ಕಡಬ : ಸರಸ್ವತೀ ವಿದ್ಯಾಲಯ 70ನೇ ಗಣರಾಜ್ಯೋತ್ಸವ ಆಚರಣೆ

(ನ್ಯೂಸ್ ಕಡಬ) newskadaba.com.ಕಡಬ,ಜ.26.ದಿನಾಂಕ 26.01.2019ನೇ ಶನಿವಾರದಂದು ಸರಸ್ವತೀ ವಿದ್ಯಾಲಯದಲ್ಲಿ ಎಲ್ಲಾ ಸಮೂಹ ಸಂಸ್ಥೆಗಳು ಸೇರಿ 70ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಮುಖ್ಯ ಅಥಿತಿಯಾಗಿ ಶ್ರೀ ಕುಂಞಣ್ಣ ಕುದ್ರಡ್ಕ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಇವರು ಧ್ವಜಾರೋಹಣ ಮಾಡಿ ಗಣರಾಜ್ಯೋತ್ಸವದ ಶುಭಾಶಯ ಹಾಗೂ ಸಂವಿಧಾನಕ್ಕೆ ಗೌರವ ನೀಡುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.

ವೇದಿಕೆಯಲ್ಲಿ ಶಾಲಾ ಸಂಚಾಲಕರು ಶ್ರೀ ವೆಂಕಟರಮಣ ರಾವ್ , ಪ್ರಾಥಮಿಕ ವಿಭಾಗದ ಮುಖ್ಯಗುರುಗಳು ಶ್ರೀ ಮಾಧವ ಕೆ, ಪ್ರೌಢ ವಿಭಾಗದ ಮುಖ್ಯಸ್ಥೆ ಶ್ರೀಮತಿ ಶೈಲಶ್ರೀ, ಕಾಲೇಜು ವಿಭಾಗದ ಪ್ರಭಾರ ಪ್ರಾಂಶುಪಾಲರು ಶ್ರೀಮತಿ ರಮ್ಯ ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಶ್ರೀ ಮಾಧವ ಕೆ ಸ್ವಾಗತಿಸಿ, ಶ್ರೀಮತಿ ಶೈಲಶ್ರೀ ವಂದಿಸಿ, ಕುಮಾರಿ ವಾಹಿನಿ ಕಾರ್ಯಕ್ರಮ ನಿರೂಪಿಸಿದರು.

Also Read  ಕಾಲಿಲ್ಲದಿದ್ದರೂ ಕನಸು ಕೈ ಹಿಡಿತು  ➤ ತಿಂಗಳಿಗೆ 1 ಲಕ್ಷ ಆದಾಯಗಳಿಸ್ತಿರೋ ರೈತ 

 

 

error: Content is protected !!
Scroll to Top