ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಗೇಟ್ಗಳು ಶೀಘ್ರದಲ್ಲಿಯೇ ರದ್ಧು? ವಿನೂತನ ಯೋಜನೆಗೆ ಮುಂದಾದ ಕೇಂದ್ರ ಸರ್ಕಾರ

(ನ್ಯೂಸ್ ಕಡಬ) newskadaba.com ದೆಹಲಿ, ಜ.29.ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಬೂತ್‍ಗಳು ರದ್ದಾಗುವ ಸಾಧ್ಯತೆಯಿದೆಯೇ? ಹೌದು ಎನ್ನುತ್ತಿವೆ ಕೆಲ ಮೂಲಗಳು. ಹೈವೇಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಹಣ ಪಾವತಿಸಿ ಪ್ರಯಾಣಿಸುವುದೇ ಸಮಸ್ಯೆಯಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಇದಕ್ಕಾಗಿ Pay As You Go ಎಂಬ ಹೊಸ ನಿಯಮವನ್ನು ಜಾರಿಗೆ ತರಲಿದೆ ಎನ್ನಲಾಗಿದೆ.


ಈ ಹೊಸ ನಿಯಮದಂತೆ ಇನ್ನು ಮುಂದೆ ನೀವು ಪ್ರಯಾಣಿಸಿದ ದೂರಕ್ಕೆ ಮಾತ್ರ ಟೋಲ್​ ಪಾವತಿಸಿದರೆ ಸಾಕು. ಅಂದರೆ ನೀವು ಟೋಲ್​ ಗೇಟ್​ ಇರುವ ಹೈವೆಯಲ್ಲಿ ಎಂಟ್ರಿಯಾದ ಮಾತ್ರಕ್ಕೆ ಪೂರ್ಣ ಸುಂಕ ಪಾವತಿಸಬೇಕಾಗಿಲ್ಲ. ಬದಲಾಗಿ ನಿಮ್ಮ ದೂರಕ್ಕೆ ಅನುಗುಣವಾಗಿ ಒಂದು ನಿರ್ದಿಷ್ಟ ಮೊತ್ತ ಕಟ್ಟಬೇಕಾಗುತ್ತದೆ. ಇದರಿಂದ ಮುಂಬರುವ ದಿನಗಳಲ್ಲಿ ಟೋಲ್​ ಪ್ಲಾಜ ಅಥವಾ ಟೋಲ್​ ಗೇಟ್​ಗಳನ್ನು ತೆಗೆದು ಹಾಕಲು ಸಹಕಾರಿಯಾಗಲಿದೆ. ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) Pay As You Go ನಿಯಮವನ್ನು ಜಾರಿಗೆ ತರಲು ಯೋಜನೆ ಹಾಕಿಕೊಂಡಿದೆ.

Also Read  ವಿದ್ಯುತ್ ಶಾರ್ಟ್ ಸರ್ಕ್ಯೂಟ್ ➤ ಎರಡು ಅಂಗಡಿಯಲ್ಲಿ ಅಪಾರ ಹಾನಿ!


ವಾಹನಗಳಿಗೆ ಡಿವೈಸ್​ ಅನ್ನು ಅಳವಡಿಸಲಾಗುತ್ತದೆ. ಈ ಸಾಧನವನ್ನು ವಾಹನ ಮಾಲೀಕರ ಬ್ಯಾಂಕ್​ ಖಾತೆಯೊಂದಿಗೆ ಕನೆಕ್ಟ್​ ಮಾಡಲಾಗುತ್ತೆ. ವಾಹನವು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವಾಗ  ದೂರಕ್ಕೆ ಅನುಗುಣವಾಗಿ ನೇರವಾಗಿ ನಿಮ್ಮ ಖಾತೆಯಿಂದ ಹಣ ಕಡಿತಗೊಳ್ಳಲಿದೆ. ಇದರಿಂದ ಟೋಲ್​ ಗೇಟ್​ಗಳಲ್ಲಿ ಕ್ಯೂನಲ್ಲಿ ನಿಂತು ಸಮಯ ವ್ಯರ್ಥವಾಗುವುದು ಕೂಡ ತಪ್ಪಲಿದೆ.ದೆಹಲಿ-ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೇಂದ್ರ ಸರ್ಕಾರ Pay As You Go ನಿಯಮದ ಪ್ರಯೋಗ ನಡೆಯುತ್ತಿದೆ. ಈ ಪ್ರಯೋಗ ಯಶಸ್ವಿಯಾದರೆ ದೇಶದ ಎಲ್ಲ ಹೆದ್ದಾರಿಗಳಲ್ಲಿ ಈ ನಿಯಮವನ್ನು ಜಾರಿಗೆ ತರಲು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಅಧಿಸೂಚನೆ ಹೊರಡಿಸಲಿದೆ.

Also Read  ಮಹಿಳೆಯರಿಬ್ಬರ ಮೇಲೆ ಅಪರಿಚಿತ ವ್ಯಕ್ತಿಯಿಂದ ಮಾರಣಾಂತಿಕ ಹಲ್ಲೆ - ಆಸ್ಪತ್ರೆಗೆ ದಾಖಲು

 

error: Content is protected !!
Scroll to Top