ಕುಟ್ರುಪಾಡಿ ಗ್ರಾ.ಪಂ. ವತಿಯಿಂದ ದೇರಾಜೆ ಕ್ರಾಸ್‍ನಲ್ಲಿ ಸ್ವಚ್ಚತೆ

(ನ್ಯೂಸ್ ಕಡಬ) newskadaba.com ಕಡಬ, ಜ.23. ಮಂಗಳೂರು ರಾಮಕೃಷ್ಣ ಮಿಷನ್ ಆಶ್ರಯದಲ್ಲಿ ಪ್ರತೀ ತಿಂಗಳ ಒಂದು ಭಾನುವಾರ ನಡೆಯುವ ಸ್ವಚ್ಚತಾ ಕಾರ್ಯಕ್ರಮ ಕುಟ್ರುಪಾಡಿ ಗ್ರಾ.ಪಂ. ವತಿಯಿಂದ ಬಲ್ಯ ಗ್ರಾಮದ ದೇರಾಜೆ ಕ್ರಾಸ್‍ನಲ್ಲಿ ಜ.20ರಂದು ನಡೆಯಿತು.

ದೇರಾಜೆ ಕ್ರಾಸ್‍ಬಳಿಯ ಪರಿಸರವನ್ನು ಸ್ವಚ್ಚಗೊಳಿಸಲಾಯಿತು. ಗ್ರಾ.ಪಂ. ಅಧ್ಯಕ್ಷೆ ವಿದ್ಯಾ ಕೆ.ಗೋಗಟೆ, ಉಪಾಧ್ಯಕ್ಷ ಆನಂದ ಪೂಜಾರಿ, ಸದಸ್ಯರಾದ ಮಹಮ್ಮದ್ ಆಲಿ, ಶಿವಪ್ರಸಾದ್ ಪುತ್ತಿಲ, ತನಿಯಾ ಸಂಪಡ್ಕ, ದೇವಯ್ಯ ಪನ್ಯಾಡಿ, ಯಶೋಧ, ಜಾನಕಿ, ಗೀತಾ, ಹೊಸಮಠ ಹಾ.ಉ.ಸ.ಸಂಘದ ಅಧ್ಯಕ್ಷ ಕಿರಣ್ ಗೋಗಟೆ, ಕುಟ್ರುಪಾಡಿ ಸಿಎ ಬ್ಯಾಂಕ್ ನಿರ್ದೇಶಕ ಶಶಾಂಕ್ ಗೋಖಲೆ, ಗ್ರಾ.ಪಂ.ಸಿಬ್ಬಂದಿಳಾದ ಅಂಗು, ಜಿತೇಶ್, ತಾರನಾಥ್, ಉಮೇಶ್, ಜನಾರ್ದನ, ಆಶಾಕಾರ್ಯಕರ್ತೆ ಜಯಶ್ರೀ, ಆದರ್ಶ ಸ್ಪೊಟ್ರ್ಸ್ ಕ್ಲಬ್, ಯುವಕ ಮಂಡಲದ ಪದಾಧಿಕಾರಿಗಳು, ಸದಸ್ಯರು, ಆಟೋ ಚಾಲಕ, ಮಾಲಕರು, ಗ್ರಾಮಸ್ಥರು ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

Also Read  ಖಾಸಗಿ ಬಸ್ ಹಾಗೂ ಆಟೋ ರಿಕ್ಷಾ ನಡುವೆ ಢಿಕ್ಕಿ ➤ ಇಬ್ಬರಿಗೆ ಗಾಯ

error: Content is protected !!
Scroll to Top