(ನ್ಯೂಸ್ ಕಡಬ) newskadaba.com .ಮಂಗಳೂರು, ಜ.25.ಕಡಬ ಸರಕಾರಿ ಪದವಿ ಪೂರ್ವ ಕಾಲೇಜಿನ ಕಟ್ಟಡ ದುರಸ್ಥಿಗೆ ಮಂಜೂರಾಗಿದ್ದ ರೂ. 1 ಕೋಟಿ ಹಣವನ್ನು ಸರಕಾರದ ಸೂಚನೆಯಂತೆ ಜಿಲ್ಲಾಧಿಕಾರಿಯವರು ತಡೆಹಿಡಿದಿದ್ದರು, ಈ ಸಂಬಂಧ ಮುಖ್ಯಮಂತ್ರಿಗಳಿಗೆ ಮಾಡಿರುವ ಮನವಿಗೆ ಸ್ಪಂದನೆ ದೊರೆತಿದ್ದು ಕೂಡಲೇ ಕಾಮಗಾರಿ ಪ್ರಾರಂಭಿಸಲು ಆದೇಶಿಸಿದ್ದಾರೆ ಎಂದು ಕಡಬ ತಾಲೂಕು ಜೆಡಿಎಸ್ ಅಧ್ಯಕ್ಷ ಸಯ್ಯದ್ ಮೀರಾ ಸಾಹೇಬ್ ತಿಳಿಸಿದ್ದಾರೆ.
ಹೇಳಿಕೆ ನೀಡಿರುವ ಅವರುಕಡಬ ಸರಕಾರಿ ಪ.ಪೂ.ಕಾಲೇಜಿನ ಶೌಚಾಲಯ, ಶಾಲಾ ಕೊಠಡಿಗಳ ಕಾಮಗಾರಿ ಕೈಗೊಳ್ಳವರೆಗೆ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ರೂ. 1 ಕೋಟಿ ಮಂಜೂರಾಗಿದ್ದು, ಸರಕಾರದ ಮೇಲಾಧಿಕಾರಿಗಳ ಸೂಚನೆಯಂತೆ ಅನುದಾನವನ್ನು ಜಿಲ್ಲಾಧಿಕಾರಿಗಳು ತಡೆಹಿಡಿದಿದ್ದರು. ಇದು ಸರಯಲ್ಲ ಕಾಲೇಜು ಅಭಿವೃದ್ಧಿಗೆ ಬಿಡುಗಡಯಾದ ಅನುದಾನವನ್ನು ವಾಪಾಸ್ಸು ಪಡೆಯುವುದನ್ನು ತಕ್ಷಣ ತಡೆಹಡಿಯಬೇಕು ಎಂದು ಮುಖ್ಯಮಂತ್ರಿ ಎಚ್.ಡಿ,ಕುಮಾರಾ ಸ್ವಾಮಿ ಹಾಗೂ ಹಾಗೂ ಇತ್ತೀಚೆಗೆ ಕಡಬಕ್ಕೆ ಆಗಮಿಸಿದ್ದ ಉನ್ನತ ಶಿಕ್ಷಣ ಸಚಿವರಿಗೆ ಜಿ.ಟಿ.ದೇವೇ ಗೌಡ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಇದಕ್ಕೆ ಸ್ಪಂದಿಸಿರುವ ಸರಕಾರ ಒಂದು ಕೋಟಿ ರೂ ಅನುದಾನಕ್ಕೆ ಇದ್ದ ತಡೆಯಾಜ್ಞೆಯನ್ನು ತೆರವುಗೊಳಿಸಿ, ಕಟ್ಟಡ ಕಾಮಗಾರಿಯನ್ನು ಕೂಡಲೇ ಪ್ರಾರಂಭಿಸುವಂತೆ ದ.ಕ. ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿಗಳ ಸಚಿವಾಲದಿಂದ ಆದೇಶವಾಗಿದೆ ಎಂದು ತಿಳಿಸಿದ್ದಾರೆ.