ಗೃಹರಕ್ಷಕ ದಳ ಕಚೇರಿಯಲ್ಲಿ ಗಣರಾಜ್ಯೋತ್ಸವ ಸಂಭ್ರಮ

(ನ್ಯೂಸ್ ಕಡಬ) newskadaba.com.ಕಡಬ,ಜ.26.ದಿನಾಂಕ 26.01.2019ನೇ ಶನಿವಾರ ದಂದು ಮೇರಿಹಿಲ್‍ನಲ್ಲಿರುವ ಗೃಹರಕ್ಷಕ ದಳ ಕಛೇರಿಯಲ್ಲಿ ಬೆಳಗ್ಗೆ 7.30ಕ್ಕೆ ಧ್ವಜಾರೋಹಣ ನಡೆಸಲಾಯಿತು. ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ| ಮುರಲೀ ಮೋಹನ್ ಚೂಂತಾರುರವರು ಧ್ವಜಾರೋಹಣ ಮಾಡಿ ಮಾತನಾಡಿ ಭಾರತ ಅತೀ ದೊಡ್ಡ ಪ್ರಜಾಪ್ರಭುತ್ವವಾಗಿದ್ದು, ರಾಜ್ಯಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳ ಸರಿಯಾಗಿ ಪೂರಕವಾಗಿ ಕೆಲಸ ಮಾಡಿದರೆ ಮಾತ್ರ ಪ್ರಜಾಪ್ರಭುತ್ವದ ಮೌಲ್ಯವನ್ನು ಎತ್ತಿ ಹಿಡಿಯಲು ಸಾಧ್ಯ, ಗೃಹರಕ್ಷಕರು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅರ್ಥ ಮಾಡಿಕೊಂಡು ಗೌರವಿಸಬೇಕು ಹಾಗಾದಲ್ಲಿ ಸುಂದರ ಸಧೃಢ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಕರೆ ನೀಡಿದರು.

ಅತಿಥಿಗಳಾಗಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀ ವಿಜಯ್ ವಿಷ್ಣು ಮಯ್ಯ ಇವರು ಗೌರವ ವಂದನೆ ಸ್ವೀಕರಿಸಿ ಮಾತನಾಡಿ ನೆಹರು, ಗಾಂಧಿ, ಸರ್ಧಾರ್ ವಲ್ಲಭ ಬಾಯಿ ಪಟೇಲ್ ಇವರ ತ್ಯಾಗ ಮತ್ತು ಪರಿಶ್ರಮದಿಂದ ನಾವು ಇವತ್ತು ಸುರಕ್ಷಿತ ಭಾರತದಲ್ಲಿ ನೆಮ್ಮದಿಯಿಂದ ಬದುಕಲು ಸಾದ್ಯವಾಗಿದೆ ಎಂದು ನುಡಿದರು. ಎಲ್ಲಾ ಗೃಹರಕ್ಷಕರಿಗೂ ಗಣರಾಜ್ಯೋತ್ಸವ  ಶುಭಾಶಯ ಹಾರೈಸಿದರು. ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್, ಮಂಗಳೂರಿನ ಕಾರ್ಯದರ್ಶಿಗಳಾದ ಹೇಮಾ ರಾವ್, ಲಯನೆಸ್ ಕ್ಲಬ್, ಮಂಗಳೂರು ಅಧ್ಯಕ್ಷರಾದ ಜ್ಯೋತಿ ಶೆಟ್ಟಿ, ಲಯನೆಸ್ ಸದಸ್ಯರಾದ ನಾನ್ಸಿ ಹಾಗೂ ಪಿಎಸ್‍ಎನ್‍ನ ಸರ್ವೀಸ್ ಹೆಡ್ ಗುರುರಾಜ್, ಉಪ ಸಮಾದೇಷ್ಟರಾದ ರಮೇಶ್, ಕಚೇರಿ ಪ್ರಥಮ ದರ್ಜೆ ಸಹಾಯಕರಾದ ಅನಿತಾ.ಟಿ.ಎಸ್, ಹಾಗೂ ಮಂಗಳೂರು ಘಟಕದ ಘಟಕಾಧಿಕಾರಿಯಾದ ಮಾರ್ಕ್‍ಶೇರ್, ಪುತ್ತೂರು ಘಟಕಾಧಿಕಾರಿ, ಅಭಿಮನ್ಯು ರೈ, ಪಣಂಬೂರು ಘಟಕಾಧಿಕಾರಿಯಾದ ಹರೀಶ್ ಆಚಾರ್ ಹಾಗೂ ಗೃಹರಕ್ಷಕರು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Also Read  ಪಂಜ :ಕೊರೋನಾ ಸೋಂಕಿತನ ಮನೆ ಸೀಲ್ ಡೌನ್

 

error: Content is protected !!
Scroll to Top