ಕಾಂಗ್ರೆಸ್‌ ಪಕ್ಷವನ್ನು ಮುಗಿಸಲು ಸಿದ್ದರಾಮಯ್ಯ ಒಬ್ಬರೇ ಸಾಕು► ಅವರ ವಿರುದ್ಧ ನನ್ನ ಹೋರಾಟ ಮುಂದುವರಿಯುತ್ತಲೇ ಇರುತ್ತದೆ : ಪೂಜಾರಿ

(ನ್ಯೂಸ್ ಕಡಬ) newskadaba.com.ಮಂಗಳೂರು,ಜ.25.ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜನಾರ್ದನ ಪೂಜಾರಿ  ನಡುವಿನ ಮುಸುಕಿನ ಗುದ್ದಾಟ ಮುಂದುವರಿಯುತ್ತಿದೆ. ಸಿದ್ದರಾಮಯ್ಯ ವಿರುದ್ಧ ಟೀಕೆಗಳನ್ನು ಮಾಡುತ್ತಿರುವ ಜನಾರ್ದನ ಪೂಜಾರಿ ಮತ್ತೆ ಅದನ್ನು ಮುಂದುವರಿಸಿದ್ದಾರೆ. ಗುರುವಾರ ಮಂಗಳೂರಿನಲ್ಲಿ ಮಾತನಾಡಿದ ಜನಾರ್ದನ ಪೂಜಾರಿ, ಕಾಂಗ್ರೆಸ್‌  ಪಕ್ಷವನ್ನು ಮುಗಿಸಲು ಸಿದ್ದರಾಮಯ್ಯ ಬಂದಿದ್ದಾರೆ ಎಂದು ವಾಗ್ಬಾಣ ಬಿಟ್ಟಿದ್ದಾರೆ.

ಪ್ರಸ್ತುತ ರಾಜಕೀಯ ತೀರಾ ಕೊಳಕಾಗಿದೆ. ಬಿಜೆಪಿಯ ಆಪರೇಷನ್ ಕತ್ಯಕ್ಕೆ ಕಾಂಗ್ರೆಸ್ ಶಾಸಕರು ದಾಳವಾಗಿದ್ದಾರೆ. ಇದರಿಂದ ಶಾಸಕರೇ ಬಡಿದಾಡಿಕೊಳ್ಳುತ್ತಿದ್ದಾರೆ. ಈಗ ಅವರವರೇ ಏಟು ತಿನ್ನುತ್ತಿದ್ದಾರೆ, ಇನ್ನು ಜನರೇ ಅವರಿಗೆ ಹೊಡೆಯುತ್ತಾರೆ ಎಂದು ಪೂಜಾರಿ ಖಾರವಾಗಿ ಉತ್ತರಿಸಿದರು.

Also Read  ಮಂಗಳೂರು: ಲಂಚ ಪಡೆಯುತ್ತಿದ್ದ ದ್ವಿತೀಯ ದರ್ಜೆ ಸಿಬ್ಬಂದಿಯ ಬಂಧನ

ಕಾಂಗ್ರೆಸ್‌ ಪಕ್ಷವನ್ನು ಸಿದ್ದರಾಮಯ್ಯ ಮುಗಿಸುತ್ತಾರೆ. ಪಕ್ಷವನ್ನು ಮುಗಿಸಲು ಅವರೊಬ್ಬರೇ ಸಾಕು. ಅವರ ವಿರುದ್ಧ ನನ್ನ ಹೋರಾಟ ಮುಂದುವರಿಯುತ್ತಲೇ ಇರುತ್ತದೆ ಎಂದು ಪೂಜಾರಿ ಹೇಳಿದರು. ಸಿದ್ದರಾಮಯ್ಯ ಅವರಧೋರಣೆಯೇ ಕಾಂಗ್ರೆಸ್‌ ಶಾಸಕರಲ್ಲಿ ಅಸಮಾಧಾನ ಹುಟ್ಟು ಹಾಕಿದೆ ಎಂದು ಟೀಕಿಸಿದರು.

 

error: Content is protected !!
Scroll to Top