(ನ್ಯೂಸ್ ಕಡಬ) newskadaba.com ಕಡಬ, ಜ.28. ಉಪ್ಪಿನಂಗಡಿ: ಗಂಡಿಬಾಗಿಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಆರ್ಥಿಕ ವಹಿವಾಟು ಮತ್ತು ದಿನನಿತ್ಯದ ವ್ಯವಹಾರ ತಿಳಿಯಪಡಿಸುವ ಸಲುವಾಗಿ ಜ. 24ರಂದು ಮೆಟ್ರಿಕ್ ಮೇಳವನ್ನು ಆಯೋಜಿಸಲಾಯಿತು.
ರಾಮಕುಂಜ ಸಮೂಹ ಸಂಪನ್ಮೂಲ ಕೇಂದ್ರದ ಪ್ರಭಾರ ಸಮೂಹ ಸಂಪನ್ಮೂಲ ವ್ಯಕಿ ಮಹೇಶ್ ಮೆಟ್ರಿಕ್ ಮೇಳ ಉದ್ಘಾಟಿಸಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಬ್ದಲ್ ರಶೀದ್ ಹಾಜಿ ಬಡ್ಡಮೆ, ಸದಸ್ಯ ಬಾಬು ಅಗರಿ, ವಿದ್ಯಾರ್ಥಿ ಪೋಷಕರು ಮೇಳದಲ್ಲಿ ಭಾಗವಹಿಸಿದರು.ವಿದ್ಯಾರ್ಥಿಗಳು ಸುಮಾರು 15 ಬಗೆಯ ಅಂಗಡಿಗಳನ್ನು ಇಟ್ಟು ವ್ಯಾಪಾರ, ವ್ಯವಹಾರ ನಡೆಸಿದರು. ಶಾಲಾ ಮುಖ್ಯ ಶಿಕ್ಷಕ ಶೇಖರ್ ಕತ್ತಿ, ಶಿಕ್ಷಕಿಯರಾದ ಶ್ರೀಮತಿ ಪೂರ್ಣಿಮ, ಶ್ರೀಮತಿ ಚಿತ್ರಾವತಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.