ಕರಾಮುವಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಎರಡನೇ ಹಂತದ ನಿಬಂಧಗಳ ಪ್ರಕಟ

(ನ್ಯೂಸ್ ಕಡಬ) newskadaba.com ಮಂಗಳೂರು ,ಜ.28. ಕರಾಮುವಿ ನಿಲಯದ 2018-19 ನೇ ಶೈಕ್ಷಣಿಕ ಸಾಲಿನಲ್ಲಿ ಪ್ರವೇಶ ಪಡೆದಿರುವ ಪ್ರಥಮ ಬಿಎ/ಬಿ.ಕಾಂ, ಎಂ.ಎ.ಎ/ಎಂ.ಕಾಂ ಹಾಗೂ ಬಿ.ಎಲ್.ಐ.ಎಸ್ಸಿ ಪದವಿ ವಿದ್ಯಾರ್ಥಿಗಳಿಗೆ ಎರಡನೇ ಹಂತದ ನಿಬಂಧಗಳ ಪ್ರಶ್ನೆಗಳನ್ನು ಕರಾಮುವಿ  ವೆಬ್‍ಸೈಟ್www.ksoumysore.edu.in  ನಲ್ಲಿ ಪ್ರಕಟಿಸಿದ್ದು, ಪ್ರವೇಶಾತಿ ಪಡೆದಿರುವ ವಿದ್ಯಾರ್ಥಿಗಳು ನಿಬಂಧಗಳನ್ನು ಡೌನ್‍ಲೋಡ್ ಮಾಡಿಕೊಂಡು ವಿವಿ ಸೂಚನೆಯಂತೆ ಮಾರ್ಚ್ 15 ರೊಳಗೆ ಬಿ.ಎ/ಬಿ.ಕಾಂ ವಿದ್ಯಾರ್ಥಿಗಳು ಪ್ರಾದೇಶಿಕ ಕೇಂದ್ರದ ನಿರ್ದೇಶಕರಿಗೆ ಹಾಗೂ ಎಂ.ಎ.ಎ/ಎಂ.ಕಾಂ ಹಾಗೂ ಬಿ.ಎಲ್.ಐ.ಎಸ್ಸಿ ವಿದ್ಯಾರ್ಥಿಗಳು ಸಂಯೋಜನಾಧಿಕಾರಿಗಳುಮೌಲ್ಯಮಾಪನ ಘಟಕ ಪರೀಕ್ಷಾ ವಿಭಾಗ ಕರಾಮುವಿ ಮೈಸೂರು ಇಲ್ಲಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಪ್ರಾದೇಶಿಕ ನಿರ್ದೇಶಕರು ಕರಾಮುವಿ ಮಂಗಳೂರು, ಪ್ರಾದೇಶಿಕ ಕೇಂದ್ರ ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ (ರಿ) ಮೂರನೇ ಮಹಡಿ ಲೇಡಿಹಿಲ್ ಮಂಗಳೂರು-06 ಕಚೇರಿ ದೂರವಾಣಿ ಸಂಖ್ಯೆ 0824-2454697 ಸಂಪರ್ಕಿಸಲು ಪ್ರಾದೇಶಿಕ ನಿರ್ದೇಶಕರು ಡಾ ಬಿ.ಬಸವರಾಜು ಇವರ ಪ್ರಕಟಣೆ ತಿಳಿಸಿದೆ.
error: Content is protected !!
Scroll to Top