಹೋಗಿತ್ತಿದ್ದ ವ್ಯಕ್ತಿಗೆ ಬೈಕೊಂದು ಗುದ್ದಿ ಗಂಭೀರ ಗಾಯಗೊಂಡ ಘಟನೆ  ಭಾನುವಾರ ನಡೆದಿದೆ.ಗಾಯಗೊಂಡ ವ್ಯಕ್ತಿಯನ್ನು ಪುತ್ತೂರು ತಾಲೂಕು  ಬೊಳುವಾರು ನಿವಾಸಿಯಾದ ಶೇಸಪ್ಪಗೌಡರು ಎಂದು ಗುರುತಿಸಲಾಗಿದೆ.

ಶೇಸಪ್ಪಗೌಡರು ಸ್ಕೂಟರ್‌ ನಿಲ್ಲಿಸಿ ರಸ್ತೆ ದಾಟುತ್ತಿರುವ ಸಂಧರ್ಭದಲ್ಲಿ ಶಫೀದ್‌ ಎಂಬಾತನು ಗುಂಡ್ಯ ಕಡೆಯಿಂದ ನೆಲ್ಯಾಡಿ ಕಡೆಗೆ ನಂಬರ್ ಪ್ಲೇಟ್‌ ಆಗದ ಪಲ್ಸರ್‌ ಎನ್‌ ಎಸ್ ಬೈಕನ್ನು ಅತೀವೇಗವಾಗಿ ಚಲಾಯಿಸಿಕೊಂಡುಶೇಸಪ್ಪಗೌಡರಿಗೆ ಡಿಕ್ಕಿ ಹೊಡೆದನು.ಇದರ ಪರಿಣಾಮ ಶೇಸಪ್ಪಗೌಡ ರಿಗೆ ಗಾಯವಾಗಿದ್ದು ಅವರನ್ನು ಮಂಗಳೂರು ಎ ಜೆ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದು ತೀವೃ ನಿಗಾ ಘಟಕದಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಈ ಬಗ್ಗೆ ಈ ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  28 ಪತ್ನಿಯರ ಎದುರು 37ನೇ ಮದುವೆಯಾದ ಭೂಪ..!

error: Content is protected !!