ಬಿಳಿನೆಲೆ: ರಕ್ಷಿತಾರಣ್ಯದಿಂದ ಅಕ್ರಮ ಮರಗಳ್ಳತನಕ್ಕೆ ಯತ್ನ► ಇಬ್ಬರ ವಿರುದ್ಧ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಕಡಬ ,ಜ.29.ಸರಕಾರಿ ರಕ್ಷಿತಾರಣ್ಯದಿಂದ ಅಕ್ರಮವಾಗಿ ಮರಗಳ್ಳತನಕ್ಕೆ ಯತ್ನಿಸಿದ ಆರೋಪದಲ್ಲಿ ಇಬ್ಬರ ವಿರುದ್ಧ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಬಿಳಿನೆಲೆ ಗ್ರಾಮದ ಉಡೇವು ರಕ್ಷಿತಾರಣ್ಯದಿಂದ ಆಕ್ರಮವಾಗಿ ಭಾರೀ ಗಾತ್ರದ ಹಲಸಿನ ಮರ ಕಡಿದು ಸಾಗಿಸಲು ಯತ್ನಿಸಿದ ಬಗ್ಗೆಖಚಿತ ಮಾಹಿತಿಯ ಮೇರೆಗೆ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ಅವರ ನೇತೃತ್ವದಲ್ಲಿ ಉಪ ವಲಯ ಅರಣ್ಯಾಧಿಕಾರಿ ನವೀನ್, ಅಶೋಕ್ ಹಾಗೂ ಸಿಬಂದಿಗಳು ದಾಳಿ ನಡೆಸಿ ಕಡಿದು ಹಾಕಿದ ಮರವನ್ನು ಪತ್ತೆ ಹಚ್ಚಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಳಿನೆಲೆ ಗ್ರಾಮ ಪಂಚಾಯತ್ ಸದಸ್ಯ ಸತೀಶ್ ಗೌಡ ಕಳಿಗೆ ಹಾಗೂ ಸ್ಥಳೀಯ ನಿವಾಸಿ ಉಡೇವು ಕುಶಾಲಪ್ಪ ಗೌಡ ಎಂಬವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಲಕ್ಷಾಂತರ ರೂ. ಬೆಲೆ ಬಾಳುವ ಹಲಸಿನ ಮರವನ್ನು ಬುಡದಿಂದಲೇ  ಕಡಿದು ಹಾಕಿ ತುಂಡರಿಸಿ 8 ದಿಮ್ಮಿಗಳಾಗಿ ಮಾಡಲಾಗಿದ್ದು, ಆ  ಪೈಕಿ ಒಂದು ದಿಮ್ಮಿಯನ್ನು ಸೈಜ್ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಉಳಿದ  ಆರೋಪಿಗಳು ಹಾಗೂ ಮರ ಸಾಗಾಟಕ್ಕೆ ಬಳಸಲಾಗಿದೆ ಎನ್ನಲಾದ ವಾಹನಗಳ ಪತ್ತೆಗೆ ಅರಣ್ಯ ಅಧಿಕಾರಿಗಳು ಬಲೆಬೀಸಿದ್ದಾರೆ.
error: Content is protected !!

Join the Group

Join WhatsApp Group