ಬಿಪಿಎಲ್ ಕಾರ್ಡ್​ದಾರರಿಗೆ ಅಕ್ಕಿ ಬದಲು ಹಣ?► ಹೊಸ ಪ್ರಯೋಗಕ್ಕೆ ಮುಂದಾದ ಕೇಂದ್ರ ಸರ್ಕಾರ

(ನ್ಯೂಸ್ ಕಡಬ) newskadaba.com ಬೆಂಗಳೂರು,ಜ.29.ಬಿಪಿಎಲ್ಕಾರ್ಡ್​ದಾರರಿಗೆ ಅಕ್ಕಿ ಕೊಡುವ ಬದಲು ಹಣ ನೀಡುವುದನ್ನು ಪುದುಚೇರಿ, ಛತ್ತೀಸ್​ಗಢ ಮತ್ತು ದಾದರ್​ನಲ್ಲಿ ಈಗಾಗಲೇ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ. ಇದನ್ನು ಎಲ್ಲೆಡೆ ವಿಸ್ತರಿಸುವ ಕುರಿತು ಪರಿಶೀಲನೆ ನಡೆಯುತ್ತಿದೆ ಎಂದು ಕೇಂದ್ರ ಆಹಾರ ಸಚಿವ ರಾಮ್​ಲಾಸ್ ಪಾಸ್ವಾನ್ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪುದುಚೇರಿಯಲ್ಲಿ ಹಣದ ಬದಲು ಹಿಂದಿನ ವ್ಯವಸ್ಥೆಯಲ್ಲೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಕೊಡಲಿ ಎಂದು ಅಲ್ಲಿನ ಕಾರ್ಡ್​ದಾರರು ಒತ್ತಾಯಿಸುತ್ತಿದ್ದಾರೆ. ಈ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ. ಕರ್ನಾಟಕದಲ್ಲಿಯೂ ಅಕ್ಕಿ ಬದಲಿಗೆ ಹಣ ಕೊಡುವ ವ್ಯವಸ್ಥೆ ಜಾರಿಗೆ ತರಲು ಚಿಂತನೆ ನಡೆಯುತ್ತಿದೆ. ಕರ್ನಾಟಕದಲ್ಲಿನ 6.11 ಕೋಟಿ ಜನಸಂಖ್ಯೆ ಪೈಕಿ 4.43 ಕೋಟಿ ಜನ ಪಡಿತರ ಫಲಾನುಭವಿಗಳಾಗಿದ್ದಾರೆ.ಹಾಗಾಗಿ 26 ಲಕ್ಷ ಎಂಎಂಟಿ ಆಹಾರ ಧಾನ್ಯವನ್ನು ಕೇಂದ್ರದಿಂದ ರಾಜ್ಯಕ್ಕೆ ಕೊಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು. 1,100 ಕೋಟಿ ರೂ. ಸಬ್ಸಿಡಿ ಹಣ ರಾಜ್ಯಕ್ಕೆ ಕೊಡಬೇಕಿದೆ. ಈಗಾಗಲೆ 300 ಕೋಟಿ ರೂ. ಪಾವತಿಸಲಾಗಿದ್ದು, ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿದರೆ ಕೂಡಲೆ ಪರಿಶೀಲಿಸಿ ಉಳಿದ ಹಣ ಬಿಡುಗಡೆ ಮಾಡುತ್ತೇವೆ ಎಂದರು.

Also Read  ಪೆರ್ನಾಲ್ ಸಂದೋಲ ಮತ್ತು ಕಿನಾದಿ ಬ್ಯಾರಿ ಘಝಲ್ ➤ಸಿಡಿ ಬಿಡುಗಡೆ ಸಮಾರಂಭ

 

error: Content is protected !!
Scroll to Top