ಕುಂತೂರು ಮಾರ್ ಇವಾನಿಯೋಸ್ ಕಾಲೇಜಿನಲ್ಲಿ ಶಿಕ್ಷಕ- ರಕ್ಷಕ ಸಂಘದ ಸಭೆ

(ನ್ಯೂಸ್ ಕಡಬ) newskadaba.com ಕಡಬ, ಜು.30. ವಿದ್ಯಾರ್ಥಿಗಳ ಉತ್ತಮ ಶೈಕ್ಷಣಿಕ ಸಾಧನೆಗೆ ಹೆತ್ತವರು ಮತ್ತು ಶಿಕ್ಷಕರ ನಿರಂತರ ಪ್ರೊತ್ಸಾಹ ಅಗತ್ಯ. ವಿದ್ಯಾರ್ಥಿಗಳು ಪ್ರಸಕ್ತ ಸ್ಪರ್ಧಾತ್ಮಕ ಯುಗದಲ್ಲಿ ಸವಾಲುಗಳನ್ನು ಸಮರ್ಥವಾಗಿ ಎದುರಿಸುವಲ್ಲಿ ಶಿಕ್ಷಣ ಸಂಸ್ಥೆಯ ತರಬೇತಿಯೊಂದಿಗೆ ಹೆತ್ತವರ ಸೂಕ್ತ ಮಾರ್ಗದರ್ಶನವೂ ಬೇಕು ಎಂದು ಸಾಮಾಜಿಕ ಕಾರ್ಯಕರ್ತೆ ಜೋಹಾರಾ ನಿಸಾರ್ ಅಹ್ಮದ್ ಹೇಳಿದರು.

ಅವರು ಕುಂತೂರು ಮಾರ್ ಇವಾನಿಯೋಸ್ ಕಾಲೇಜಿನ ಶಿಕ್ಷಕ-ರಕ್ಷಕ ಸಂಘದ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ವಿದ್ಯಾರ್ಥಿಗಳು ಗುರುಹಿರಿಯರಿಗೆ ಗೌರವ ಕೊಡುವುದರೊಂದಿಗೆ ಸಚ್ಚಾರಿತ್ರ್ಯವಂತರಾಗಿ ಉತ್ತಮ ನಡೆ-ನುಡಿಯನ್ನು ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳ ಜೊತೆಗೆ ಪೋಷಕರು ತಮ್ಮ ಸಮಯವನ್ನು ಬಿಡುವು ಮಾಡಿಕೊಂಡು ಪ್ರೀತಿಯಿಂದ, ಆತ್ಮೀಯವಾಗಿ, ಸಮಾಲೋಚಿಸುತ್ತಾ ಅವರ ಭಾವನೆಗಳಿಗೆ ಸೂಕ್ತವಾಗಿ ಸ್ಪಂದಿಸುತ್ತಾ ಅವರ ಸರ್ವತೋಮುಖ ಬೆಳವಣಿಗೆಗೆ ಮಾರ್ಗದರ್ಶಕರಾಗಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಪೂರಕವಾಗಿ ಪೋಷಕ ಹಾಗೂ ಶಿಕ್ಷಕ ಸಂಘವು ಮಾಧ್ಯಮವಾಗಬೇಕು ಎಂದರು. ಕಾಲೇಜಿನ ಪ್ರಾಂಶುಪಾಲ  ವಂ|ರೆ|ಫಾ|ಫಿಲಿಪ್ ನೆಲ್ಲಿವಿಳ ಸಂಘದ ಅಧ್ಯಕ್ಷತೆ ವಹಿಸಿ, ಸಂಘದ ಬೆಳವಣಿಗೆಗೆ ಪೋಷಕ ಸಂಘದ ಮಹತ್ವ ಮತ್ತು ಪೋಷಕರ ಜವಾಬ್ದಾರಿ ಕುರಿತಂತೆ ಮಾಹಿತಿಯನ್ನು ನೀಡಿದರು. ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ  ಇಸ್ಮಾಯಿಲ್ ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರಘುನಂದನ್ ಕೆ. ಸ್ವಾಗತಿಸಿದರು. ಉಪನ್ಯಾಸಕಿ ಸಿಂಧಿಯಾ ಸುಹಾನ್ ವಂದಿಸಿದರು. ಗೋಪಿಕಾ ಕಾರ್ಯಕ್ರಮ ನಿರೂಪಿಸಿದರು.

error: Content is protected !!

Join the Group

Join WhatsApp Group