ಕಡಬ ಸಿ.ಎ ಬ್ಯಾಂಕ್ ಮರ್ದಾಳ ಶಾಖೆಯಲ್ಲಿ ಸರ್ವರ್ ಸಮಸ್ಯೆ► ಐತ್ತೂರು ಗ್ರಾಮದ ಪಡಿತರದಾರರಿಗೆ ಪಡಿತರ ಸಾಮಾಗ್ರಿ ವಿತರಣೆ ಸಮಸ್ಯೆ ಸರಿಪಡಿಸಲು ಆಗ್ರಹ

(ನ್ಯೂಸ್ ಕಡಬ) newskadaba.com.ಕಡಬ,ಜ.26. ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮರ್ದಾಳ ಶಾಖೆಯಲ್ಲಿ ಸರ್ವರ್ ಸಮಸ್ಯೆಯಿಂದಾಗಿ ಐತ್ತೂರು ಗ್ರಾಮದ ಪಡಿತರದಾರರಿಗೆ ಪಡಿತರ ವಿತರಣೆ ಸರಿಯಾಗಿ ಆಗುತ್ತಿಲ್ಲ, ಕೂಡಲೇ ಸಮಸ್ಯೆ ಸರಿಪಡಿಸಬೇಕೆಂದು ಪಡಿತರದಾರರು ಆಗ್ರಹಿಸಿದ್ದಾರೆ.ಐತೂರು ಗ್ರಾಮದ ಸುಂಕದಕಟ್ಟೆ ಪಡಿತರ ಶಾಖಾ ಕಚೇರಿಯಲ್ಲಿ ಪಡಿತರ ದೊರೆಯದೆ ಕಂಗಾಲಾಗಿರುವ ಗ್ರಾಹಕರು ಪಡಿತರಕ್ಕಾಗಿ ಆಗ್ರಹಿಸುತ್ತಿದ್ದು ತಮ್ಮ ಪಡಿತರ ಪಡೆಯಲು ಮರ್ದಾಳ ಶಾಖೆಯಲ್ಲಿ ಹೋಗಿ ತಂಬು ನೀಡಿ ಬರಬೇಕಾಗಿದ್ದು ಯಾವಾಗಲು ತಂಬು ಹಾಕಲು ಸರ್ವರ್ ಸರಿ ಇಲ್ಲದಿರುವುದರಿಂದ ಸುಂಕದಕಟ್ಟೆ ಭಾಗದ ಪಡಿತರ ಗ್ರಾಹಕರು ಪಡಿತರ ಸಿಗದೆ ಪರದಾಡುತ್ತಿದ್ದಾರೆ.

 

ಪ್ರತೀ ತಿಂಗಳ 20 ತಾರೀಕಿನ ಬಳಿಕ ಶಾಖೆಗೆ ಪಡಿತರ ಬರುತ್ತಿದ್ದು ಮರ್ದಾಳ, 102ನೆಕ್ಕಿಲಾಡಿ, ಬಂಟ್ರ ಹಾಗೂ ಐತ್ತೂರು ಗ್ರಾಮದ ಕೆಲವು ಪಡಿತರದಾರರಿಗೆ ಮರ್ದಾಳ ಶಾಖೆಯಲ್ಲಿ ಪಡಿತರ ವ್ಯವಸ್ಥೆ ಮಾಡಲಾಗಿದ್ದು ಪಡಿತರ ಶಾಖೆಗೆ ಬಂದಂತೆ ಇವರು ಬಂದು ಶಾಖೆಯಲ್ಲಿ ತಂಬು ನೀಡಿ ಪಡಿತರ ಪಡೆಯುತ್ತಿದ್ದಾರೆ. ಆದರೆ ಸುಂಕದಕಟ್ಟೆ ಭಾಗದವರು ತಮಗೆ ಮರ್ದಾಳ ಶಾಖೆಗೆ ಬಂದು ಪಡಿತರ ಪಡೆಯಲು ದೂರವಾಗುತ್ತದೆ. ಎಂದು ತಮ್ಮ ಅನುಕೂಲಕ್ಕೆ ಸುಂಕದ ಕಟ್ಟೆಯಲ್ಲಿಯೇ ಪಡಿತರ ವ್ಯವಸ್ಥೆ ಮಾಡಬೇಕೆಂದು ಕಡಬ ಸಿ.ಎ ಬ್ಯಾಂಕ್‍ನಲ್ಲಿ ಆಗ್ರಹಿಸಿದಂತೆ ಸುಂಕದ ಕಟ್ಟೆಯಲ್ಲಿ ಪಡಿತರ ವ್ಯವಸ್ಥೆ ಮಾಡಲಾಗಿದೆ.

Also Read  ಧರ್ಮಸ್ಥಳ: ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ ➤ 15ಕ್ಕೂ ಅಧಿಕ ಮಂದಿಗೆ ಗಾಯ

ಆದರೆ ಗ್ರಾಹಕರು ಮರ್ದಾಳಕ್ಕೆ ಬಂದು ತಂಬು ಮಾಡಿ ಸುಂಕದ ಕಟ್ಟೆಯಲ್ಲಿ ಹೋಗಿ ಪಡಿತರ ಪಡೆದುಕೊಳ್ಳಬೇಕಾಗಿದೆ. ಈ ಬಗ್ಗೆ ಕೂಡಾ ಅಲ್ಲಿಯ ಗ್ರಾಹಕರು ಕಳೆದೊಂದು ವರ್ಷದಿಂದ ಸುಂಕದಕಟ್ಟೆಯಲ್ಲಿ ತಂಬಿನ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದ್ದು ಅಲ್ಲಿ ತಂಬಿನ ವ್ಯವಸ್ಥೆಗೆ ನೆಟ್‍ವರ್ಕ್ ಸಿಗದ ಕಾರಣ ಮರ್ದಾಳದಲ್ಲಿಯೇ ಗ್ರಾಹಕರು ಬಂದು ತಂಬು ನೀಡಿ ಐತೂರು ಗ್ರಾಮದ ಸುಂಕದ ಕಟ್ಟೆಯಲ್ಲಿ ಪಡಿತರ ಪಡೆದುಕೊಳ್ಳುತ್ತಿದ್ದಾರೆ. ಆದರೆ ಪ್ರತೀ ತಿಂಗಳು 20 ತಾರೀಕಿನ ನಂತರ ಪಡಿತರ ಬರುತ್ತಿದ್ದು ಸುಂಕದ ಕಟ್ಟೆ ಭಾಗದವರಿಗೆ ವಾರದಲ್ಲಿ ಒಂದು ದಿನ ಗುರುವಾರ ಮಾತ್ರ ಸುಂಕದ ಕಟ್ಟೆಯಲ್ಲಿ ಪಡಿತರ ವಿತರಿಸುವುದರಿಂದ ಗ್ರಾಹಕರು ಮರ್ದಾಳದಲ್ಲಿ ಬಂದು ತಂಬಿಗಾಗಿ ಕ್ಯೂ ನಿಂತು ದಿನ ಪೂರ್ತಿ ಕಾದು ಕಾದು ನೆಟ್‍ವರ್ಕ್ ಇಲ್ಲದೆ ಈಚೆ ತಂಬು ಇಲ್ಲ ಆಚೆ ಪಡಿತರ ವೂ ಇಲ್ಲದೆ ಪರದಾಡುವಂತಾಗಿದೆ. ಪಡಿತರ ಸಿಬ್ಬಂದಿಗಳ ಮೇಲೆ ಗ್ರಾಹಕರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

Also Read  ಧಾರ್ಮಿಕ ನಂಬಿಕೆಗೆ ಘಾಸಿ ➤ ವಿಡಿಯೋ ಹರಿಬಿಟ್ಟ ನಾಲ್ವರ ಬಂಧನ

error: Content is protected !!
Scroll to Top