ಕೋಚಕಟ್ಟೆ: ವಿದ್ಯುತ್ ಪರಿವರ್ತಕ ಉದ್ಘಾಟನೆ

(ನ್ಯೂಸ್ ಕಡಬ) newskadaba.com.ಕಡಬ,ಜ.26. ಕಡಬ ಮೆಸ್ಕಾಂ ವಿಭಾಗದ ಆಲಂಕಾರು ಶಾಖೆಯ ಪೆರಾಬೆ ಗ್ರಾಮದ ಕೊಚಕಟ್ಠೆ ಎಂಬಲ್ಲಿ ನೂತನವಾಗಿ ಅಳವಡಿಸಲಾದ ವಿದ್ಯುತ್ ಪರಿವರ್ತಕದ ಉದ್ಘಾಟನಾ ಸಮಾರಂಭ  ನಡೆಯಿತು.  ಪೆರಾಬೆ ಗ್ರಾ.ಪಂ.ಉಪಾಧ್ಯಕ್ಷ ಜನಾರ್ದನ ಶೆಟ್ಟಿ ಸುರುಳಿ ಉದ್ಘಾಟಿಸಿದರು. ಬಳಿಕ ಪೆರಾಬೆ ಗ್ರಾ.ಪಂ.ಸಭಾಂಗಣದಲ್ಲಿ ಗ್ರಾ.ಪಂ.ಸದಸ್ಯೆ ಅಮೃತ ರೈಯವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಮೆಸ್ಕಾಂ ಕಡಬ ವಿಭಾಗದ ಸಹಾಯಕ ಇಂಜಿನಿಯರ್ ಸಜಿಕುಮಾರ್‍ರವರು ಸಭಾ ಕಾರ್ಯಕ್ರಮ ಉದ್ಘಾಟಿಸಿದರು.    ಪೆರಾಬೆ ಗ್ರಾ.ಪಂ.ಸದಸ್ಯೆ ಬೇಬಿ.ಸಿ.ಪಾಟಾಲಿ, ಮೆಸ್ಕಾಂ ಆಲಂಕಾರು ಶಾಖಾಧಿಕಾರಿ ಗೌತಮ್ ಎಸ್., ಪ್ರಭಾರ ಪಿಡಿಒ ಲಲಿತಾ ಜಿ.ಡಿ.,ಯವರು ಶುಭಹಾರೈಸಿದರು.

Also Read  ಪಿಯು ಪರೀಕ್ಷೆ ಬರೆದಾಕೆಗೆ ಕೊರೊನಾ ಪಾಸಿಟಿವ್ !

 

ವಿದ್ಯುತ್ ಪರಿವರ್ತಕ ಅಳವಡಿಸಲು ಸಹಕರಿಸಿದ ಎಇಇ ಸಜಿಕುಮಾರ್, ಜೆಇ ಗೌತಮ್, ಪವರ್‍ಮ್ಯಾನ್‍ಗಳಾದ ಶಿವಾನಂದ, ಚಿದಾನಂದರವರಿಗೆ ಮೋನು ಕೋಚಕಟ್ಟೆಯವರು ಗೌರವಿಸಲಾಯಿತು.  ಅಬ್ಬಾಸ್ ಕುಂತೂರು ಸ್ವಾಗತಿಸಿದರು. ಗ್ರಂಥಾಲಯ ಮೇಲ್ವಿಚಾರಕಿ ಜಯ ಪ್ರಾರ್ಥಿಸಿದರು. ಗ್ರಾ.ಪಂ.ಸಿಬ್ಬಂದಿ ಪದ್ಮ ವಂದಿಸಿದರು. ಯಾಕೂಬ್ ಕೋಚಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

 

 

 

error: Content is protected !!
Scroll to Top