ಪತ್ರಿಕೋದ್ಯಮ ಪದವಿ ಅಥವಾ ಸ್ನಾತಕೋತ್ತರ ಪದವೀಧರರಿ0ದ► ಕ್ಷೇತ್ರ ಪ್ರಚಾರ ಹಾಗೂ ಮಾಧ್ಯಮ ತರಬೇತಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com .ಮಂಗಳೂರು, ಜ.25. ವಾರ್ತಾ ಮತ್ತು ಸಾರ್ವಜನಿಕ ಸ0ಪರ್ಕ ಇಲಾಖೆಯ ಮ0ಗಳೂರು  ಕಚೇರಿಯಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಯ ಮೂಲಕ  ಎಸ್.ಸಿ.ಪಿ ಯೋಜನೆಯಡಿ ಪರಿಶಿಷ್ಟ ಜಾತಿಗೆ ಸೇರಿದ ಪತ್ರಿಕೋದ್ಯಮ ಪದವಿ ಅಥವಾ ಸ್ನಾತಕೋತ್ತರ ಪದವೀಧರರಿ0ದ ಕ್ಷೇತ್ರ ಪ್ರಚಾರ ಹಾಗೂ ಮಾಧ್ಯಮ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅಭ್ಯರ್ಥಿಯು ಕನಾಟಕ ರಾಜ್ಯದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿ0ದ ಪತ್ರಿಕೋದ್ಯಮ/ಇಲೆಕ್ಟ್ರಾನಿಕ್ ಮಾಧ್ಯಮದಲ್ಲಿ  ಪದವಿ ಅಥವಾ ಸ್ನಾತ್ತಕೋತ್ತರ ಪದವಿ ಪಡೆದಿರಬೇಕು. ಸ್ನಾತ್ತಕೋತ್ತರ ಪದವಿ ಪಡೆದ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ ಪದವೀಧರ ಅಭ್ಯರ್ಥಿಗಳನ್ನು ಆಯ್ಕೆಗೆ ಪರಿಗಣಿಸಲಾಗುವುದು. ಅಭ್ಯರ್ಥಿಗಳು ಪಡೆದಿರುವ ಅ0ಕಗಳ ಮೆರಿಟ್ ಆಧಾರದಲ್ಲಿ ಆಯ್ಕೆ ಮಾಡಲಾಗುವುದು. . ಆಯ್ಕೆಯಾದವರಿಗೆ ಮಾಸಿಕ ರೂ. 15 ಸಾವಿರ ಗೌರವಧನ ನೀಡಲಾಗುವುದು. ಇಲಾಖೆಯ ಕ್ಷೇತ್ರಪ್ರಚಾರ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ 6 ತಿ0ಗಳ ಕಾಲ ಕಾರ್ಯನಿರ್ವಹಿಸಬೇಕಾಗುತ್ತದೆ.ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಲು ಜನವರಿ 31 ಕಡೆಯ ದಿನ. ಅರ್ಜಿ ಹಾಗೂ ಹೆಚ್ಚಿನ ಮಾಹಿತಿಗೆ  ವಾರ್ತಾ ಮತ್ತು ಸಾರ್ವಜನಿಕ ಸ0ಪರ್ಕ ಇಲಾಖೆ, 2 ನೇ ಮಹಡಿ, ಪಿಡಬ್ಲ್ಯುಡಿ ಕಟ್ಟಡ, ನೆಹರು ಮೈದಾನ ಎದುರು, ಮ0ಗಳೂರು ( ದೂರವಾಣಿ 0824-2424254 )ಇಲ್ಲಿಗೆ ಸ0ಪರ್ಕಿಸಬಹುದು ಎ0ದು ಜಿಲ್ಲಾ ವಾರ್ತಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

error: Content is protected !!
Scroll to Top